ಮೈಸೂರು – ಭೂಮಿಗೀತದಲ್ಲಿ `ಪರ್ವ’ ಪ್ರದರ್ಶನಾರಂಭ

302
Share

ಭೂಮಿಗೀತದಲ್ಲಿ `ಪರ್ವ’ ಪ್ರದರ್ಶನಾರಂಭ
ಮೈಸೂರು, – ರಂಗಾಯಣ ಮೈಸೂರು `ಪರ್ವ’ ರಂಗಪಸ್ತುತಿಯ ನಿರಂತರ ರಂಗಪ್ರದರ್ಶನವನ್ನು ಮಾರ್ಚ್ 25, 26 ಮತ್ತು 27 ತಿಂಗಳಲ್ಲಿ ಮೂರು ದಿನ ಸಂಚಿಕೆಗಳಾಗಿ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ರಂಗಾಯಣ ಮೈಸೂರು `ಪರ್ವ’ ರಂಗಪಸ್ತುತಿಯ ವಿಶೇಷ ಪ್ರದರ್ಶನದ ಅಭೂತಪೂರ್ವ ಯಶಸ್ಸಿನ ನಂತರ `ಪರ್ವ’ದ ಮಹಾರಂಗಪಸ್ತುತಿಯ ನಿರಂತರ ರಂಗಪ್ರದರ್ಶನಕ್ಕೆ ಹೆಜ್ಜೆ ಇಟ್ಟಿದ್ದು, 2021ರ ಮಾರ್ಚ್ 25 ಗುರುವಾರದಂದು ಪ್ರದರ್ಶನ ನೀಡಲಿದ್ದಾರೆ. ಮಾರ್ಚ್ 25 ರಂದು ಸಂಜೆ 6.30ಕ್ಕೆ `ಆದಿ ಪರ್ವ’ ನಾಟಕ ಸಂಚಿಕೆಯ ಮಧ್ಯಾಹ್ನ 2 ಗಂಟೆ 45 ನಿಮಿಷ, ಮಾರ್ಚ್ 26 ರಂದು ಸಂಜೆ 6.30ಕ್ಕೆ `ನಿಯೋಗ ಪರ್ವ’ ನಾಟಕ ಸಂಚಿಕೆಯ ಅವಧಿ 2 ಗಂಟೆ 15 ನಿಮಿಷ, ಮಾರ್ಚ್ 27 ರಂದು ಸಂಜೆ 6.30ಕ್ಕೆ `ಯುದ್ಧ ಪರ್ವ’ ನಾಟಕ ಸಂಚಿಕೆಯ ಅವಧಿ 3 ಗಂಟೆ. ಈ ಎಲ್ಲಾ ಸಂಚಿಕೆಯ ನಾಟಕಗಳ ಮಧ್ಯೆ 10 ನಿಮಿಷಗಳ ಕಾಲ ವಿರಾಮದೊಂದಿಗೆ ಈ ಮೂರು ದಿನ ಸಂಚಿಕೆಗಳಾಗಿ ಪ್ರದರ್ಶನಗೊಳ್ಳಲಿದೆ.
2021 ಮಾರ್ಚ್ 28 ರಂದು ಭಾನುವಾರ `ಪರ್ವ’ ಮಹಾರಂಗಪಸ್ತುತಿ ಬೆಳಗ್ಗೆ 10 ಗಂಟೆಗೆ. ಪೂರ್ಣ ನಾಟಕದ ಅವಧಿ 8 ಗಂಟೆ ಅವಧಿಯದ್ದಾಗಿರುತ್ತದೆ. ಮಧ್ಯಾಹ್ನದ 30 ನಿಮಿಷಗಳ ಊಟದ ವಿರಾಮ ಸೇರಿ 10 ನಿಮಿಷಗಳ ನಾಲ್ಕು ವಿರಾಮಗಳಿರುತ್ತವೆ. ಈಗಾಗಲೇ 27 ಮತ್ತು 28ರ ಪ್ರದರ್ಶನಕ್ಕೆ ರಂಗಮಂದಿರ ಭರ್ತಿಯಾಗಿದೆ.
ಇನ್ನು ಮುಂದೆ ಪ್ರತಿ ವಾರದ ಶನಿವಾರ ಮತ್ತು ಭಾನುವಾರ `ಪರ್ವ’ ಮಹಾ ರಂಗಪ್ರಸ್ತುತಿಯ ಪೂರ್ಣ ಪ್ರದರ್ಶನವಿರುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7ಗಂಟೆಯವರೆಗೆ ನಡೆಯಲಿದೆ. ಈ ಪ್ರದರ್ಶನಗಳು ಏಪ್ರಿಲ್ ಮತ್ತು ಮೇ ತಿಂಗಳುಗಳ ಅಂತ್ಯದವರೆಗೆ ಭೂಮಿಗೀತ ರಂಗಮಂದಿರದಲ್ಲಿ ನಡೆಯಲಿವೆ. ಈ ಎಲ್ಲಾ ಪ್ರದರ್ಶನಗಳಿಗೂ ರಂಗಾಯಣದ ಪರ್ವ ಮಾಹಿತಿ ಕೇಂದ್ರದಲ್ಲಿ ಮತ್ತು ರಂಗಾಯಣದ ವೆಬ್‍ಸೈಟ್ www.rangayana.orgನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು  ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share