ಮೈಸೂರು-ಮಳೆ ಹನಿ ಪ್ರದೇಶಗಳಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ.

126
Share

 

– ಮೈಸೂರಿನ ಪೂಜ್ಯ ಮಹಾಪೌರರಾದ ಶ್ರೀಯುತ ಶಿವಕುಮಾರವರು ವಾರ್ಡ್ ನಂ-28 ಗಾಂಧಿನಗರದ ಮಳೆ ಹನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಂದು ಬೆಳಿಗ್ಗೆ 8:00ಗೆ ಸರಿಯಾಗಿ ಪೂಜ್ಯ ಮಹಾಪೌರರಾದ ಶ್ರೀಯುತ ಶಿವಕುಮಾರ್ ರವರು ವಾರ್ಡ್ ನಂಬರ್ 28 ಗಾಂಧಿನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಗಾಂಧಿನಗರದ ಮಳೆ ಹಾನಿಯಿಂದ ಬಿದ್ದು ಹೋಗಿರುವ ಮನೆಗಳನ್ನು ಪರಿಶೀಲನೆ ಮಾಡಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಿದರು ಜೊತೆಗೆ ವಾರ್ಡಿನ ಯುಜಿಡಿ ಸಮಸ್ಯೆ ನೀರಿನ ಸಮಸ್ಯೆ ರಸ್ತೆಗಳು ಹದಗೆಟ್ಟಿರುವುದನ್ನು ಕಂಡು ಅಧಿಕಾರಿಗಳಿಗೆ ಈ ಕೂಡಲೇ ಅಗತ್ಯ ಕಾಮಗಾರಿಗಳನ್ನು ಮಾಡಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೂಜ್ಯ ಮಹಾಪೌರರು ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ವಿಪರೀತ ಮಳೆ ಆಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳು ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ನಾನು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಈ ಕುರಿತು ಸಭೆ ನಡೆಸಿ ಅವರಿಗೆ ತುರ್ತಾಗಿ ಕೈಗೊಳ್ಳಬೇಕಾಗಿರುವ ಕಾರ್ಯಗಳನ್ನು ಮಾಡಬೇಕೆಂದು ಸೂಚನೆ ನೀಡಿದ್ದೇನೆ ಜೊತೆಗೆ ಕೆಲವು ಬಾಗಗಳಲ್ಲಿ ಮಳೆಯಿಂದ ಹಾನಿಗೊಳಗಾಗಿ ಇರುವ ಮನೆಗಳು ರಸ್ತೆಗಳನ್ನು ನಾನು ಖುದ್ದಾಗಿ ಭೇಟಿಕೊಟ್ಟು ಪರಿಶೀಲನೆ ಮಾಡಿ ಅಗತ್ಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು ನಾನು ಮೈಸೂರಿನ ಮಹಾಪೌರರಾಗಿ ಆಯ್ಕೆಯಾದ ಮೇಲೆ ಇದೆ ಪ್ರಥಮ ಬಾರಿಗೆ ಗಾಂಧಿನಗರಕ್ಕೆ ಭೇಟಿ ಕೊಟ್ಟಿದ್ದೇನೆ ಇಲ್ಲಿ ಸಾಕಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ ಜೊತೆಗೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ವಾರ್ಡ್ ಗಳಿಗೂ ಹೋಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಶೀಲಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗಾಂಧಿನಗರದ ಮುಖಂಡರುಗಳಾದಂತ ಶ್ರೀಯುತ ಶರತ್ ಸತೀಶ್ ಗಾಂಧಿನಗರ ವಾರ್ಡಿನ ಬಿಜೆಪಿ ಅಧ್ಯಕ್ಷರಾದ ನಾಗರಾಜು ವಿಜಯ್, ಸುರೇಶ್, ರಾಜೇಶ್, ಸುರೇಂದ್ರ ಕರ್ಣ ಸೆಂಟ್ ಮೇರಿಸ್ ರಸ್ತೆಯ ಸಂಸ್ಥೆಯ ಅಧ್ಯಕ್ಷರಾದ ಸಾಧಿಕ್, ಪ್ರಭು, ವಿವೇಕ್, ಸಚಿನ್, ಜೆ ಕಪ್, ರಾಮ ಗೋಪಾಲ್, ಚಂದ್ರು, ದೀಪಕ್, ಮಂಗಲ್ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹಾಜರಿದ್ದರು.


Share