ಮೈಸೂರು-ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ

21
Share

ಮೈಸೂರು, ನಗರದ ಸಿಸಿಬಿ ಪೊಲೀಸರು ಖಚಿತ ವರ್ತಮಾನದ ಮೇರೆಗೆ ದಿನಾಂಕ 29.06.2023 ರಂದು ಮೈಸೂರು ನಗರ ವಿ.ವಿ ಪುರಂ ಪೊಲೀಸ್ ಠಾಣಾ ಸರಹದ್ದಿನ ಗೋಕುಲಂ ಮುಖ್ಯ ರಸ್ತೆ, ವಿ.ವಿ ಮೊಹಲ್ಲಾದಲ್ಲಿರುವ ಲೆ ಟೆರೇಸ್ ಕೆಫೆಯ ಮೇಲೆ ದಾಳಿ ಮಾಡಿ ಕಾನೂನು – ಬಾಹಿರವಾಗಿ ಯುವಕ- ಯುವತಿಯರಿಗೆ ಹುಕ್ಕಾ ಸೇವನೆ ಮಾಡಲು ಅವಕಾಶ ನೀಡುತ್ತಿದ್ದ ಕೆಫೆಯ ಮಾಲೀಕರ ಮತ್ತು ವ್ಯವಸ್ಥಾಪಕರವರುಗಳೊಂಡಂತೆ ಹುಕ್ಕಾ ಸೇವನೆ ಮಾಡುತ್ತಿದ್ದ ಓರ್ವ ಯುವತಿ ಹಾಗೂ 58 ಯುವಕರುಗಳ ಮೇಲೆ ಒಟ್ಟು 11,600/- ರೂ ಸ್ಥಳ ದಂಡವನ್ನು ವಿಧಿಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಡಿ.ಸಿ.ಪಿ, ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗರವರಾದ ಎಸ್. ಜಾಹ್ನವಿ ರವರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕದ ಎಸಿಪಿರವರಾದ ಎಸ್.ಎನ್ ಸಂದೇಶ್ ಕುಮಾರ್ ರವರ ಉಸ್ತುವಾರಿಯಲ್ಲಿ, ಸಿ.ಸಿ.ಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಮಲ್ಲೇಶ್.ಎ, ಪಿ.ಎಸ್.ಐ ರವರಾದ’ ರಾಜು ಕೋನಕೇರಿ ಹಾಗೂ ಎ.ಎಸ್.ಐ ರಾಜು ಮತ್ತು ಸಿಬ್ಬಂದಿಯವರುಗಳು ಮಾಡಿರುತ್ತಾರೆ.

Share