ಮೈಸೂರ್ ಪತ್ರಿಕೆ ಸಂಪಾದಕೀಯ-ವಿದ್ಯಾರ್ಥಿಗಳ ಸುರಕ್ಷತೆ: ಭಾರತ ಸರ್ಕಾರದ ಕ್ರಮ ಸ್ವಾಗತಾರ್ಹ

244
Share

ಪ್ರಸಕ್ತ ಉಕ್ರೇನ್ ನಲ್ಲಿನ ರಷ್ಯಾ ದಾಳಿ ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಭಾರತ ಸರ್ಕಾರ ಕರೆ ನೀಡಿದೆ.
ರಷ್ಯಾದ ಹಠಮಾರಿ ತನದಿಂದ ಉಕ್ರೇನ್ ರಾಜಧಾನಿ ಕೆಲವೇ ಕ್ಷಣದಲ್ಲಿ ಅದರ ಕೈವಶವಾಗುವ ಸಾಧ್ಯತೆ ಹೆಚ್ಚಿದೆ.
ಘನಘೋರ ಯುದ್ಧ ಮತ್ತಷ್ಟು ತೀವ್ರಗೊಂಡು ಮತ್ತಷ್ಟು ಪ್ರಾಣ ಹಾನಿ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಈ ಮಧ್ಯೆ ಉಕ್ರೇನಿನ ಎಲ್ಲಾ ಗಡಿಗಳು ಮುಚ್ಚಿ ಹೋಗಿದ್ದು ಯಾವುದೇ ವಿಮಾನ ನಿಲ್ದಾಣಗಳು ಕಾರ್ಯಾ ಚರಣೆಗೆ ಮಾಡದಂಥ ಕ್ಲಿಷ್ಟ ಸಂದರ್ಭ ಎದುರಿಸುತ್ತಿದೆ. ಭಾರತೀಯರನ್ನು ಅದರಲ್ಲೂ ವಿದ್ಯಾರ್ಥಿಗಳನ್ನು ಗಡಿ ಅಂಚಿನ ದೇಶಗಳಿಗೆ ಕರೆ ತಂದು ಆ ದೇಶಗಳ ಮೂಲಕ ವಿಮಾನದಲ್ಲಿ ಭಾರತಕ್ಕೆ ಕರೆತರುವ ಅತ್ಯಂತ ನಾಜೂಕಿನ ಬುದ್ದಿವಂತಿಕೆಯ ಕಾರ್ಯಚರಣೆಯನ್ನು ಭಾರತ ಕೈಗೊಂಡು ಯಾವುದೇ ಒಬ್ಬ ಭಾರತೀಯನ ಪ್ರಾಣ ಅತ್ಯಮೂಲ್ಯ ಎಂದು ಭಾರತ ಸರ್ಕಾರ ದಿಟ್ಟ ಕ್ರಮ ಜರುಗಿಸಿರುವುದು ಅತ್ಯಂತ ಗಮನಾರ್ಹ ಮತ್ತು ಸ್ವಾಗತಾರ್ಹ.
ಉಕ್ರೇನ್ ದೇಶದಾದ್ಯಂತ ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ವಿವಿಧ ಪ್ರದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಆಪರೇಷನ್ ಗಂಗಾ ಮೂಲಕ ಇದುವರೆಗೆ 8 ಕ್ಕೂ ಹೆಚ್ಚು ವಿಮಾನಗಳ ಮೂಲಕ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತಂದಿದೆ.ಇದೇ ಕಾರ್ಯಾಚರಣೆಯ ಮೂಲಕ ಮತ್ತಷ್ಟು ಹೆಚ್ಚಿನ ಭಾರತೀಯರನ್ನು ವಾಪಸ್ ಕರೆ ತರುವ ವಿಶ್ವಾಸ ಮೂಡಿಸಿದೆ.
ಅಮೇರಿಕಾ ಇಂಗ್ಲೆಂಡ್ ಫ್ರಾನ್ಸ್ ಸೇರಿದಂತೆ ಇನ್ನೂ ಅನೇಕ ದೇಶದ ನಾಗರಿಕರು, ವಿದ್ಯಾರ್ಥಿಗಳು ರಣಭೀಕರ ಸಂದರ್ಭ ಎದುರಿಸುತ್ತಿದ್ದರೂ ಅಲ್ಲಿಯ ದೇಶಗಳು ಕೈಚೆಲ್ಲಿ ಕುಳಿತು ಅವರವರ ರಕ್ಷಣೆಯನ್ನು ಅವರವರೇ ಮಾಡಿಕೊಳ್ಳಬೇಕೆಂದು ತಿಳಿಸಿ ತಮ್ಮ ದೇಶಕ್ಕೆ ರವಾನಿಸಲು ಯಾವುದೇ ದಿಟ್ಟ ಕ್ರಮ ಪ್ರದರ್ಶಿಸಿಲ್ಲ.
ಆದರೆ ಭಾರತ ಮಾತ್ರ ಏಕೈಕ ದೇಶ ಸುಮ್ಮನೆ ಕುಳಿತಿಲ್ಲ.
ಪೋಲೆಂಡ್ ಸೇರಿದಂತೆ ಅನೇಕ ಮಿತ್ರರಾಷ್ಟ್ರಗಳೊಂದಿಗೆ ಸಂಧಾನ ನಡೆಸಿ ಅತ್ಯಂತ ಯಶಸ್ವಿಯಾಗಿ ಭಾರತೀಯ ನಾಗರೀಕರ ಕ್ಷೇಮಕ್ಕೆ ಮುಂದಾಗಿರುವುದು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಭಾರತ ಸರ್ಕಾರದ ಈ ಕ್ರಮ ಪ್ರತಿಯೊಬ್ಬ ಭಾರತೀಯ ನಾಗರಿಕ ಹೆಮ್ಮೆ ಪಡುವಂತೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರವು ಸಹ ತತ್ತಕ್ಷಣ ಕ್ರಮ ಕೈಗೊಂಡು ಕನ್ನಡಿಗರ ಸುರಕ್ಷತೆಗೆ ಮುಂದಾಗಿರುವುದು ಕೂಡ ಸ್ವಾಗತಾರ್ಹ.
ಉಕ್ರೇನ್ – ರಷ್ಯಾ ನಡುವೆ ರಾಜತಾಂತ್ರಿಕ ಸಂಧಾನದ ಮೂಲಕ ಈ ಯುದ್ಧ ಕೊನೆಗೊಳ್ಳಲಿ ಎಂಬುದೇ ಎಲ್ಲಾ ಭಾರತೀಯರ ಬಯಕೆ.


Share