ಯೋಗ ಮಹಾ ಚೇತನ ಡಾ ಬಿ ಕೆ ಎಸ್ ಅಯ್ಯಂಗಾರ್ ಅವರ 102ನೇ ಜಯಂತೋತ್ಸವ

324
Share

ಹಿಮಾಲಯ ಫೌಂಡೇಶನ್ ಹಾಗೂ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಯೋಗ ಭೀಷ್ಮ ಯೋಗ ಮಹಾ ಚೇತನ ಡಾ ಬಿ ಕೆ ಎಸ್ ಅಯ್ಯಂಗಾರ್ ಅವರ 102ನೇ ಜಯಂತೋತ್ಸವ ಆಯೋಜಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಡಾ ಕೆ ರಘುರಾಮ್ ವಾಜಪೇಯಿ
ಈ ಜಗತ್ತು ಕಂಡ ಅದ್ವಿತೀಯ ಯೋಗದ ಮಹಾಚೇತನ ಡಾಕ್ಟರ್ ಬಿ ಕೆ ಎಸ್ ಅಯ್ಯಂಗಾರ್ ಇಡೀ ಜಗತ್ತಿಗೆ ತನ್ನದೇ ಆದ ಯೋಗದ ಪರಂಪರೆಯನ್ನು ಸೃಷ್ಟಿಸಿದವರು ಬಿಕೆಎಸ್ ಅಯ್ಯಂಗಾರ್ ಗುರು ಕೃಷ್ಣಮಾಚಾರ್ಯರ ಗರಡಿಯಲ್ಲಿ ಬೆಳೆದ ಶಿಷ್ಯೋತ್ತಮ ಇವರು ಕಮ್ಯೂನಿಷ್ಟ್ ರಾಷ್ಟ್ರಗಳಲ್ಲೂ ಯೋಗದ ಕಂಪು ಪಸರಿಸಿದವರು ಜಗ ಮಾನ್ಯರು ವಿಶ್ವಕ್ಕೆ ಭಾರತೀಯ ಯೋಗಕ್ಕೆ ತನ್ನದೇ ಆದ ನೆಲೆಯನ್ನು ತಂದುಕೊಟ್ಟವರು ಬಿಕೆಎಸ್ ಹೊಸ ಹೊಸ ಪರಿಕರಗಳನ್ನು ಹಾಗೂ ಉಪಕರಣಗಳನ್ನು ಬಳಸಿ ಯೋಗಾಸನ ಗಳನ್ನು ಲೀಲಾ ಜಾಲವಾಗಿ ಮಾಡುವ ನವ ಆವಿಷ್ಕಾರವನ್ನು ಕಂಡುಕೊಂಡು ಅದನ್ನು ಶಿಷ್ಯಕೋಟಿಗೆ ಬೋಧಿಸಿ ಯೋಗದಲ್ಲಿ ನಾವಿನ್ಯತೆಯನ್ನು ಪ್ರಚುರ ಪಡಿಸಿದವರು ಬಿಕೆಎಸ್ ಇವರ ಅಪ್ರತಿಮ ಸಾಧನೆಗೆ ಇಡೀ ಜಗತ್ತೇ ಬೆರಗಾಯಿತು ಅಲ್ಲದೆ ಇವರನ್ನು ತಮ್ಮ ತಮ್ಮ ದೇಶಗಳಿಗೆ ತಮ್ಮ ತಮ್ಮ ದೇಶಗಳಲ್ಲಿಗೆ ಆಹ್ವಾನಿಸಲು ತುದಿಗಾಲಿನಲ್ಲಿ ನಿಂತವು ಜಗತ್ತಿನ ಅನೇಕ ಅನೇಕ ಪ್ರಶಸ್ತಿಗಳಿಗೆ ಜನರ ಭಾಜನರಾದರು ಅಹಮಿಕೆ ಇಲ್ಲದೆ ತಮ್ಮ ಸರಳ ಸಜ್ಜನಿಕೆ ಗಳನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಉಳಿಸಿಕೊಂಡು ಬಂದವರು ಎಂದು ಹೇಳಿದರು.
ನಂತರ ಮಾತನಾಡಿದ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಯೋಗ ಪ್ರಚಲಿತವಾಗಿತ್ತು ಆದನ್ನು ಕೇವಲ ಸಾಧುಸಂತರು ಮಾತ್ರ ಯೋಗ ವನ್ನು ಅಭ್ಯಸಿಸುತ್ತಿದ್ದರು , ನಂತರದ ದಿನಗಳಲ್ಲಿ ಯೋಗಾಭ್ಯಾಸ ಪ್ರಪಂಚದೆಲ್ಲೆಡೆ ಪರಿ ಪಾಲಿಸಲು ಮುಂದಾದರು.ಯೋಗಾಭ್ಯಾಸಕ್ಕೆ ಯಾವುದೇ ಧರ್ಮ. ಜಾತಿ.ಲಿಂಗ . ವಯಸ್ಸು.ಜಾತಿ. ಗಡಿ ಸೀಮಿತವಿಲ್ಲದೆ ಸಾರ್ವತ್ರಿಕವಾಗಿ ಪ್ರತಿಯೊಬ್ಬರು ಅಭ್ಯಸಿಸಬಹುದಾದ ಕಲೆ ಯೋಗ.ಯೋಗದ ತಾಲೀಮು ಪಡೆಯಲು ಪ್ರತಿಯೊಬ್ಬರು ಮುಂದಾಗಬೇಕು. ಇದರಿಂದ ಎಲ್ಲರ ಮನೆಯಲ್ಲೂ ಮನಃಶಾಂತಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು. ಮುಂದಿನ ದಿನದಲ್ಲಿ ಮೈಸೂರು ನಗರದಲ್ಲಿ ಉದ್ಯಾನವನಗಳಲ್ಲಿ ವಾಯುವಿಹಾರಿಗಳು ಮತ್ತು ಹಿರಿಯ ನಾಗರೀಕರ ಸಹಕಾರದೊಂದಿಗರ ಸಂಘ ಸಂಸ್ಥೆಯ ಮೂಲಕ ಯೋಗ ಸಮಿತಿ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಮತ್ತು ಕೆ ರಘುರಾಂ ವಾಜಪೇಯಿ ,ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್ , ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಮೈಸೂರು ಯೋಗ ಅಸೋಸಿಯೇಷನ್ ಉಪಾಧ್ಯಕ್ಷರಾದ ಶ್ರೀ ಯೋಗಾ ಪ್ರಕಾಶ್ ,ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರಾದ ಬನ್ನೂರು ಶ್ರೀ ಮಹೇಂದ್ರ ಸಿಂಗ್ ಕಾಳಪ್ಪ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಹಿಮಾಲಯ ಫೌಂಡೇಶನ್ ಅಧ್ಯಕ್ಷರಾದ ಎನ್ ಅನಂತ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಖ್ಯಾತ ವ್ಯಂಗ್ಯಚಿತ್ರಕಾರರಾದ ನಾಗೇಂದ್ರಬಾಬು ,ಅಜಯ್ ಶಾಸ್ತ್ರಿ ,ಸುಚೇಂದ್ರ, ಚಕ್ರಪಾಣಿ ,ರಂಗನಾಥ್ ,ಹಾಗೂ ಇನ್ನಿತರರು ಹಾಜರಿದ್ದರು


Share