ರಾಜ್ಯಮಟ್ಟದ ಚಾಮುಂಡೇಶ್ವರಿ ಸವಿತಾ ಮಹರ್ಷಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ*

22
Share

 

 

*ರಾಜ್ಯಮಟ್ಟದ ಚಾಮುಂಡೇಶ್ವರಿ ಸವಿತಾ ಮಹರ್ಷಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ*

ಮೈಸೂರು: ಕೂರ್ಗಳ್ಳಿ ಯಲ್ಲಿರುವ ಬಿ ಎಂ ಎಲ್ ಕ್ರೀಡಾಂಗಣದಲ್ಲಿ ಹೂಟಗಳ್ಳಿ ಸವಿತ ಸಮಾಜದ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಚಾಮುಂಡೇಶ್ವರಿ ಸವಿತಾ ಮಹರ್ಷಿ ಕಪ್ ಕ್ರಿಕೆಟ್ ಪಂದ್ಯಾವಳಿ ವನ್ನು
ಬಿಜೆಪಿ ರಾಷ್ಟ್ರೀಯ ಪರಿಸರ ಸದಸ್ಯರಾದ ಎಸ್ ಆರ್ ಗೋಪಾಲ್ ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು ನಂತರ ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಕ್ರೀಡಾ ಪಟುಗಳಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯ ಅತ್ಯಂತ ಉತ್ಕೃಷ್ಟವಾಗಿರುತ್ತದೆ. ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಹಾಗು ಕ್ರೀಡೆಗಳಿಂದ ಪರಸ್ಪರ ಪ್ರೀತಿ ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ. ಅಲ್ಲದೇ ಕ್ರಿಕೆಟ್ ಅಂತರ್ ರಾಷ್ಟ್ರೀಯ ಆಟವಾಗಿರುವುದರಿಂದ ಉತ್ತಮ ಪ್ರತಿಭೆ ಪ್ರದಶರ್ಿಸಿದ್ದೇ
ಆದರೆ ಅಂತ‌ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ನಿಮ್ಮದಾಗಿರುತ್ತದೆ. ಕೊನೆಯಲ್ಲಿ ಕ್ರೀಡೆ ಎಂದಮೇಲೆ ಸೋಲು ಗೆಲುವು ನಿಶ್ಚಿತ, ಹಂಪೈರ್ಗಳ ತೀಮಾರ್‌ನಕ್ಕೆ ಗೌರವ ನೀಡಿ ಶಾಂತಿಯನ್ನು ಕಾಪಾಡಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದರು.

ಇದೇ ಸಂದರ್ಭದಲ್ಲಿ ಎನ್ ರಾಜಕುಮಾರ್, ರೇವಣ್ಣ, ಅಶ್ವಿನಿ, ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಹರೀಶ್, ರಂಜನ್, ವಿಜಯನಗರ ಹರೀಶ್, ಕಾರ್ಯದರ್ಶಿ ಪ್ರಶಾಂತ್, ಸುರೇಶ್, ಖಜಾಂಜಿ ಕಾರ್ತಿಕ್, ಸೇರಿದಂತೆ ಇನ್ನಿತರರು ಹಾಜರಿದ್ದರು

ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ರಾಜ್ಯದ 16 ತಂಡಗಳು ಭಾಗವಹಿಸಿದರು


Share