ವ್ಯಕ್ತಿ ನಿಧನಾ ನಂತರ ಆಧಾರ್ ಕಾರ್ಡ್ ಕೂಡ ರದ್ದು

159
Share

ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮತ್ತು ಭಾರತದ ರಿಜಿಸ್ಟ್ರಾರ್‌ ವ್ಯಕ್ತಿ ನಿಧನರಾದ ಕೂಡಲೇ ಆತನ ಆಧಾರ್ ಕಾರ್ಡ್ ಕೂಡ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳುತ್ತಿವೆ.

“ಮರಣ ಪ್ರಮಾಣ ಪತ್ರ ಪಡೆಯಲು ಮೃತ ವ್ಯಕ್ತಿಯ ಆಧಾರ್‌ ಸಂಖ್ಯೆಯನ್ನು ಕುಟುಂಬದವರು ನೀಡಬೇಕು. ಸಂಬಂಧಪಟ್ಟ ಇಲಾಖೆಯಿಂದ ಮರಣ ಪ್ರಮಾಣಪತ್ರ ವಿತರಣೆ ಯಾದ ಅನಂತರ ಮೃತ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಿ, ಅವರ ಒಪ್ಪಿಗೆ ನಂತರ ಆಧಾರ್‌ ಕಾರ್ಡ್‌ ನಿಷ್ಕ್ರಿಯಗೊಳಿಸಲಾಗುವುದು. ಈ ಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ‌ಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ’ ಎಂದು ವರದಿಯಾಗಿದೆ.


Share