ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 19

186
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 19ು
ಓಂ ನಮೋ ಹನುಮತೇ ನಮಃ
(1) ಇಂದ್ರನು ಆಂಜನೇಯನ ಕೊರಳಿಗೆ ಚಿನ್ನದ ಹೂಗಳ ಮಾಲೆಯನ್ನು ತಾನೇ ಸ್ವತಃ ತೊಡಿಸಿದ.
(2) ಇನ್ನು ಮೇಲೆ ನನ್ನ ವಜ್ರಾಯುಧವು ನಿನ್ನನ್ನು ಏನೂ ಮಾಡಲಾರದು ಎಂದು ವರ ಕೊಟ್ಟ.
(3) ವಜ್ರಾಯುಧ ಪ್ರಹಾರದಿಂದಾಗಿ ನಿನ್ನ ಎಡದವಡೆ ಊದಿಕೊಂಡಿರುವುದರಿಂದ ಇನ್ನು ಮೇಲೆ ನಿನಗೆ ‘ಹನುಮಂತ’ ಎಂಬ ಬಿರುದು ಬರಲಿ.
(4) ಹನು ಎಂದರೆ ದವಡೆ ಎಂದು ಒಂದು ಅರ್ಥ. ಜ್ಞಾನ ಎಂದು ಇನ್ನೊಂದರ್ಥ. ಅವೆರಡು ಅರ್ಥಗಳೂ ನಿನಗೆ ಅನ್ವಯವಾಗಲಿ! ನೀನು ಪರಿಪೂರ್ಣ ಜ್ಞಾನವಂತನಾಗು ಎಂದು ವರ ಕೊಟ್ಟ.
175) ಇತರ ದೇವತೆಗಳೂ ವರಗಳನ್ನು ಕೊಟ್ಟರು.
(1) ಸೂರ್ಯ : ನನ್ನ ತೇಜಸ್ಸಿನಲ್ಲಿ ನೂರನೇ ಒಂದು ಭಾಗ ಇವನಿಗೆ ಬರಲಿ! ದೊಡ್ಡವನಾಗುತ್ತಿದ್ದಂತೆಯೇ ಎಲ್ಲಾ ವಿದ್ಯೆಗಳೂ ಇವನಿಗೆ ಸಾಕ್ಷಾತ್ಕರಿಸಲಿ. ಇವನು ಒಳ್ಳೆಯ ವಾಗ್ಮಿ ಆಗಲಿ!
(2) ವರುಣ : ಇವನಿಗೆ ನೀರಿನಿಂದ ಯಾವ ಕಷ್ಟವೂ ಉಂಟಾಗದಿರಲಿ.
(3) ಯಮ : ಇವನಿಗೆ ಯಾವ ರೋಗವೂ ಬರದಿರಲಿ. ಯುದ್ಧದಲ್ಲಿ ಯಮದಂಡವೂ ಸಹ ಇವನಿಗೆ ಏನೂ ಮಾಡದಂತೆ ಆಗಲಿ!
(4) ಶಿವ : ಯುದ್ಧದಲ್ಲಿ ನಾನೂ ಇವನನ್ನು ಏನೂ ಮಾಡದಂತೆ ಆಗಲಿ.
(5) ವಿಶ್ವಕರ್ಮ : ನಾನು ಅನೇಕ ಬಗೆಯ ಶಸ್ತ್ರಗಳನ್ನು ಅಸ್ತ್ರಗಳನ್ನೂ ತಯಾರಿಸಿದ್ದೇನೆ. ಅವು ಯಾವುದೂ ಇವನ ಮೇಲೆ ಕೆಲಸ ಮಾಡದಿರಲಿ!
176) ಕೊನೆಗೆ ಬ್ರಹ್ಮದೇವನು ಇನ್ನೆರಡು ವರಗಳನ್ನು ಕೊಟ್ಟ.
(1) ನನ್ನ ಬ್ರಹ್ಮಾಸ್ತ್ರವೂ ಇವನ ಮೇಲೆ ಕೆಲಸ ಮಾಡದಿರಲಿ.
(2) ಇವನು ಚಿರಂಜೀವಿಯಾಗಲಿ!
ಹೀಗೆ ಆಂಜನೇಯನಿಗೆ ದೇವತೆಗಳು ಅನೇಕ ವರಗಳನ್ನು ಕೊಟ್ಟು ಬಾಯ್ತುಂಬ ಸ್ತೋತ್ರ ಮಾಡಿದರು.
( ಮುಂದುವರೆಯುವುದು )
ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share