ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 49

220
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 49
ಓಂ ನಮೋ ಹನುಮತೇ ನಮಃ

393 . ಈ ಮಾತನ್ನು ಕೇಳುತ್ತಲೇ ಸುರಸಾ ದೇವಿಯು ಗಟ್ಟಿಯಾಗಿ ಹೂಂಕರಿಸಿ ಧಿಕ್ಕರಿಸಿ ಹೀಗೆ ಹೇಳಿದಳು.
1 . ಹನುಮಾ ! ನಿನ್ನನ್ನು ಆಹಾರವಾಗಿ ದೇವೇಂದ್ರನೇ ನನಗೆ ಕೊಟ್ಟಿದ್ದಾನೆ .
2 . ಆದ್ದರಿಂದ ನೀನು ನನ್ನ ಬಾಯಲ್ಲಿ ಬೀಳದೆ ಬೇರೆ ಮಾರ್ಗವೇ ಇಲ್ಲ. ನಾನು ಬಾಯಿ ತೆರೆದರೆ ಅದರಿಂದ ತಪ್ಪಿಸಿಕೊಳ್ಳುವುದು ದೇವತೆಗಳಿಗೂ ಸಾಧ್ಯವಿಲ್ಲ.
3 . ಬ್ರಹ್ಮನಿಂದ ನಾನು ಅಂಥ ವರವನ್ನು ಪಡೆದಿದ್ದೇನೆ.
4 . ಇನ್ನು ನೀನ್ಯಾವ ಲೆಕ್ಕ ! ಇದೋ ! ಬಾಯಿ ತೆರೆಯುತ್ತಿದ್ದೇನೆ . ಬಂದು ಬೀಳು.
394 . ಹನುಮಂತನು ಮತ್ತೊಮ್ಮೆ ಕೈ ಜೋಡಿಸಿ ನಮಸ್ಕರಿಸಿ ಹೀಗೆ ಹೇಳಿದ –
1 . ನಾಗ ಮಾತೆ ! ನಿನಗೆ ನಮಸ್ಕಾರ.
2 . ದೇವೇಂದ್ರನು ನನ್ನನ್ನು ನಿನಗೆ ಆಹಾರವಾಗಿ ಕೊಟ್ಟಿರಲಿ. ನಾನು ಬೇಡ ಅನ್ನುವುದಿಲ್ಲ.
3 . ಆದರೆ ನಾನು ಈಗ ರಾಮ ಕಾರ್ಯನಿಮಿತ್ತ ಹೋಗುತ್ತಿದ್ದೇನೆ. ಅವನ ಹೆಂಡತಿ ಸೀತಾದೇವಿಯನ್ನು ನೋಡಿ ಆ ವಾರ್ತೆಯನ್ನು ಸ್ವಾಮಿಗೆ ವರದಿ ಮಾಡಬೇಕಾಗಿದೆ.
4 . ಈ ಕೆಲಸ ಮಧ್ಯದಲ್ಲಿ ನಿಲ್ಲುವ ಹಾಗೆ ಇಲ್ಲ .
5 . ಕೆಲಸ ಮುಗಿಯುತ್ತಲೇ ನಾನೇ ಬಂದು ನಿನ್ನ ಬಾಯಲಿ ಬೀಳುತ್ತೇನೆ.
6 . ಇದು ನನ್ನ ಸತ್ಯಪ್ರತಿಜ್ಞೆ. ನನ್ನ ಮಾತನ್ನು ನಂಬು. ದಾರಿ ಬಿಡು.
395 . ಸುರಸ ವಿಕಟ ಅಟ್ಟಹಾಸ ಮಾಡಿ ಹೀಗೆ ಹೇಳಿದಳು –
1 . ಹನುಮಾ ! ನಾನು ಅಷ್ಟು ಪೆದ್ದಿ ಅಂದ್ಕೋಬೇಡ .
2 . ನಿನಗ್ಯಾವ ಕೆಲಸವಿದ್ದರೆ ನನಗೇನು ?
3 . ನನ್ನ ಬಳಿ ಬ್ರಹ್ಮನ ವರ ಇದೆ. ಇದೋ ಬಾಯಿ ತೆಗೆಯುತ್ತಿದ್ದೀನಿ. ನಿನ್ನ ಬಲವನ್ನು ತೋರಿಸು.
396 . ಅಷ್ಟು ಹೊತ್ತಿಗೆ ಹನುಮಂತನಿಗೆ ಸ್ವಲ್ಪ ಕೋಪ ಬಂದಿತ್ತು. ಆದರೂ ಅಳುಕಲಿಲ್ಲ. ಒಳಗೊಳಗೆ ವೇಗವಾಗಿ ಆಲೋಚಿಸುತ್ತ ಹೊರಗೆ ಹೀಗೆ ಹೇಳಿದ –
1 . ಸುರಸಾದೇವಿ ನಿನಗಷ್ಟು ವರಗರ್ವ ಇರುವುದಾದರೆ ನೀವು ನನ್ನನ್ನು ನುಂಗು
2 . ಇದೋ ಬೀಳುತ್ತಿದ್ದೇನೆ ಬಾಯಿ ಅಗಲಿಸು

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share