ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ : 91

199
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ : 91
ಓಂ ನಮೋ ಹನುಮತೇ ನಮಃ

ಮೈರಾವಣ ಪುರ ಪ್ರವೇಶ
657) ಪಕ್ಕದಲ್ಲೇ ಇದ್ದ ವಿಭೀಷಣ ಹೀಗೆ ಹೇಳಿದ.
1. ಹನುಮಂತ! ಈ ಕೆಲಸ ಮೈರಾವಣನನ್ನು ಬಿಟ್ಟರೆ ಇನ್ಯಾರೂ ಮಾಡಿರಲಾರರು.
2. ಅವನು ನಮಗೆ ಒಂದು ರೀತಿಯಲ್ಲಿ ಸೋದರನೇ ಆಗಬೇಕು.
3. ಅವನು ಇರುವುದು ಪಾತಾಳದಲ್ಲಿ.
4. ಅವನು ನನ್ನ ಅಣ್ಣನಿಗಿಂತ ನೂರುಪಟ್ಟು ಬಲಶಾಲಿ. ಅವನ ಸೈನ್ಯವೂ ಅಷ್ಟೇ.
5. ಮೈರಾವಣ ಪುರದ ಸುತ್ತಲೂ ಏಳು ಪ್ರಾಕಾರಗಳಿವೆ. ಪ್ರತಿಯೊಂದು ಪ್ರಾಕಾರದಲ್ಲೂ ಸೈನ್ಯದ ಕಾವಲಿದೆ.
6. ಪುರದೊಳಗೆ ಪ್ರವೇಶಿಸಲು ಇರುವುದು ಎರಡೇ ದಾರಿಗಳು.
7. ಅದರಲ್ಲಿ ಒಂದು ಮಾರ್ಗ ತುಂಬಾ ವಿಶಾಲವಾದದ್ದು. ಆದರೆ ಆ ದಾರಿಯಲ್ಲಿ ಅಪಾರವಾದ ಸೈನ್ಯ ಇದೆ. ನೀನು ಅವರನ್ನು ಸೋಲಿಸಬಲ್ಲೆ. ಆದರೆ ಅಷ್ಟರೊಳಗೆ ಬೆಳಗಾದರೆ, ಇಲ್ಲಿ ಎಲ್ಲರಿಗೂ ರಾಮಲಕ್ಷ್ಮಣರು ಇಲ್ಲ ಎಂಬುದು ಗೊತ್ತಾಗಿಬಿಡುತ್ತದೆ.
ಆಗ ವಾನರ ವೀರರೇ ನಮ್ಮನ್ನು ಉಳಿಯ ಗೊಡುವುದಿಲ್ಲ. ಆದ್ದರಿಂದ ನೀನು ಆ ದಾರಿಯಲ್ಲಿ ಹೋಗಬೇಡ.
8. ಎರಡನೇ ದಾರಿ ತುಂಬಾ ಸಣ್ಣದು. ಕಮಲದ ಬೇರಿಗಿಂತ ಚಿಕ್ಕದು. ನೀನು ಸೂಕ್ಷ್ಮರೂಪವನ್ನು ಧರಿಸಿ ಆ ದಾರಿಯಲ್ಲೇ ಹೋಗಬೇಕು. ಆದರೆ ಸ್ವಲ್ಪ ಹೆಚ್ಚುಕಡಿಮೆಯಾದರೂ ಒಂದು ದೊಡ್ಡ ಗುಂಡುಕಲ್ಲು ಬಂದು ಆ ದ್ವಾರವನ್ನು ಮುಚ್ಚಿಬಿಡುತ್ತದೆ.
9. ಹಾಗೇನಾದರೂ ಆದರೆ ನೀನು
ಆ ಕಲ್ಲನ್ನು ಪಕ್ಕಕ್ಕೆ ಸರಿಸಿ ಮುಂದುವರೆಯಬೇಕು.
10. ಆ ದಾರಿಯಲ್ಲಿ ಹೋದರೆ ಪಾತಾಳ ಲೋಕದ ಪ್ರಾಕಾರದ ಹೊರಗೆ ಇರುವ ಪದ್ಮಸರೋವರವನ್ನು ತಲುಪುವೆ.
11. ಅಲ್ಲಿಗೆ ಹೋಗಿ, ಸಮಯ ನೋಡಿ ಪ್ರಾಕಾರದೊಳಗೆ ಪ್ರವೇಶಿಸು.
12. ಮುಂದಿನದೆಲ್ಲಾ ನಿನ್ನ ಬುದ್ಧಿಬಲದ ಮೇಲೆ ಆಧರಿಸಿರುತ್ತದೆ.
658) ಹನುಮಂತ ಮರುಕ್ಷಣವೇ ಪಾತಾಳಲೋಕವನ್ನು ಸೇರಿದ. ವಿಬೀಷಣನು ಹೇಳಿದ್ದ ಕಿರಿದಾದ ದಾರಿ ಕಾಣಿಸಿತು. ಅದರ ಮೇಲೆ ಬೆಟ್ಟದಷ್ಟು ದೊಡ್ಡ ಬಂಡೆ ಇತ್ತು.
659) ಹನುಮಂತನು ಬಂಡೆಯನ್ನು ಪಕ್ಕಕ್ಕೆ ತಳ್ಳಿ ಸೂಕ್ಷ್ಮರೂಪದಿಂದ ಒಳಗೆ ಪ್ರವೇಶಿಸಿ ಪದ್ಮಸರೋವರದ ಹತ್ತಿರ ಬಂದ.

ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ( ಸಂಗ್ರಹ ) :
ಭಾಲರಾ
ಬೆಂಗಳೂರು


Share