ಶ್ರೀ  ಆಂಜನೇಯ ಚರಿತ್ರೆ – ಭಾಗ 1 : ಪುಟ 18

256
Share

 ಶ್ರೀ  ಆಂಜನೇಯ ಚರಿತ್ರೆ – ಭಾಗ 1 : ಪುಟ 18
ಓಂ ನಮೋ ಹನುಮತೇ ನಮಃ

165) ಇನ್ನೂ ಆಳವಾಗಿ ಯೋಚಿಸಿದರೆ, ಚಲನೆಯನ್ನು ಉಂಟುಮಾಡುವುದು ಚೈತನ್ಯ. ಚೈತನ್ಯ ಅಂದರೆ, ಅದು ಪರಿಶುದ್ಧವಾದ ಬ್ರಹ್ಮಪದಾರ್ಥ. ಆದ್ದರಿಂದಲೇ ವೇದದಲ್ಲಿ ನಮಸ್ತೇ ವಾಯೋ, ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ” ಅಂತ ಹೇಳಿದ್ದಾರೆ.
166) ಭೂಮಿಯಲ್ಲೇ ಆಗಲಿ, ಸ್ವರ್ಗದಲ್ಲೇ ಆಗಲಿ, ಬ್ರಹ್ಮಲೋಕದಲ್ಲೇ ಆಗಲಿ, ಚಲನೆ ಎಂಬ ಕ್ರಿಯೆಯು ವಾಯುದೇವನ ಮೇಲೇ ಆಧಾರ ಪಟ್ಟಿರುತ್ತದೆ. ಆದ್ದರಿಂದ ವಾಯುದೇವನು ತನ್ನ ಚಲನವನ್ನು ಬಂಧಿಸಿಕೊಂಡಿದ್ದರಿಂದ ಮುಲ್ಲೋಕಗಳಲ್ಲೂ ಜೀವಿಗಳಿಗೆ ಪ್ರಾಣಾಂತಕ ಸ್ಥಿತಿ ಬಂತು.
167) ಪ್ರಾಣಗಳು ಹೋಗುವುದೂ ವಾಯುದೇವನ ಚಲನೆಯಿಂದ ಉಂಟಾಗುವ ಕೆಲಸವೇ. ಈಗ ವಾಯುದೇವ ತನ್ನ ಕ್ರಿಯೆಗಳನ್ನೆಲ್ಲಾ ಬಂಧಿಸಿಬಿಟ್ಟಿದ್ದ. ಪ್ರಾಣ ಹೋಗುವುದಿಲ್ಲ. ಆದರೆ ಪ್ರಾಣಾಂತಕವಾಗಿ ಇರುತ್ತದೆ. ಅದು ಇನ್ನೂ ಸಂಕಟದ ಪರಿಸ್ಥಿತಿ.
168) ದೇವತೆಗಳೆಲ್ಲಾ ಕಂಗಾಲಾಗಿ ಬ್ರಹ್ಮನ ಬಳಿ ಹೋದರು.

ದೇವತೆಗಳ ವರ
169) ಆಗ ಬ್ರಹ್ಮದೇವನು ನಡೆದಿದ್ದನ್ನೆಲ್ಲಾ ತನ್ನ ದಿವ್ಯದೃಷ್ಟಿಯಿಂದ ಪರಿಶೀಲಿಸಿ ನೋಡಿ, ದೇವತೆಗಳಿಗೆ ವಿವರಿಸಿದ. ವಾಯುದೇವನನ್ನು ಬೇಡುವುದೊಂದೇ ಮಾರ್ಗ ಎಂದು ಸಲಹೆ ಕೊಟ್ಟ.
170) ದೇವತೆಗಳಿಗೆ ವಾಯುದೇವನ ಹತ್ತಿರ ಹೋಗಲೂ ಭಯ. ಆಗ ಬ್ರಹ್ಮನೇ ಅವರನ್ನು ಕರೆದುಕೊಂಡು ವಾಯುದೇವನಿದ್ದ ಗುಹೆಯ ಹತ್ತಿರ ಹೋದ. ಗುಹೆಯ ಬಾಗಿಲ ಹತ್ತಿರ ನಿಂತುಕೊಂಡು ದೇವತೆಗಳು ವಾಯುದೇವನನ್ನು ಕುರಿತು ಹೀಗೆ ಸ್ತುತಿಸಿದರು.
171) ಬ್ರಹ್ಮನನ್ನು ನೋಡುತ್ತಲೇ ವಾಯುದೇವನು ಎದ್ದು ನಿಂತ. ಜೀವಚ್ಛವವಾಗಿದ್ದ ಮಗುವನ್ನು ಕೈಯಲ್ಲೇ ಇಟ್ಟುಕೊಂಡು ಬ್ರಹ್ಮದೇವನಿಗೆ ಮೂರುಬಾರಿ ಪ್ರದಕ್ಷಿಣೆ ಮಾಡಿದ. ಸಾಷ್ಟಾಂಗ ನಮಸ್ಕಾರ ಮಾಡಿದ.
172) ಆಗ ಬ್ರಹ್ಮದೇವನು ಆ ಶಿಶುವನ್ನು ಎತ್ತಿಕೊಂಡು ತನ್ನ ಅಮೃತಹಸ್ತದಿಂದ ಮಗುವಿನ ತಲೆಯನ್ನು ಮೃದುವಾಗಿ ನೇವರಿಸಿದ. ಆ ಸ್ಪರ್ಶಕ್ಕೆ ಮಗುವಿಗೆ ಪ್ರಾಣಬಂದು, ನಿಧಾನವಾಗಿ ಕದಲಿತು.
173) ಹೀಗೆ ಆಂಜನೇಯನು ಪುನಃ ಬದುಕಿದ್ದಕ್ಕೆ ವಾಯುದೇವನು ಸಂತೋಷಪಟ್ಟು, ತನ್ನ ಸಂಚಾರ ಶಕ್ತಿಯನ್ನು ಲೋಕದಲ್ಲಿ ಹರಡಿದನು. ಕೂಡಲೇ ಜೀವಿಗಳಿಗೆ ಉಸಿರು ಬಂದಂತಾಯಿತು. ಹೋದ ಪ್ರಾಣ ಬಂದಹಾಗೆ ಆಯಿತು. ಆನಂದವಾಯಿತು.
174) ಹೀಗೆ ದೇವಕಾರ್ಯಕ್ಕಾಗಿ ಹುಟ್ಟಿದ ಆ ಬಾಲಕನು ಪುನರುಜ್ಜೀವಿತನಾಗಿದ್ದಕ್ಕೂ, ವಾಯುದೇವನು ಅಷ್ಟು ಸುಲಭವಾಗಿ ಪ್ರಸನ್ನನಾಗಿದ್ದಕ್ಕೂ ಬ್ರಹ್ಮನು ಸಂತೋಷಗೊಂಡ. ವಾಯುಪುತ್ರನಿಗೆ ವರಗಳನ್ನು ಕೊಡುವಂತೆ ದೇವತೆಗಳಿಗೆ ಆಜ್ಞಾಪಿಸಿದ.
( ಮುಂದುವರೆಯುವುದು )
ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share