ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 94

160
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 94
ಓಂ ನಮೋ ಹನುಮತೇ ನಮಃ

ತಂದೆ – ಮಗನ ಯುದ್ಧ
673) ಇನ್ನು ನಿರಾತಂಕವಾಗಿ ಮುಂದುವರೆಯಬಹುದು ಎಂದುಕೊಳ್ಳುತ್ತಿರುವಾಗ, ಮತ್ಸ್ಯವಲ್ಲಭ ಎಂಬ ವಾನರವೀರನೊಬ್ಬ ಬಂದು ಸಿಡಿಲಿನಂತೆ ಎರಗಿದ.
674) ಅವನು ನೋಡಲು ಥೇಟ್ ಹನುಮಂತನಂತೆಯೇ ಇದ್ದಾನೆ!
675) ಈ ರಾಕ್ಷಸ ಲೋಕದಲ್ಲಿ
ಈ ವಾನರವೀರ ಎಲ್ಲಿಂದ ಬಂದನಪ್ಪಾ! ಅದೂ ತನ್ನನ್ನೇ ಹೋಲುತ್ತಿದ್ದಾನೆ! ಎಂದುಕೊಂಡು ಹನುಮಂತ ಮತ್ಸ್ಯವಲ್ಲಭನ ಮೇಲೆ ತಿರುಗಿ ಬಿದ್ದ.
676) ಆ ಯುವಕ ಯಾರೋ ಏನೋ, ಅವನ ಹೊಡೆತವನ್ನು ತಡೆದುಕೊಳ್ಳುವುದು ಹನುಮಂತನಿಗೇ ಸ್ವಲ್ಪ ಕಷ್ಟವಾಯಿತು.
677) ಇಬ್ಬರೂ ಸ್ವಲ್ಪ ಹೊತ್ತು ಹೊಡೆದಾಡಿದರು. ಇಬ್ಬರಿಗೂ ಆಯಾಸವಾಯಿತು. ಇಬ್ಬರೂ ಗೋಡೆಗೆ ಒರಗಿಕೊಂಡರು.
678) ಹನುಮಂತನೇ ಮೊದಲು ಚೇತರಿಸಿಕೊಂಡು, ಮೆಲ್ಲನೆ ಮಾತಾಡಿದ.
1. ವೀರಾ! ಪುನಃ ಯುದ್ಧ ಮಾಡೋಣ. ಅದು ಹಾಗಿರಲಿ.
2. ನೀನು ವಾನರನಲ್ಲವೇ? ಪಾತಾಳಲೋಕಕ್ಕೆ ಹೇಗೆ ಬಂದೆ?
3. ಯಾರ ಮಗ ನೀನು?
4. ನಿನ್ನ ವಿವರಗಳನ್ನು ತಿಳಿಸು.
679) ಮತ್ಸ್ಯವಲ್ಲಭನು ಮೊದಲು ಸಂದೇಹಿಸಿದರೂ, ನಂತರ ಮೆಲ್ಲಗೆ ತನ್ನ ಕಥೆಯನ್ನು ಹೇಳಲು ಶುರುಮಾಡಿದ.
1. ಅಯ್ಯಾ! ನಿಮ್ಮ ಜೊತೆ ಯುದ್ಧ ಮಾಡುತ್ತಿದ್ದರೂ ನಿಮ್ಮ ಮೇಲೆ ಗೌರವ ಭಾವನೆಯೇ ಇದೆ. ಕಾರಣವೇನೆಂದು ನನಗೂ ಗೊತ್ತಿಲ್ಲ.
2. ನಾನು ರಾಮದಾಸನಾದ ಹನುಮಂತನ ಮಗ.
3. ದೀರ್ಘದೇಹಿ ಎಂಬ ಗಂಧರ್ವ ವನಿತೆ ನನ್ನ ತಾಯಿ.
680) ಹನುಮಂತನಿಗೆ ಬೆಚ್ಚಿ ಬೀಳುವಂತಾಯಿತು. ತನಗೇ ಗೊತ್ತಿಲ್ಲದೇ ತನಗೇ ಒಬ್ಬ ಮಗನಿದ್ದಾನೆಯೇ? ಮೇಲಾಗಿ ನನ್ನ ಹೋಲಿಕೆಯೇ ಇದೆ. ಇದೆಲ್ಲಿಂದ ಬಂತಪ್ಪಾ ಈ ಅಪವಾದ! ಎಂದು ಒಳಗೊಳಗೇ ಕಳವಳ ಪಡುತ್ತಾ “ನಿನ್ನ ವೃತ್ತಾಂತವನ್ನು ವಿವರಿಸಿ
ಹೇಳಪ್ಪಾ” ಎಂದು ಕೇಳಿದ.

( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share