ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 26

204
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 26

ಓಂ ನಮೋ ಹನುಮತೇ ನಮಃ

ಹನುಮತ್ – ಸುವರ್ಚಲಾ ಕಲ್ಯಾಣ
228) ಆದರೆ, ತನ್ನ ತೇಜಸ್ಸಿನಿಂದ ಹುಟ್ಟಿದ ಸುವರ್ಚಲೆಯು ಸೂರ್ಯನಿಗೆ ಒಂದು ಹೊಸ ಸಮಸ್ಯೆ ಆದಳು. ಏಕೆಂದರೆ ಅವಳು ಸದಾ ತಪೋದೀಕ್ಷೆಯಲ್ಲೇ ಇರುತ್ತಿದ್ದಳು. ಇಂತಹ ಮಗಳಿಗೆ ಮದುವೆ ಮಾಡಿದರೆ ಅವಳೇನು ಸಂಸಾರ ಮಾಡಿಯಾಳು? ಆದರೆ ಮಗಳಿಗೆ ಮದುವೆ ಮಾಡದೇ ಮನೆಯಲ್ಲೇ ಇಟ್ಟುಕೊಳ್ಳುವುದು ಸೂರ್ಯನಿಗೆ ಇಷ್ಟವಿರಲಿಲ್ಲ.
229) ಈ ಚಿಂತೆಯಲ್ಲೇ ಇದ್ದ ಸೂರ್ಯನಿಗೆ ಇದ್ದಕ್ಕಿದ್ದಂತೆ ತನ್ನ ಶಿಷ್ಯನಾದ ಹನುಮಂತ ಜ್ಞಾಪಕಕ್ಕೆ ಬಂದ. ಅವನು ಅಖಂಡ ಬ್ರಹ್ಮಚರ್ಯ ದೀಕ್ಷೆಯನ್ನು ವಹಿಸಿದ್ದವನು. ಪರಮ ಗುರುಭಕ್ತ. ತನ್ನ ಮಾತಿಗೆ ಇಲ್ಲ ಎನ್ನುವುದಿಲ್ಲ. ಇವರಿಬ್ಬರಿಗೂ ಮದುವೆ ಮಾಡಿಬಿಟ್ಟರೆ ಇಬ್ಬರೂ ಬ್ರಹ್ಮಚರ್ಯ ದೀಕ್ಷೆಯಲ್ಲೇ ಇದ್ದು ತಪಸ್ಸಾಧನೆ ಮುಂದುವರೆಸುತ್ತಾರೆ. ತನಗೆ ಕನ್ಯಾದಾನದ ಫಲವೂ ಸಿಗುತ್ತದೆ, ತನ್ನ ಮಗಳ ತಪಸ್ಸನ್ನಾಗಲೀ ಶಿಷ್ಯನ ತಪಸ್ಸನ್ನಾಗಲೀ ಭಂಗಮಾಡಿದ ಪಾಪ ಬರುವುದಿಲ್ಲ.
230) ಹೀಗೆ ಯೋಚಿಸಿ, ಸೂರ್ಯದೇವನು ಹನುಮಂತನನ್ನು ಜ್ಞಾಪಿಸಿಕೊಂಡ. ಶಿಷ್ಯ ಬರುತ್ತಲೇ ತನ್ನ ಇಂಗಿತವನ್ನು ಹೇಳಿಕೊಂಡ.
231) ಹಾಗೆ ಹೇಳುವಾಗಲೇ ಧರ್ಮಶಾಸ್ತ್ರ ವಾಕ್ಯಗಳನ್ನು ಉದಾಹರಿಸಿದ. ಗುರುಪುತ್ರಿಯನ್ನು ವಿವಾಹ ಮಾಡಿಕೊಂಡರೆ ಯಾವ ದೋಷವೂ ಇಲ್ಲವೆಂದು ನಿರೂಪಿಸಿ, ಪುನಃ ಕೇಳಿದ.
232) ಸಮಸ್ತ ಶಾಸ್ತ್ರವೇತ್ತನಾದ ಹನುಮಂತನು ತ್ರಿಕಾಲಜ್ಞಾನಿಯಾದ್ದರಿಂದ, ಗುರುಗಳ ಸಂಕಲ್ಪವನ್ನು ಗ್ರಹಿಸಿ, “ಚಿತ್ತ ಗುರುದೇವ!” ಎಂದುಬಿಟ್ಟ.
233) ತನ್ನ ವ್ರತಕ್ಕೆ ಹೊಂದಿಕೊಳ್ಳುವ ಗಂಡ ಸಿಕ್ಕಿದ ಎಂದು ಸುವರ್ಚಲೆಯೂ ಸಂತೋಷ ಪಟ್ಟಳು.
234) ಜ್ಯೇಷ್ಠ ಶುಕ್ಲ ದಶಮಿ ಭಾನುವಾರದಂದು ಆ ದಿವ್ಯದಂಪತಿಗಳ ವಿವಾಹವು ಸಮಸ್ತ ದೇವತೆಗಳ ಸಮಕ್ಷದಲ್ಲಿ ವೈಭವವಾಗಿ ನೆರವೇರಿತು.

ತತ್ರ ಸರ್ವೇ ವಿನಿಶ್ಚಿತ್ಯ
ಸುಮುಹೂರ್ತಂ ಜಗೌಗುರುಃ೤
ಜ್ಯೇಷ್ಠ ಶುಕ್ಲ ದಶಮ್ಯಾಂತು
ಸೌಮ್ಯ ವಾರೋತ್ತ ರಕ್ಷಕೇ೤೤
(ಅರ್ಥ: ಶುದ್ಧ ದಶಮಿ, ಬುಧವಾರ, ಉತ್ತರಾ ನಕ್ಷತ್ರದಲ್ಲಿ ವಿವಾಹ ನೆರವೇರಿತು).
( ಮುಂದುವರೆಯುವುದು )

* ರಚನೆ – ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share