ಸಂಪಾದಕೀಯ : ಯಾರಿಗೆ ಯಾರ ಮೇಲೆ ಭಯ ?

213
Share

ಯಾರಿಗೆ ಯಾರ ಮೇಲೆ ಭಯ ?
ಇಂದು ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಹಾಡುಹಗಲಲ್ಲೇ ಇರಿದು ಹತ್ಯೆ ಮಾಡಿರುವುದು ಎಲ್ಲರನ್ನು ಬೆಚ್ಚಿ ಬೀಳಿಸುವಂತ ಘಟನೆಯಾಗಿದೆ.
ಆದರೆ ಯಾರು ಯಾರನ್ನು ನೋಡಿ ಹೆದರ ಬೇಕು ?
ರಾಜಕೀಯದವರು ಅಂಡರ್ ವರ್ಲ್ಡ್ ಜನರ ಮೇಲೆ ಭಯವ? ಪೋಲೀಸರಿಗೆ ಮೇಲಿನ ಆಡಳಿತದ ಬಗ್ಗೆ ಭಯವ? ಮೇಲಿರುವವರ ಗತಿ ಇದಾದರೆ ಸಾಮಾನ್ಯ ಮನುಷ್ಯರ ಪಾಡೇನು ?
ತಪ್ಪು ಯಾರೇ ಮಾಡಿರಲಿ ಅದಕ್ಕೆ ಎಲ್ಲರೂ ತಾವೇ ತಮ್ಮಿಷ್ಟ ಬಂದಂತೆ ನಡೆದು ಕೊಳ್ಳುವುದಾದರೆ ಸರ್ಕಾರ ಏಕೆ ಬೇಕು ? ಖಾನೂನು ಏಕೆ ಬೇಕು ?
ಇಷ್ಟು ರಾಜಾರೋಶವಾಗಿ ಈ ರೀತಿ ಕೃತ್ಯವೆಸಗಬೇಕಾದರೆ ಅಪರಾಧಿಗಳಿಗೆ ತಮ್ಮ ಗತಿ ಏನೆಂದು ಭಯವೇ ಇಲ್ಲವಾ? ಅಥವ ಅದೆಲ್ಲಕ್ಕೂ ಮೇಲಿದೆಯ ರಕ್ಷಿಸುವ ಕೈ ?
ಒಟ್ಟರಲ್ಲಿ ಯಾರು ಯಾರಿಗೆ ಭಯ ಪಡಬೇಕು ಎನ್ನುವುದೇ ಯಕ್ಷ ಪ್ರಶ್ನೆಯಂತೆ ಕಾಡುತ್ತಿದೆ ಸಾಮಾನ್ಯ ಜನರ ಪಾಡು. ಆದರೆ ಯಾವುದೇ ಉತ್ತರ ಸಿಗುವ ಯಾವುದೇ ನಿರೀಕ್ಷಯೂ ಇಲ್ಲ. ಧೈರ್ಯ ನೀಡುವವರಂತು ಇಲ್ಲವೇ ಇಲ್ಲ.
ಹಿಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಪತ್ರಿಕೆಗಳು ಚಾಕು ಚೂರಿ ಸಂಸ್ಕೃತಿ ಬಿಡಬೇಕೆಂದು ಘಂಟಾಗೋಷವಾಗಿ ಪ್ರಕಟಿಸಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಪಕ್ಷ ಭೇದವಿಲ್ಲದೇ ಎಲ್ಲಾ ರಾಜಕೀಯ ಪಕ್ಷಗಳ ಹಣೇಬರಹ ಇಷ್ಟೇ ಎನ್ನುವಂತೆ ನಡೆಯುತ್ತಿದೆ ಘಟನೆಗಳು.
ಒಬ್ಬರ ಮುಖಕ್ಕೆ ಒಬ್ಬರು ಕೆಸರು ಎರೆಚುತ್ತಿದ್ದರು. ಈಗ ರಕ್ತದೋಕುಳಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.


Share