ಸದನದಿಂದ ಬಿಜೆಪಿಯ 10 ಶಾಸಕರ ಅಮಾನತ್ತು

24
Share

ಕರ್ನಾಟಕ ಅಸೆಂಬ್ಲಿ ಸ್ಪೀಕರ್ ಯುಟಿ ಖಾದರ್ ಅವರು “ಅಸಭ್ಯ” ವರ್ತನೆಗಾಗಿ 10 ಬಿಜೆಪಿ ಶಾಸಕರನ್ನು ಬುಧವಾರ ಅಮಾನತುಗೊಳಿಸಿದ್ದಾರೆ. ಸಿಎನ್ ಅಶ್ವಥ್ ನಾರಾಯಣ್, ವಿ ಸುನೀಲ್ ಕುಮಾರ್, ಆರ್ ಅಶೋಕ, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜು, ಉಮಾನಾಥ್ ಕೋಟಿಯಾನ್, ಅರವಿಂದ್ ಬೆಲ್ಲದ್, ಆರಗ ಜ್ಞಾನೇಂದ್ರ ಮತ್ತು ವೈ ಭರತ್ ಶೆಟ್ಟಿ ಅಮಾನತುಗೊಂಡಿರುವ ಶಾಸಕರು.
ಕೋಪಗೊಂಡು ಬಿಜೆಪಿ ಶಾಸಕರು ವಿಧೇಯಕಗಳ ಪ್ರತಿಗಳನ್ನು ಹರಿದು ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮುಖಕ್ಕೆ ಎಸೆದ ನಂತರ ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಅಶಿಸ್ತು ಕಂಡು ಬಂದಿತು.
ದಿನದ ಅಧಿವೇಶನ ಆರಂಭವಾದಾಗ, ಸೋಮವಾರ ಮತ್ತು ಮಂಗಳವಾರ ನಡೆದ ‘ಯುನೈಟೆಡ್ ವಿ ಸ್ಟ್ಯಾಂಡ್’ ಸಭೆಗೆ ಕಾಂಗ್ರೆಸ್ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ ವಿಷಯವನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿ ವಿರೋಧಿಸಿದರು. ಇದು ಸರಕಾರಿ ಯಂತ್ರದ ದುರ್ಬಳಕೆಯಾಗಿದೆ ಎಂದು ಗಲಾಟೆ ಮಾಡಿದರು.
ಅಮಾನತ್ತಾದ ಶಾಸಕರನ್ನು ಮಾರ್ಷಲ್‌ ಗಳು ಹೊರಗೆ ಎತ್ತಿಕೊಂಡು ಹೋಗಿರುವ ಘಟನೆ ನಡೆದಿದೆ.


Share