ಸಿದ್ದರಾಮಯ್ಯನವರಿಂದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ

157
Share

ಸಿದ್ದರಾಮಯ್ಯನವರಿಂದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ; ಮಾಜಿ ಮೇಯರ್ ಶಿವಕುಮಾರ್
*ಬಿಜೆಪಿಯಿಂದಲೇ ನಾಯಕ ಸಮುದಾಯಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ, ಸಮಸ್ಯೆಗಳೂ ಬಗೆಹರಿದಿವೆ.
ಮೈಸೂರು; ಕಾನೂನು ಬದ್ಧವಾಗಿ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮುದಾಯಗಳ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದರು.
ಗುರುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಹಿಂದ ನಾಯಕರೆಂದು ಹೇಳಿಕೊಳ್ಳುತ್ತಾರೆ. ಆದರೆ ಎಸ್ಸಿ, ಎಸ್ಟಿ ಸಮುದಾಯಗಳನ್ನು ಬಹಳ ತಾತ್ಸಾರದಿಂದ ನೋಡುತ್ತಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ರಾಷ್ಟçಪತಿಗಳನ್ನಾಗಿ ಆಯ್ಕೆ ಮಾಡಿದರೆ, ಆ ಸಾಂವಿಧಾನಿಕ ಸ್ಥಾನದಲ್ಲಿರುವ ರಾಷ್ಟçಪತಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದಾರೆ ಎಂಬುದರ ಬಗ್ಗೆ ಕಿಂಚಿತ್ತೂ ಗೌರವಿಲ್ಲದೆ, ಅವರನ್ನು ಬಹಳ ಏಕವಚನದಿಂದಲೇ ನಿಂದಿಸಿ, ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಭದ್ರತೆಯ ಕಾರಣದಿಂದಾಗಿ ಪ್ರೋಟೋ ಕಾಲ್ ಪ್ರಕಾರ ರಾಷ್ಟçಪತಿಗಳನ್ನು ಸಂಸತ್ ಭವನ ಉದ್ಘಾಟನೆ ಹಾಗೂ ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಈ ವಿಚಾರವನ್ನು ರಾಷ್ಟçಪತಿಗಳಿಗೆ ಮೊದಲೇ ತಿಳಿಸಿ, ಅವರ ಅನುಮತಿಯನ್ನೂ ಪಡೆದುಕೊಳ್ಳಲಾಗಿತ್ತು. ಹಾಗಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಕುರಿತು ರಾಷ್ಟçಪತಿಗಳೇ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ರಾಷ್ಟçಪತಿಗಳಿಗೆ ಯಾವುದೇ ರೀತಿಯಿಂದ ಅವಮಾನವಾಗುವಂತೆ ಮಾಡಿಲ್ಲ. ಅಗೌರವ ತೋರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಸಿ ಎಸ್ಟಿಗಳ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ಅನುದಾನವನ್ನು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆಂದು ದುರ್ಬಳಕೆ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆಂದು ೧೦ ಸಾವಿರ ಕೋಟಿರೂ ಅನುದಾನ ನೀಡುವುದಾಗಿ ಘೋಷಿಸಿ, ಅದರಲ್ಲಿ ಮೊದಲ ಕಂತಾಗಿ ಒಂದುವರೆ ಸಾವಿರ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಪರಿಶಿಷ್ಟ ಜಾತಿ, ಪಂಗಡದವರಿಗೆAದು ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದು ಸಿದ್ದರಾಮಯ್ಯನವರು ಎಸ್ಸಿ, ಎಸ್ಟಿ ಸಮುದಾಯಗಳ ಬಗ್ಗೆ ಅನುಸರಿಸುತ್ತಿರುವ ತಾತ್ಸಾರ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದಲೇ ಎಸ್ಟಿ ಸಮುದಾಯಕ್ಕೆ ಅನೇಕ ಕೊಡುಗೆ ಸಿಕ್ಕಿದೆ; ಜನಸಂಖ್ಯೆ ಆಧಾರಿತವಾಗಿ ಪ.ಪಂಗಡಕ್ಕೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ನಾಯಕ ಸಮುದಾಯವು ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಸಿದಾಗ, ಅದಕ್ಕೆ ಸ್ಪಂದಿಸಿದ್ದು ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ. ಸಮುದಾಯಕ್ಕೆ ಇದ್ದ ಶೇ ೩ ರಷ್ಟು ಮೀಸಲಾತಿಯನ್ನು ಶೇ ೭.೫ಕ್ಕೆ ಹೆಚ್ಚಿಸಿ ಆದೇಶ ಹೊರಡಿಸುವ ಮೂಲಕ ಸಮುದಾಯದ ಜನರಿಗೆ ಅನೇಕ ಅನುಕೂಲಗಳನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಅಲ್ಲದೇ ನಾಯಕ ಸಮುದಾಯದ ಪರಿವಾರ, ತಳವಾರ ಪದಗಳನ್ನು ಎಸ್ಟಿ ಪಂಗಡಕ್ಕೆ ಸೇರಿಸುವಂತೆ ಸಮುದಾಯವು ಕಳೆದ ೩೫ ವರ್ಷಗಳಿಂದ ನಡೆಸಿಕೊಂಡ ಬಂದಿದ್ದ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವು ಈ ಎರಡು ಪದಗಳನ್ನು ಎಸ್ಟಿಗೆ ಸೇರಿಸುವ ಮೂಲಕ ೩೫ ವರ್ಷಗಳ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ನೀಡಿತು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಜಾರಿಗೆ ತಂದರು. ಅಲ್ಲದೇ ರಾಜ್ಯಾದ್ಯಾಂತ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನಗಳನ್ನು ನೀಡಿದರು. ಅಲ್ಲದೇ ಚಿತ್ರದುರ್ಗದ ರಾಜ ವೀರ ಮದಕರಿ ಕೋಟೆ ಮೇಲೆ ದಾಳಿ ನಡೆಸಿದ ಹೈದರಾಲಿ ಸೈನ್ಯವನ್ನು ಸದೆಬಡಿದ ಒಕನೆ ಓಬ್ಬವ್ವ ಜಯಂತಿ ಆಚರಣೆಯನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ, ಚಿತ್ರದುರ್ಗದ ಕೋಟೆ ಮೇಲೆ ದಾಳಿ ನಡೆಸಿ, ಮೋಸದಿಂದ ವೀರಮದಕರಿ ನಾಯಕರನ್ನು ಕೊಂದ ಹೈದರಾಲಿಯ ಮಗ ಟಿಪ್ಪುವಿನ ಜಯಂತಿ ಆಚರಣೆಯನ್ನು ಜಾರಿಗೆ ತಂದರು. ಅಲ್ಲದೇ ಸ್ವಾತಂತ್ರö್ಯ ಹೋರಾಟಗಾರರಾದ ಬುಡಕಟ್ಟು ಸಮುದಾಯಕ್ಕೆ ಸೇರಿಸ ಬಿರ್ಸಾಮುಂಡ ಜಯಂತಿಯನ್ನು ಜಾರಿಗೆ ತಂದಿದ್ದೂ ಕೂಡ ಬಿಜೆಪಿ ಸರ್ಕಾರವೇ. ಹಾಗಾಗಿ ನಾಯಕ ಸಮುದಾಯಕ್ಕೆ ಬಿಜೆಪಿ ನ್ಯಾಯ ನೀಡಿದರೆ, ಸಿಎಂ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ, ಹಾಗಾಗಿ ಶೋಷಿತ ಸಮುದಾಯಗಳ ಬಗ್ಗೆ ಸಿದ್ದರಾಮಯ್ಯನವರು ಎಂತಹ ಧೋರಣೆ, ಮನೋಭಾವ ಹೊಂದಿದ್ದಾರೆ ಎಂಬುದು ವ್ಯಕ್ತವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ಮೈಸೂರು ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ,  ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.


Share