ಹಾಡಿ ಜನಾಂಗದ ಮಕ್ಕಳಿಗೆ ರಕ್ತದ ಗುಂಪು ಪರೀಕ್ಷೆ

51
Share

 

 

*ಹಾಡಿ ಜನಾಂಗದ ಮಕ್ಕಳಿಗೆ ರಕ್ತದ ಗುಂಪು ಪರೀಕ್ಷಾ ಉಚಿತ ಶಿಬಿರ*

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ನಾಗಪುರದಲ್ಲಿರುವ ಹಾಡಿ ಜನಾಂಗದ ಮಕ್ಕಳುಗಳು ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತದ ಗುಂಪು ಉಚಿತ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು.

200ಕ್ಕೂ ಹೆಚ್ಚು ಮಕ್ಕಳಿಗೆ
ರಕ್ತ ಗುಂಪು ಪರೀಕ್ಷೆ ಮಾಡಿ ಮಕ್ಕಳಿಗೆ ರಕ್ತದ ಗುಂಪಿನ ಗುರುತಿನ ಕಾರ್ಡ್ ವಿತರಿಸಿ ಮಕ್ಕಳಿಗೆ ಅವರ ರಕ್ತದ ಗುಂಪಿನ ಬಗೆ ತಿಳಿಸಲಾಯಿತು ಹಾಗೂ ರಕ್ತದ ಬಗೆ ಜಾಗೃತಿಯು ಮೂಡಿಸಲಾಯಿತು

ಆರೋಗ್ಯದ ಬಗ್ಗೆ ಹೆಚ್ಚಿ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು. ಮಕ್ಕಳಿಗೆ ಶುಚಿತ್ವ, ಆಹಾರ ಪದ್ಧತಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ರಕ್ತದ ಗುಂಪು ಯಾವುದು ಎನ್ನುವುದನ್ನು ತಿಳಿಸಲು ಶಾಲೆಗಳಿಗೆ ಭೇಟಿ ನೀಡಿ ರಕ್ತದ ಗುಂಪು ಪರೀಕ್ಷೆ ಮಾಡುವ ಕೆಲಸ ಕೂಡ ಮಾಡಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಯ ಮಕ್ಕಳಿಗೂ ಉಚಿತ ರಕ್ತದ ಗುಂಪಿನ ಪರೀಕ್ಷೆ ಮಾಡಿ ಅವರಿಗೆ ರಕ್ತದ ಗುಂಪಿನ ಗುರುತಿನ ಕಾರ್ಡ್ ವಿತರಿಸಲಾಗುವುದು, ಈಗಾಗಲೇ 25ಕ್ಕೂ ಹೆಚ್ಚು ಶಾಲೆಯ ಮಕ್ಕಳಿಗೆ ಉಚಿತ ರಕ್ತದ ಗುಂಪಿನ ಪರೀಕ್ಷೆಯನ್ನು ಮಾಡಲಾಗಿದೆ ಎಂದರು

, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ರಾಕೇಶ್, ದುರ್ಗಾ ಪ್ರಸಾದ್,
ರಶ್ಮಿ, ಜಯಂತ್, ಶಿಕ್ಷಕರಾದ ತಿಮ್ಮೇಗೌಡ , ರವಿಜಿತ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಂದ ಹಾಜರಿದ್ದರು


Share