15/03/2022 ರ ಸರ್ಕಾರಿ ಅರ್ಜಿ ಆಹ್ವಾನ

264
Share

ಗ್ರಾಮ ಕಾಯಕ ಮಿತ್ರ ಹುದ್ದೆಗೆ ಮಹಿಳೆಯರಿಂದ ಅರ್ಜಿ ಆಹ್ವಾನ
ಹಾವೇರಿ: ರಟ್ಟಿಹಳ್ಳಿ ತಾಲೂಕು ಹಿರೇಕಬ್ಬಾರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಖಾಲಿ ಇರುವ ಗ್ರಾಮ ಕಾಯಕ ಮಿತ್ರ ಹುದ್ದೆ ಭರ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ 45 ವರ್ಷದೊಳಗಿರಬೇಕು. ದಿನಾಂಕ 01-01-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು. ಕಳೆದ ಮೂರು ವರ್ಷಗಳಲ್ಲಿ (2018-19, 2019-20 ಹಾಗೂ 2020-21) ಕನಿಷ್ಠ ಎರಡು ವರ್ಷಗಳಲ್ಲಿ ನರೇಗಾದಡಿ ಅಕುಶಲ ಕೂಲಿಗಾರರಾಗಿ ಕೆಲಸ ನಿರ್ವಹಿಸಿರಬೇಕು. ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿ ಮಾತ್ರ ಸಲ್ಲಿಸಬೇಕು.
ಆಯ್ಕೆಯಾದ ಗ್ರಾಮ ಕಾಯಕ ಮಿತ್ರ ಅಭ್ಯರ್ಥಿಗೆ ಮಾಸಿಕ ರೂ.6000/- ಗೌರವಧನ ನೀಡಲಾಗುವುದು ಹಾಗೂ ಅವರ ಕಾರ್ಯಕ್ಷಮತೆ ಆಧಾರದ ಮೇಲೆ ರೂ.5000/- ಪ್ರೋತ್ಸಾಹಧನ ನೀಡಲಾಗುವುದು. ಪ್ರೋತ್ಸಾಹಧನದ ವಿವರಗಳನ್ನು ನೇಮಕಾತಿ ನಂತರ ನೀಡಲಾಗುವುದು.
ನಿಗಧಿತ ಅರ್ಜಿ ನಮೂನೆಯನ್ನು ಮಾರ್ಚ್ 15 ರಿಂದ ಹಿರೇಕಬ್ಬಾರ ಗ್ರಾಮ ಪಂಚಾಯತಿಯಲ್ಲಿ ಪಡೆದು, ಎಸ್.ಎಸ್.ಎಲ್.ಸಿ.ಅಂಕಪಟ್ಟಿ, ಕಾಯಕಬಂಧು ದೃಢೀಕರಣ ಪತ್ರ, ಜಾತಿ ಪ್ರಮಾಣ, ಜಾಬ್‍ಕಾರ್ಡ್, ವಿಕಲಚೇತನ ಪ್ರಮಣದ ನಕಲು ಪ್ರತಿಗಳು ಹಾಗೂ ಆಧಾರ ಕಾರ್ಡ್, ವಿಳಾಸ ಪ್ರಮಾಣದೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ ದಿನಾಂಕ 31-03-2022ರ ಸಂಜೆ 5-30ರೊಳಗಾಗಿ ಹಿರೇಕಬ್ಬಾರ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಎಂದು ರಟ್ಟಿಹಳ್ಳಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share