17ರ0ದು -ವಿಶ್ವ ಕರಾಟೆ ದಿನ” ಆಚರಣೆ

71
Share

 

2016ರಲ್ಲಿ “ಇಂದನ ಉಳಿಸಿ ಪರಿಸರ ರಕ್ಷಿಸಿ” ಸೈಕಲ್ ಜಾಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ದಸರಾಹಬ್ಬದ ಪ್ರಯುಕ್ತ “ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ  17-6-2023ರಂದು “ವಿಶ್ವ ಕರಾಟೆ ದಿನ” ದ ಪ್ರಯುಕ್ತ ದಿನಾಂಕ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಸೋಸಲೆ ಸಿದ್ದರಾಜು ಅವರು ತಿಳಿಸಿದರು
ಅವರು ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ 18 ರ ಭಾನುವಾರ ಬೆಳಿಗ್ಗೆ 8 ಗಂಟೆಗೆ “ಸ್ವಯಂ ರಕ್ಷಣೆಗಾಗಿ ಕರಾಟೆ” ಕಾರ್ಯಕ್ರಮವನ್ನು ಸ್ಪೋರ್ಟ್ಸ್ ಫೆವಿಲಿಯನ್ ಮಹಾರಾಜ ಕಾಲೇಜು ಹಾಕಿ ಮೈದಾನದಲ್ಲಿ ಸುಮಾರು 1500 ಕರಾಟೆ ಪಟುಗಳನ್ನು ಒಂದು ಕಡೆ ಸೇರಿಸಿ ಅವರ ಮೂಲಕ ಕರಾಟೆ ಪ್ರದರ್ಶನ ಹಾಗೂ “ವಿಶ್ವ ಕರಾಟೆ ದಿನ”ವನ್ನು ಆಚರಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ವಿವಿದ ತಾಲ್ಲೂಕುಗಳಿಂದ ಕರಾಟೆ ಪಟುಗಳು ಆಗಮಿಸಲಿದ್ದಾರೆ. ಹಾಗೂ ಮೈಸೂರಿನ ವಿವಿಧ ಕರಾಟೆ ಸಂಸ್ಥೆಗಳು ಭಾಗವಹಿಸುತ್ತಾರೆ.
ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪರವರು ಉದ್ಘಾಟಿಸಲಿದ್ದು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ. ಕೃಷ್ಣಯ್ಯರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಶ್ರೀ ಸಿ.ಎಸ್ ಅರುಣ್‌ಮಾಚಯ್ಯ, ಅಧ್ಯಕ್ಷರಾದ ಸೋಸಲೆ ಸಿದ್ದರಾಜುರವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್‌ರವರು, ಕಾರ್ಯದರ್ಶಿಗಳಾದ ದೀಪಕ್ ಕುಮಾರ್‌ರವರು ಉಪಾಧ್ಯಕ್ಷರಾದ ಎನ್ ಶಂಕರರವರು, ಎನ್.ಜಿ. ಶಿವದಾಸ್‌ರವರು, ಸಹಕಾರ್ಯದರ್ಶಿಗಳಾದ ಮಹಾದೇವಸ್ವಾಮಿರವರು ಭಾಗವಹಿಸಲಿದ್ದಾರೆ.
ಮೈಸೂರು ಕರಾಟೆ ಅಸೋಸಿಯೇಷನ್ ಸಂಸ್ಥೆಯು 2009 ರಲ್ಲಿ ಪ್ರಾರಂಭವಾಯಿತು ಪ್ರಾರಂಭದ ದಿನಗಳಿಂದಲೂ ಕರಾಟೆಯ ಬೆಳವಣಿಗೆಗೆ ಅವಿರತವಾಗಿ ಕೆಲಸ ಮಾಡುತ್ತಾ ಬಂದಿದೆ ಹಾಗೂ ಅನೇಕ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿ ಕೊಂಡಿದೆ ಅದರಲ್ಲಿ ಪ್ರಮುಖವಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ “ನಮ್ಮರಕ್ಷಣೆ ನಮ್ಮಿಂದಲೆ” ಎಂಬುವ ಮಹಿಳೆಯರಿಗೆ ಉಚಿತ ಕರಾಟೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೂ ಹಾಸ್ಟೆಲ್ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡಿ “ನಾರಿ ಶಕ್ತಿ” ಪ್ರದರ್ಶನ ಕಾರ್ಯಕ್ರಮವನ್ನೂ ಇಲ್ಲಿ ಸ್ಮರಿಸಬಹುದಾಗಿದೆ
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮೊ.ನಂ. 9880361209, 8073906193 ಸಂಪರ್ಕಿಸಿ ಎಂದು ಕೋರುತ್ತೇವೆ

Share