MP ಕವನ ಸಂಗ್ರಹ : ‘ ರಕ್ತದಾನ ಮಹಾದಾನ ‘ – ಕವಿಯಿತ್ರಿ ಆಶಾಲತ

22
Share

“ರಕ್ತ ದಾನ ಮಹಾದಾನ “

ಓ ದೇವನೇ ಹೆಬ್ಬoಡೆಯ ಕಡೆದು ಶಿಲ್ಪಿಯಾದವನು ಸುಂದರ ಮೂರ್ತಿಯ ಸೃಷ್ಟಿಸಿದಂತೆ
ಈ ಜಗದಲ್ಲಿರುವ ಪ್ರತಿ ಮನುಜನ ಮನದಲ್ಲಿ ಪ್ರೀತಿ – ವಾತ್ಸಲ್ಯ, ಅನುಕಂಪಗಳು
ದಯೆ – ಕರುಣೆ, ಮಮಕಾರಗಳು
ನೆಲೆಗೊಳ್ವoತೆ ನೀ ಮಾಡು
ಬಿತ್ತು ನೀ ಮಾನವೀಯತೆಯ
ಮೌಲ್ಯಗಳ ||1||
ಕಡುಕಷ್ಟದಲ್ಲಿರುವ ಜೀವಿಗಳಿಗೆ
ಮರುಗುವ ಮನವ ನೀಡು
ಮನುಜ ಮನುಜನನ್ನು ಗೌರವದಿಂದ ಕಾಣ್ ವಂತೆ ನೀ ಮಾಡು
ಅಮಾನವೀಯತೆಯ ಅಳಿಸಿ
ಮಾನವೀಯತೆಯ ಉಳಿಸು
“ರಕ್ತದಾನ ಮಹಾದಾನ”
“ರಕ್ತ ಜೀವ ದ್ರವ್ಯ, ರಕ್ತ ನೀಡಿ ಜೀವ
ಉಳಿಸಿ ” ಎಂಬ ಮಾನವತ್ವವ ನೀ ಸಾರು ||2||
ರಕ್ತಹೀನತೆಯಿಂದ ನರಳುತಿರುವರು ಸಹಸ್ರಾರು ಮಂದಿ
ರಕ್ತದ ಅಭಾವದಿಂದ ಜೀವ ತ್ಯೆಜಿಸುತ್ತಿರುವರು ಬಹಳಷ್ಟು ಮಂದಿ
ಯಾರಿರಲಿ, ಎಂತಿರಲಿ ಎಲ್ಲರೊಳು
ಇರುವ ರಕ್ತ ಒಂದೆ ಅಲ್ಲವೇ
“ಒಬ್ಬ ವ್ಯಕ್ತಿಯ ರಕ್ತ ಮತ್ತೊಬ್ಬ ವ್ಯಕ್ತಿಯ ಜೀವವಾಗಿದೆ “
ಪ್ರತಿಯೊಬ್ಬ ಮನುಜನು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುವಂತೆ ನೀ ಪ್ರಚೋದಿಸು
||3||
‘ರಕ್ತವೆಂದರೆ ಜೀವ ಜಲ ‘
ಮಾನವ ಕೃತಕವಾಗಿ ಏನನ್ನಾದರೂ ಸೃಷ್ಟಿಸಬಲ್ಲ
ಆದರೇ ರಕ್ತವನ್ನು ಮಾತ್ರ ಸೃಷ್ಟಿಸಲಾರ
ರಕ್ತದಾನ ಮಾಡಿ ಜೀವ ಉಳಿಸುವುದರೊಂದಿಗೆ ನಿಮ್ಮ
ಆರೋಗ್ಯವಕಾಪಾಡಿಕೊಳ್ಳಿ
ಎಲ್ಲಾ ಒತ್ತಡ ಗಳಿಂದ, ರೂಜಿನಗಳಿಂದ ಮುಕ್ತಾರಾಗಿ
ಆರೋಗ್ಯವೇ ಭಾಗ್ಯ, ಅರೋಗ್ಯ ವಿದ್ದರೆ ಬಾಳು, ಇಲ್ಲದಿದ್ದರೆ ನಿರಂತರ ಗೋಳು
“ರಕ್ತ ದಾನ ಮಹಾದಾನ” ಎಂಬ
ಬೀಜ ಮಂತ್ರವ ಎಲ್ಲರ ಮನದಲ್ಲೂ ನೀ ಮೊಳಗಿಸು||4|

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share