MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 150

880
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 150

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

805 . ಓಂ ಸತ್ಯಾಯ ನಮಃ
806 . ಓಂ ಅಣವೇ ನಮಃ
807 . ಓಂ ಮಹತೇ ನಮಃ
808 . ಓಂ ಸ್ವಸ್ತಿ ನಮಃ
809 . ಓಂ ಹುಂ ನಮಃ
810 . ಓಂ ಫಟ್ ನಮಃ

805. ಓಂ ಸತ್ಯಂ –
ಭಾ: ……………… ತದ್ಧಿ ಸತ್ಯ ಮಬಾಧಿತಮ್‌||
ಯಾವ ಕಾಲದಲ್ಲಿಯೂ ಯಾವುದರಿಂದಲೂ ಬಾಧೆ (ನಾಶ) ಇಲ್ಲದಿರುವುದನ್ನು ‘ಸತ್ಯ’ವೆನ್ನುತ್ತಾರೆ. ಗಣೇಶನು ಶಾಶ್ವತನೂ, ನಿತ್ಯಸತ್ಯನೂ ಆದ್ದರಿಂದ ಸತ್ಯವಾಗಿದ್ದಾನೆ.
ಓಂ ಸತ್ಯಾಯ ನಮಃ

806. ಓಂ ಅಣುಃ-
ಭಾ: ಸ ಏವಾಣುರ್ಮನಷ್ಷಷ್ಠೇನ್ದ್ರಿಯಾsಗೋಚರತಾವಶಾತ್‌||
ಜ್ಞಾನೇಂದ್ರಿಯಗಳಿಂದ ಮಾತ್ರವಲ್ಲದೆ ಮನಸ್ಸಿನಿಂದಲೂ ಪ್ರತ್ಯಕ್ಷವಾಗಿ ನೋಡಲು ಸಾಧ್ಯವಿಲ್ಲದ್ದು ಅಣುವು. ಮನಸ್ಸಿಗೂ ಎಟುಕದ ಗಣೇಶನು ಅಣುರೂಪಿಯು.(ಅಣೋರಣೀಯಾನ್)
ಓಂ ಅಣವೇ ನಮಃ

807. ಓಂ ಮಹಾನ್ –
ಭಾ: ತತೋ7ಧಿಕಸ್ಯ ಸೌಖ್ಯಸ್ಯಾಭಾವಾದೇವ ಸ ವೈ ಮಹಾನ್‌||
ಅವನಿಗಿಂತ ಅಧಿಕವಾದ ಸುಖವಿಲ್ಲದಿರುವುದರಿಂದ ಅವನು ಮಹಾನ್. (ಅವನನ್ನು ತಿಳಿದುಕೊಳ್ಳುವುದು ಎಲ್ಲದಕ್ಕಿಂತಲೂ ಮಿಗಿಲಾದ ಸುಖವಾಗಿದೆ.)
ಓಂ ಮಹತೇ ನಮಃ

808. ಓಂ ಸ್ವಸ್ತಿ :-
ಭಾ: ತದೇವ ಸಮ್ಯಗಸ್ತೀತಿ ಸ್ವಸ್ತಿ ನಾಸ್ತಿ ತತಃ ಪರಂ||
ಗಣೇಶನು ನೋಡಲು, ಕೇಳಲು, ತಿಳಿದುಕೊಳ್ಳಲು, ಅನುಭವಿಸಲು ಕೂಡಾ ಬಹಳ ಚೆನ್ನಾಗಿದ್ದಾನೆ; ಮತ್ತು ಅವನಿಗಿಂತ ಅಧಿಕವಾದದ್ದು ಬೇರೆ ಯಾವ ವಸ್ತುವೂ ಇಲ್ಲ. ಆದ್ದರಿಂದ ಅವನು ಸ್ವಸ್ತಿ.
ಓಂ ಸ್ವಸ್ತಿ ನಮಃ

809. ಓಂ ಹುಂ –
ಭಾ: ಅನ್ಯಸ್ಯ ದೂರೀಕರಣಾತ್ ತದೇವ ಬ್ರಹ್ಮ ಹುಂ ಮತಮ್‌||
ಕೇವಲ ತನ್ನ ಹುಂಕಾರದಿಂದ ಬ್ರಹ್ಮಭಿನ್ನವಾದದ್ದೆಲ್ಲವನ್ನೂ ದೂರ ಮಾಡಿ ಕೇವಲ ಬ್ರಹ್ಮಭಾವನೆಯನ್ನು ಬುದ್ಧಿಯಲ್ಲಿ ತುಂಬುತ್ತಾನೆ. ಆದ್ದರಿಂದ ಗಣೇಶನೇ ಬ್ರಹ್ಮ. ಅವನೇ ‘ಹುಂ'(ಕಾರ) ಸ್ವರೂಪನು.
ಓಂ ಹುಂ ನಮಃ

810. ಓಂ ಫಟ್:-
ಭಾ: ದೂರೋತ್ಸಾರಣ ಮಾತ್ರಂ ನ ಕಿಂತು ನಾಶೋಪಿ ತೇನ ಫಟ್‌||
ಬ್ರಹ್ಮಭಾವನೆಗಿಂತ ಬೇರೆಯಾದ ಭಾವನೆಯನ್ನು ದೂರ ಮಾಡುವುದು ಮಾತ್ರವಲ್ಲದೆ ಅದು ಪುನಃ ಬರದಿರುವಂತೆ ನಾಶಮಾಡುತ್ತಾನೆ. ಆದ್ದರಿಂದ ಗಣೇಶನು ‘ಫಟ್‌’ (ಕಾರ) ಸ್ವರೂಪನಾಗಿದ್ದಾನೆ.
ಓಂ ಫಟ್ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share