MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 163

962
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 163

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

880 . ಓಂ ಷಟ್ತರ್ಕದೂರಾಯ ನಮಃ
881 . ಓಂ ಷಟ್ಕರ್ಮನಿರತಾಯ ನಮಃ
882 . ಓಂ ಷಡ್ರಸಾಶ್ರಯಾಯ ನಮಃ
883 . ಓಂ ಸಪ್ತಪಾತಾಲಚರಣಾಯ ನಮಃ
884 . ಓಂ ಸಪ್ತದ್ವೀಪೋರುಮಂಡಲಾಯ ನಮಃ
885 . ಓಂ ಸಪ್ತಸ್ವರ್ಲೋಕಮುಕುಟಾಯ ನಮಃ

880. ಓಂ ಷಟ್ತರ್ಕದೂರಃ-
ಭಾ: ಷಡ್ದರ್ಶನೋದಿತೈಸ್ತರ್ಕೈಃ ಯುಕ್ತಿಭಿರ್ಯೋ ನ ಗೃಹ್ಯತೇ|
ವಾಗತೀತಃ ಸ ಷಟ್ತರ್ಕದೂರ ಇತ್ಯಭಿಧೀಯತೇ||
ಆರು ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಯುಕ್ತಿಗಳಿಂದ ಗ್ರಹಿಸಲು ಅಸಾಧ್ಯನು ಮತ್ತು ಮಾತುಗಳಿಗೆ ಅತೀತನು. ಆದ್ದರಿಂದ ಅವನನ್ನು ಷಟ್ತರ್ಕದೂರ ಎನ್ನುತ್ತಾರೆ.
ಓಂ ಷಟ್ತರ್ಕದೂರಾಯ ನಮಃ

881. ಓಂ ಷಟ್ಕರ್ಮನಿರತಃ-
ಭಾ: ಷಟ್ಕರ್ಮನಿರತಸ್ಸಕ್ತಃ ಷಟ್ಸು ಯಾಗಾದಿಕರ್ಮಸು|
ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ (ಯಜ್ಞಮಾಡುವುದು, ಯಜಮಾನನಿಂದ ಮಾಡಿಸುವುದು, ವೇದವನ್ನು ಕಲಿಯುವುದು, ಶಿಷ್ಯರಿಗೆ ಕಲಿಸುವುದು, ದಾನಮಾಡುವುದು, ಸ್ವೀಕರಿಸುವುದು) ಇವುಗಳನ್ನು ಷಟ್ಕರ್ಮಗಳೆನ್ನುತ್ತಾರೆ. ಗಣೇಶನು ಷಟ್ಕರ್ಮಗಳನ್ನು ಆಚರಿಸುವವರಲ್ಲಿ ಆಸಕ್ತನಾಗಿದ್ದಾನೆ. ಅಥವಾ ಅವನೇ ವಿಪ್ರರೂಪದಲ್ಲಿ ಆಚರಿಸುತ್ತಿದ್ದಾನೆ. ಆದ್ದರಿಂದ ಅವನು ಷಟ್ಕರ್ಮನಿರತನು.
ಓಂ ಷಟ್ಕರ್ಮನಿರತಾಯ ನಮಃ

882. ಓಂ ಷಡ್ರಸಾಶ್ರಯಃ-
ಭಾ: ಮಧುರಾದಿ ರಸಾನಾಮಪ್ಯಾಧಾರಃ ಷಡ್ರಸಾಶ್ರಯಃ|
ಮಧುರ, ಆಮ್ಲ, ಕಟು, ಕಷಾಯ, ತಿಕ್ತ, ಲವಣ (ಸಿಹಿ, ಹುಳಿ, ಖಾರ, ಒಗರು, ಕಹಿ, ಉಪ್ಪು) ಇವುಗಳು ಷಡ್ರಸಗಳು. ಗಣೇಶನು ಷಡ್ರಸಗಳಿಗೆ ಆಶ್ರಯನೂ, ಆಧಾರಭೂತನೂ ಆಗಿದ್ದಾನೆ. ಅವನ ಕಾರಣದಿಂದಲೇ ಷಡ್ರಸಗಳು ಎಲ್ಲರಿಗೂ ಅನುಭವಕ್ಕೆ ಬರುತ್ತವೆ. ಆದ್ದರಿಂದ ಅವನು ಷಡ್ರಸಾಶ್ರಯನು.
ಓಂ ಷಡ್ರಸಾಶ್ರಯಾಯ ನಮಃ

883. ಓಂ ಸಪ್ತಪಾತಾಲಚರಣಃ 884. ಓಂ ಸಪ್ತದ್ವೀಪೋರು ಮಂಡಲಃ
885. ಓಂ ಸಪ್ತಸ್ವರ್ಲೋಕಮುಕುಟಃ
ಭಾ: ಅತಲಾದ್ಯಾ ಅಧೋsಧಃಸ್ಥಾಃ ಸಪ್ತಲೋಕಾ ಯದಂಘ್ರಿಗಾಃ|
ಸಪ್ತಜಂಬ್ವಾದಯೋ ದ್ವೀಪಾ ಯಸ್ಯ ಸಕ್ಥಿ ಭುವರ್ಮುಖಾಃ|
ಊರ್ಧ್ವೋರ್ಧ್ವಾಃ ಸಪ್ತಗೋಲೋಕಾsವಧಯೋ ಯಸ್ಯ ಮೂರ್ಥ್ನಿ ಸಃ||
ಸಪ್ತಪಾತಾಲ ಚರಣಃ ಸಪ್ತದ್ವೀಪೋರುಮಂಡಲಃ|
ಸಪ್ತಸ್ವರ್ಲೋಕಮುಕುಟ ಇತಿ ನಾಮ ತ್ರಯೇರಿತಃ||
ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳಗಳೆಂಬ ಕೆಳಗಿನ ಏಳು ಲೋಕಗಳ ಮೇಲೆ ತನ್ನ ಪಾದಗಳನ್ನು ಇಟ್ಟಿರುವುದರಿಂದ ಗಣೇಶನು ಸಪ್ತಪಾತಾಲಚರಣನು.
ಓಂ ಸಪ್ತಪಾತಾಲಚರಣಾಯ ನಮಃ
ಜಂಬು, ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರಗಳೆಂಬ ಏಳು ದ್ವೀಪಗಳನ್ನು ಸಪ್ತದ್ವೀಪಗಳು ಎನ್ನುತ್ತಾರೆ. ಈ ಏಳು ದ್ವೀಪಗಳು ಗಣೇಶನ ಊರು(ತೊಡೆ)ಗಳಾಗಿವೆ. ಆದ್ದರಿಂದ ಅವನು ಸಪ್ತದ್ವೀಪೋರುಮಂಡಲನು.
ಓಂ ಸಪ್ತದ್ವೀಪೋರುಮಂಡಲಾಯ ನಮಃ
ಭೂಲೋಕದ ಮೇಲಿರುವ ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ, ಗೋಲೋಕಗಳನ್ನು ತನ್ನ ಕಿರೀಟವಾಗಿರಿಸಿಕೊಂಡಿದ್ದಾನೆ. ಆದ್ದರಿಂದ ಸಪ್ತಸ್ವರ್ಲೋಕಮುಕುಟನು.
ಓಂ ಸಪ್ತಸ್ವರ್ಲೋಕಮುಕುಟಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share