MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 138

238
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 138

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

716 . ಓಂ ಲಗ್ನಾಯ ನಮಃ
717 . ಓಂ ಹೋರಾಯೈ ನಮಃ
718 . ಓಂ ಕಾಲಚಕ್ರಾಯ ನಮಃ
719 . ಓಂ ಮೇರವೇ ನಮಃ
720 . ಓಂ ಸಪ್ತರ್ಷಿಭ್ಯೋ ನಮಃ

716. ಓಂ ಲಗ್ನಂ :-
ಭಾ: ರಾಶೀನಾ ಮುದಯೋ ಲಗ್ನಂ ……………
(ನಾವು ಗಣನೆಗೆ ತೆಗೆದುಕೊಳ್ಳುವ ಕಾಲಕ್ಕೆ ಸರಿಯಾಗಿ ಪೂರ್ವಕ್ಷಿತಿಜದ ಮೇಲೆ ಯಾವ ರಾಶಿಯು ಎಲ್ಲಿಯವರೆಗೆ ಉದಯವಾಗಿರುವುದೋ ತಿಳಿಸುವುದನ್ನು ಲಗ್ನವೆನ್ನುತ್ತಾರೆ.)
ರಾಶಿಗಳ ಉದಯವೇ ಲಗ್ನ. ಗಣೇಶನು ಲಗ್ನಸ್ವರೂಪನಾಗಿದ್ದಾನೆ.
(ಒಂದು ದಿನದ ಹಗಲು ಮತ್ತು ರಾತ್ರಿಗಳಲ್ಲಿ ಮೇಷಾದಿ ಹನ್ನೆರಡು ರಾಶಿಗಳು ಉದಯಿಸುವುವು. ಪೂರ್ವದಿಕ್ಕಿನ ಸಂಬಂಧವನ್ನೇ ಉದಯವೆಂದು ತಿಳಿಯಬೇಕು.)
ಓಂ ಲಗ್ನಾಯ ನಮಃ

717. ಓಂ ಹೋರಾ :-
ಭಾ: …………….ಹೋರಾ ಲಗ್ನಾರ್ಧಸಂಮಿತಾ||
ಲಗ್ನದ ಅರ್ಧ ಭಾಗವನ್ನು ‘ಹೋರಾ’ ಎನ್ನುವರು. ಗಣೇಶನು ಹೋರಾರೂಪನಾಗಿದ್ದಾನೆ.
ಓಂ ಹೋರಾಯೈ ನಮಃ

718. ಕಾಲಚಕ್ರಂ :-
ಭಾ: ಕಾಲಚಕ್ರಂ ಶಿಂಶುಮಾರಂ …………….|
ಇಲ್ಲಿಯವರೆಗೂ ತಿಳಿಸಿದದಂತಹ ಕಾಲಚಕ್ರಸ್ವರೂಪನಾಗಿರುವುದರಿಂದ ಕಾಲಚಕ್ರನು. ಶಿಂಶುಮಾರ ಚಕ್ರವನ್ನು ಕಾಲಚಕ್ರವೆನ್ನುತ್ತಾರೆ. (ಚಕ್ರದಂತೆ ಯಾವಾಗಲೂ ತಿರುಗುತ್ತಿರುವುದರಿಂದ ಕಾಲಕ್ಕೆ ಕಾಲಚಕ್ರವೆಂದು ಹೆಸರು.)
ಗಣೇಶನು ಕಾಲಚಕ್ರವನ್ನು ಉರುಳಿಸುತ್ತಾ ಕಾಲಚಕ್ರವೆಂದು ಕರೆಸಿಕೊಳ್ಳುತ್ತಿರುವನು.
ಓಂ ಕಾಲಚಕ್ರಾಯ ನಮಃ

719. ಓಂ ಮೇರುಃ :-
ಭಾ: ಮೇರು ಸ್ಸೌವರ್ಣಪರ್ವತಃ……………..|
ಚಿನ್ನದ ಬೆಟ್ಟವನ್ನು ಮೇರುವೆಂದು ಕರೆಯುತ್ತಾರೆ. (ಗ್ರಹಗಳು ಈ ಮೇರುಪರ್ವತವನ್ನು ಸುತ್ತುತ್ತಿರುತ್ತವೆ ಎಂದು ವೇದವಾಕ್ಯವಿದೆ.) ಗಣೇಶನು ‘ಮೇರು’ ಪರ್ವತರೂಪನಾಗಿದ್ದಾನೆ.
ಓಂ ಮೇರವೇ ನಮಃ

720. ಓಂ ಸಪ್ತರ್ಷಯಃ :-
ಭಾ: ಸಪ್ತರ್ಷಯಃ ಕಶ್ಯಪಾದ್ಯಾಃ ……………|
ಗಣೇಶನು ಕಶ್ಯಪಾದಿಸಪ್ತರ್ಷಿಗಳ ಸ್ವರೂಪನಾಗಿದ್ದಾನೆ. ಆದ್ದರಿಂದ ಸಪ್ತರ್ಷಯಃ ಎಂದೇ ಅವನ ಹೆಸರಾಗಿದೆ.
ಓಂ ಸಪ್ತರ್ಷಿಭ್ಯೋ ನಮಃ
ಸಪ್ತರ್ಷಿಗಳು :-
ಕಶ್ಯಪೋತ್ರಿರ್ಭರದ್ವಾಜೋ
ವಿಶ್ವಾಮಿತ್ರೋsಥ ಗೌತಮಃ|
ಜಮದಗ್ನಿರ್ವಶಿಷ್ಠಶ್ಚ
ಸಪ್ತೈತೇ ತಾಪಸಾಸ್ಸ್ಮೃತಾಃ||

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share