MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 149

224
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 149

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

800 . ಓಂ ಬಂಧಾಯ ನಮಃ
801 . ಓಂ ಮೋಕ್ಷಾಯ ನಮಃ||
802 . ಓಂ ಸುಖಾಯ ನಮಃ
803 . ಓಂ ಭೋಗಾಯ ನಮಃ
804 . ಓಂ ಅಯೋಗಾಯ ನಮಃ

800. ಓಂ ಬಂಧಃ-
ಬಂಧ ಆತ್ಮನ್ಯನಾತ್ಮತ್ವಭ್ರಮೋsನಾತ್ಮನಿ ಚಾತ್ಮತಾ|
ಏತತ್ಸರ್ವಂ ಭವಾನೇವ ಭಗವನ್ ಪರಿಕೀರ್ತಿತಃ||
ಆತ್ಮವಿಷಯದಲ್ಲಿ ಆತ್ಮವಲ್ಲವೆಂಬ ಭ್ರಾಂತಿಯನ್ನೂ, ಆತ್ಮವಲ್ಲದರಲ್ಲಿ ಆತ್ಮ(ನಾನು) ಎಂಬ ಭ್ರಮೆಯನ್ನೂ ಬಂಧವೆನ್ನುತ್ತಾರೆ. ಹೇ ಭಗವಂತನೇ ಗಣೇಶ! ಇವೆಲ್ಲವೂ ನೀನೇ ಆಗಿದ್ದೀಯೆ. ಆದಕಾರಣ ನಿನ್ನನ್ನು ಬಂಧ ಎಂದು ಕರೆಯುತ್ತಾರೆ.
ಓಂ ಬಂಧಾಯ ನಮಃ
॥ ಇತಿ ಭಾರತ್ಯುಪಾಖ್ಯಸ್ಯ ಭಾಸ್ಕರಾಗ್ನಿ ಚಿತಃ ಕೃತೌ
ಗಣೇಶನಾಮ ಸಾಹಸ್ರೇ ಖದ್ಯೋತೇ ಅಷ್ಟಮಂ ಶತಮ್‌||
ಭಾರತಿ ಎಂಬ ಅನ್ಯನಾಮವಿರುವ ಭಾಸ್ಕರಾಗ್ನಿಹೋತ್ರಿಗಳ ಕೃತಿಯಾದ ಗಣೇಶ ನಾಮಸಾಹಸ್ರದ ಖದ್ಯೋತ ಭಾಷ್ಯದಲ್ಲಿ ಎಂಟನೆಯ ಶತಕವು ಸಂಪೂರ್ಣ||

801. ಓಂ ಮೋಕ್ಷಃ :-
ಮೋಕ್ಷಸ್ತ್ವವಿದ್ಯಾವಿಧ್ವಂಸಃ …………..|
ಅವಿದ್ಯಾ (ಅಜ್ಞಾನ) ನಾಶವನ್ನೇ ಮೋಕ್ಷವೆನ್ನುತ್ತಾರೆ. ಗಣೇಶನು ಅಜ್ಞಾನ ನಾಶಕನಾದ್ದರಿಂದ ಅವನೇ ಮೋಕ್ಷನು.
ಓಂ ಮೋಕ್ಷಾಯ ನಮಃ

802. ಓಂ ಸುಖಂ :-
…………….ತತೋ ಯದವಶಿಷ್ಯತೇ|
ತತ್ಸುಖಂ ಪ್ರತ್ಯಗಾನಂದಃ ……………..||
ಅವಿದ್ಯಾನಾಶವಾದ ಮೇಲೆ ಉಳಿಯುವ ಪ್ರತ್ಯಗಾನಂದವೇ ನಿಜವಾದ ಸುಖವು. ಗಣೇಶನು ಆ ಸುಖದ ಸ್ವರೂಪನಾಗಿದ್ದಾನೆ.
ಓಂ ಸುಖಾಯ ನಮಃ

803. ಓಂ ಭೋಗಃ –
ಭಾ: ………………. ಭೋಗಸ್ಸೋನುಭವಾತ್ಮಕಃ||
ಅನುಭವಾತ್ಮಕವಾದ ಸುಖಸ್ವರೂಪನಾದ್ದರಿಂದ ಭೋಗನು.
ಓಂ ಭೋಗಾಯ ನಮಃ

804. ಓಂ ಅಯೋಗಃ :-
ಭಾ: ಅಯೋಗ ಸ್ಸಂಗರಹಿತಃ ………….|
ನಿಸ್ಸಂಗನಾದ್ದರಿಂದ ಅಯೋಗನು.
ಓಂ ಅಯೋಗಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share