MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 162

238
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 162

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

875 . ಓಂ ಷಣ್ಮುಖಾಯ ನಮಃ
876 . ಓಂ ಷಣ್ಮಖಭ್ರಾತ್ರೇ ನಮಃ
877 . ಓಂ ಷಟ್ಛಕ್ತಿಪರಿವಾರಿತಾಯ ನಮಃ
878 . ಓಂ ಷಡ್ವೈರಿವರ್ಗವಿಧ್ವಂಸಿನೇ ನಮಃ
879 . ಓಂ ಷಡೂರ್ಮಿಭಯಭಂಜನಾಯ ನಮಃ

875. ಓಂ ಷಣ್ಮುಖಃ-
ಭಾ: ಷಟ್ ಸಂಖ್ಯಾಕಾನಿ ಶಾಸ್ತ್ರಾಣಿ ಮುಖೇ ಯಸ್ಯ ಸ ಷಣ್ಮುಖಃ|
ಆರು ಶಾಸ್ತ್ರಗಳನ್ನು ತನ್ನ ಮುಖದಲ್ಲಿ ಯಾವ ದೇವನು ಇರಿಸಿಕೊಂಡಿದ್ದಾನೆಯೋ ಅವನು ಷಣ್ಮುಖನು.
ಓಂ ಷಣ್ಮುಖಾಯ ನಮಃ

876. ಓಂ ಷಣ್ಮುಖಭ್ರಾತಾ-
ಭಾ: ಸ ಭವಾನ್ ಷಣ್ಮುಖಭ್ರಾತಾ ಸೇನಾನೀರ್ಯಸ್ಯ ತೇsನುಜಃ|
ಹೇ ಗಣೇಶ! ಸೇನಾಪತಿಯಾದ ಷಣ್ಮುಖನು (ಸುಬ್ರಹ್ಮಣ್ಯಸ್ವಾಮಿಯು) ನಿನ್ನ ತಮ್ಮನಾದ್ದರಿಂದ ನೀನು ಷಣ್ಮುಖಭ್ರಾತಾ.
ಓಂ ಷಣ್ಮಖಭ್ರಾತ್ರೇ ನಮಃ

877. ಓಂ ಷಟ್ಛಕ್ತಿ ಪರಿವಾರಿತಃ-
ಭಾ: ಷಡಂಗಯುವತಿಚ್ಛನ್ನಃ ಷಟ್ಛಕ್ತಿಪರಿವಾರಿತಃ|
ಹೃದಯದೇವೀ, ಶಿರೋದೇವೀ, ಶಿಖಾದೇವೀ, ಕವಚದೇವೀ, ನೇತ್ರದೇವೀ, ಅಸ್ತ್ರದೇವೀಗಳೆಂಬ ಆರು ಮಂದಿ ಅಂಗದೇವತೆಯರು ಗಣೇಶನ ಪರಿವಾರವಾಗಿದ್ದು ಅವನು ಅವರಿಂದ ಸುತ್ತುಹಾಕಲ್ಪಟ್ಟಿದ್ದಾನೆ. ಆದ್ದರಿಂದ ಅವನು ಷಟ್ಛಕ್ತಿಪರಿವಾರಿತನು.
ಓಂ ಷಟ್ಛಕ್ತಿಪರಿವಾರಿತಾಯ ನಮಃ

878. ಓಂ ಷಡ್ವೈರಿವರ್ಗವಿಧ್ವಂಸೀ-
ಭಾ: ಷಡ್ವೈರಿವರ್ಗವಿಧ್ವಂಸೀ ಕಾಮಕ್ರೋಧೌ ಚ ಮತ್ಸರಮ್‌|
ಲೋಭಮೋಹಮದಾನ್ ಹಂಸಿ ಷಡಿಮಾನ್ವೈರಿಶಬ್ದಿತಾನ್‌||
ಹೇ ಗಣೇಶ! ನೀನು ಜೀವಿಗಳಿಗೆ ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ನಾಶ ಮಾಡುತ್ತೀಯೆ. ಆದ್ದರಿಂದ ನೀನು ಷಡ್ವೈರಿವರ್ಗವಿಧ್ವಂಸಿಯು.
ಓಂ ಷಡ್ವೈರಿವರ್ಗವಿಧ್ವಂಸಿನೇ ನಮಃ

879. ಓಂ ಷಡೂರ್ಮಿಭಯಭಂಜನಃ-
ಭಾ: ಅಶನಾಯಾಂ ಪಿಪಾಸಾಂ ಚ ಶೋಕಂ ಮೋಹಂ ಜರಾಂ ಮೃತಿಮ್‌|
ಷಡೂರ್ಮಿಶಬ್ದಿತಾನ್ನಿಘ್ನನ್ ಷಡೂರ್ಮಿಭಯಭಂಜನಃ||
ಹಸಿವು, ಬಾಯಾರಿಕೆ, ಶೋಕ, ಮೋಹ, ಮುಪ್ಪು, ಮರಣ ಇವುಗಳನ್ನು ಷಡೂರ್ಮಿಗಳು ಎನ್ನುತ್ತಾರೆ. ಗಣೇಶನು ಷಡೂರ್ಮಿಗಳಿಂದ ಉಂಟಾಗುವ ಭಯವನ್ನು ನಾಶಮಾಡುತ್ತಾನೆ. ಆದ್ದರಿಂದ ಅವನು ಷಡೂರ್ಮಿ ಭಯಭಂಜನನು.
ಓಂ ಷಡೂರ್ಮಿಭಯಭಂಜನಾಯ ನಮಃ
ಷಟ್ತರ್ಕದೂರಃ ಷಟ್ಕರ್ಮ-ನಿರತಷ್ಷಡ್ರಸಾಶ್ರಯಃ|
ಸಪ್ತಪಾತಾಲಚರಣಃ ಸಪ್ತದ್ವೀಪೋರುಮಂಡಲಃ||
ಸಪ್ತಸ್ವರ್ಲೋಕಮುಕುಟಃ ಸಪ್ತಸಪ್ತಿವರಪ್ರದಃ|

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share