MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 174

279
Share

ಶ್ರೀ  ಗಣೇಶ ಸಹಸ್ರನಾಮ ಭಾಷ್ಯ : ಪುಟ – 174

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

936 . ಓಂ ಸಾಮಪಂಚದಶಾಯ ನಮಃ
937 . ಓಂ ಪಂಚದಶೀಶೀತಾಂಶುನಿರ್ಮಲಾಯ ನಮಃ
938 . ಓಂ ಷೋಡಶಾಧಾರನಿಲಯಾಯ ನಮಃ
939 . ಓಂ ಷೋಡಶಸ್ವರಮಾತೃಕಾಯ ನಮಃ
940 . ಓಂ ಷೋಡಶಾಂತ ಪದಾವಾಸಾಯ ನಮಃ

936. ಓಂ ಸಾಮಪಂಚದಶಃ-
ಭಾ: ಯತ್ಪಂಚ ದಶಭಿಸ್ಸ್ತೋಮೈಃ ರಾಜ್ಯಸ್ತೋತ್ರ ಚತುಷ್ಟಯಮ್‌|
ಸಾಮಯುಕ್ತಂ ತದಾತ್ಮತ್ವಾತ್ ಸಾಮಪಂಚದಶೋ ಭವಾನ್‌||
ಹೇ ಗಣೇಶ! ನೀನು ಪಂಚದಶ ಸಾಮಸ್ವರೂಪನು. ‘1. ಕಯಾನಶ್ಚಿತ್ರ, 2. ಕಸ್ತ್ವಾ ಸತ್ಯೋ ಮದಾನಾಂ, 3. ಅಭೀಷುಣಸ್ಸಖೀನಾಂ’ ಈ ಮೂರು ಮಂತ್ರಗಳನ್ನು ಮೂರು ಆವೃತ್ತಿಗಳಲ್ಲಿ ಪಠಿಸಿದರೆ ಅದು ಪಂಚದಶ ಸಾಮವಾಗುತ್ತದೆ.
ಮೊದಲನೆಯ ಆವೃತ್ತಿಯಲ್ಲಿ ಮೊದಲನೆಯ ಮಂತ್ರವನ್ನು, ಎರಡನೆಯ ಆವೃತ್ತಿಯಲ್ಲಿ ಎರಡನೆಯ ಮಂತ್ರವನ್ನು, ಮೂರನೆಯ ಆವೃತ್ತಿಯಲ್ಲಿ ಮೂರನೆಯ ಮಂತ್ರವನ್ನು ಮೂರಾವೃತ್ತಿಗಳಲ್ಲಿ ಪಠಿಸಿ, ಉಳಿದ ಎರಡು ಮಂತ್ರಗಳನ್ನು ಒಂದೊಂದು ಆವೃತ್ತಿಯಂತೆ ಪಠಿಸಿದರೆ ಹದಿನೈದು ಸಾಮಗಳಾಗುತ್ತವೆ.
ಈ ಹದಿನೈದು ಸಾಮಗಳ ಗುಂಪನ್ನು ನಾಲ್ಕುಬಾರಿ ಪಠಿಸಿದರೆ ಅದು ರಾಜ್ಯಸ್ತೋತ್ರವಾಗುತ್ತದೆ. ಇದನ್ನು ರಾಜನಸ್ತೋತ್ರವೆಂದು ಶ್ರೌತಪರಿಭಾಷೆಯಲ್ಲಿ ಹೇಳುತ್ತಾರೆ. ಸಾಮಗಳ ಗುಂಪನ್ನು ಸ್ತೋಮ ಅಥವಾ ಸ್ತೋತ್ರ ಎನ್ನುತ್ತಾರೆ. ಗಣೇಶನು ಸ್ತೋಮ ಸ್ವರೂಪನಾದ್ದರಿಂದ ಸಾಮಪಂಚದಶನು.
ಓಂ ಸಾಮಪಂಚದಶಾಯ ನಮಃ

937. ಓಂ ಪಂಚದಶೀಶೀತಾಂಶು ನಿರ್ಮಲಃ-
ಭಾ: ಸ್ವಚ್ಛೋ ರಾಕೇಂದುವತ್ಪಂಚ-ದಶೀಶೀತಾಂಶು ನಿರ್ಮಲಃ|
ಹುಣ್ಣಿಮೆಯ ಚಂದ್ರನಂತೆ ಸ್ವಚ್ಛನಾದ್ದರಿಂದ ಪಂಚದಶೀಶೀತಾಂಶುನಿರ್ಮಲನು.
ಓಂ ಪಂಚದಶೀಶೀತಾಂಶುನಿರ್ಮಲಾಯ ನಮಃ

938. ಓಂ ಷೋಡಶಾಧಾರನಿಲಯಃ-
ಭಾ: ಷೋಡಶಾಧಾರನಿಲಯೋsಸ್ಯಂತಶ್ಚಕ್ರೇಷು ಸಂಸ್ಥಿತಃ|
ಷಡಾಧಾರ ನವಾಧಾರ ಷೋಡಶಾಧಾರ ಲಕ್ಷಣಮ್‌||
ವೇದ್ಯಂ ಗುರುಮುಖಾದೇವೇತ್ಯಾಗಮಂ ಶಿವಶಾಸನಮ್‌|
ಹೇ ಗಣೇಶ! ಅಂತಶ್ಚಕ್ರಗಳಾದ ಹದಿನಾರು ಚಕ್ರಗಳಲ್ಲಿ ಇರುವವನಾದ್ದರಿಂದ ನೀನು ಷೋಡಶಾಧಾರ ನಿಲಯನು.
ಷಡಾಧಾರ, ನವಾಧಾರ, ಷೋಡಶಾಧಾರ ಚಕ್ರಗಳ ಲಕ್ಷಣವನ್ನು ಗುರುಗಳಿಂದಲೇ ತಿಳಿಯಬೇಕೆಂದು ಆಗಮಗಳಲ್ಲಿ ಶಿವಶಾಸನವು.
(ಸ್ವಂತ ಬುದ್ಧಿಯಿಂದ ತಿಳಿಯಲು ಪ್ರಯತ್ನ ಮಾಡಿದರೆ ಹಾನಿ ಉಂಟಾಗಬಹುದು)
ಓಂ ಷೋಡಶಾಧಾರನಿಲಯಾಯ ನಮಃ

939. ಓಂ ಷೋಡಶ ಸ್ವರಮಾತೃಕಃ-
ಭಾ: ಸ್ವರಾನ್ಮಿಮೀತೇ ಮಾನೇನ ಷೋಡಶಸ್ವರಮಾತೃಕಃ|
‘ಅ’ ಯಿಂದ ‘ಅಃ’ವರೆಗಿರುವ ಹದಿನಾರು ಅಕ್ಷರಗಳನ್ನು ಗಣನೆ ಮಾಡುವವನಾದ್ದರಿಂದ ಅಥವಾ ಸೃಷ್ಟಿ ಮಾಡುವವನಾದ್ದರಿಂದ ಷೋಡಶ-ಸ್ವರಮಾತೃಕನು.
ಓಂ ಷೋಡಶಸ್ವರಮಾತೃಕಾಯ ನಮಃ
ಷೋಡಶಾಂತಪದಾವಾಸಃ ಷೋಡಶೇಂದುಕಲಾತ್ಮಕಃ|
ಕಲಾಸಪ್ತದಶೀ ಸಪ್ತ-ದಶಃ ಸಪ್ತದಶಾಕ್ಷರಃ||

940. ಓಂ ಷೋಡಶಾಂತ ಪದಾವಾಸಃ-
ಭಾ: ಷೋಡಶಾಂತ ಪದಾವಾಸೋ ಬ್ರಹ್ಮರಂಧ್ರಾಬ್ಜಕರ್ಣಿಕಾಮ್‌|
ಆರಭ್ಯೋರ್ಧ್ವಂ ಷೋಡಶಾಂತ ಮುನ್ಮನ್ಯಾಃ ಪರತಃ ಸ್ಥಿತಃ||
ಬ್ರಹ್ಮರಂಧ್ರದ ಪದ್ಮಕರ್ಣಿಕೆಯಿಂದ ಮೇಲಿರುವ ಭಾಗವನ್ನು ಷೋಡಶಾಂತ ಎನ್ನುತ್ತಾರೆ. ಗಣೇಶನು ಉನ್ಮನೀ ಸ್ಥಾನಕ್ಕಿಂತಲೂ ಮೇಲಿದ್ದಾನೆ. ಆದ್ದರಿಂದ ಅವನು ಷೋಡಶಾಂತ ಪದಾವಾಸನು.
ಓಂ ಷೋಡಶಾಂತ ಪದಾವಾಸಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share