MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 19

551
Share

25-8-21

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 19

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

96 . ಓಂ ದುಸ್ಸ್ವಪ್ನಹೃತೇ ನಮಃ
97 . ಓಂ ಪ್ರಹಸನಾಯ ನಮಃ
98 . ಓಂ ಗುಣಿನೇ ನಮಃ
99 . ಓಂ ನಾದಪ್ರತಿಷ್ಠಿತಾಯ ನಮಃ
100 . ಓಂ ಸುರೂಪಾಯ ನಮಃ

96 . ಓಂ ದುಸ್ಸ್ವಪ್ನಹೃತ್ : –
ಭಾಷ್ಯ :
ದುಃಸ್ವಪ್ನಮಪಿ ಸುಸ್ವಪ್ನಂ ಕುರ್ವನ್‌ ದುಃಸ್ವಪ್ನಹೃನ್ಮತಃ ।

ಕೆಟ್ಟ ಕನಸುಗಳನ್ನು ಕೂಡಾ ಒಳ್ಳೆಯ ಕನಸುಗಳನ್ನಾಗಿ ಬದಲಾಯಿಸುವುದರಿಂದ ಗಣೇಶನು ದುಃಸ್ವಪ್ಪಹೃತ್ ಎಂದೆನಿಸಿಕೊಳ್ಳುತ್ತಾನೆ .
ಓಂ ದುಸ್ಸ್ವಪ್ನಹೃತೇ ನಮಃ

97 . ಓಂ ಪ್ರಸಹನಃ : –
ಭಾಷ್ಯ :
ಭಕ್ತಾಪರಾಧಾನ್ ಕ್ಷಮತೇ ತೇನ ಪ್ರಸಹನಃ ಸ್ಮೃತಃ ॥

ಭಕ್ತರ ಅಪರಾಧಗಳನ್ನು ಸಹಿಸಿಕೊಳ್ಳುತ್ತಾನೆ . ಆದಕಾರಣ ಗಣೇಶನು ಪ್ರಸಹನನು .
ಓಂ ಪ್ರಸಹನಾಯ ನಮಃ

98 . ಓಂ ಗುಣೀ : –
ಭಾಷ್ಯ :
ವಿಶೋಕವಿಜಿಘತ್ಸತ್ವಪ್ರಮುಖೈಃ ಸ್ಯಾತ್ ಗುಣೈರ್ಗುಣೀ ।

ಶೋಕವಿಲ್ಲದವನಾದ್ದರಿಂದ ಗುಣಿ ಎನಿಸಿಕೊಳ್ಳುತ್ತಾನೆ . ಒಳ್ಳೆಯ ಗುಣಗಳು ಇರುವುದರಿಂದಲೂ , ಸದ್ಗುಣಗಳನ್ನು ಕೊಡುವುದರಿಂದಲೂ ಗಣೇಶನು ಗುಣಿಯು . ಯಾರನ್ನೂ ಹಿಂಸಿಸದಿರುವುದರಿಂದಲೂ ಅವನು ಗುಣಿಯಾಗಿದ್ದಾನೆ .
ಓಂ ಗುಣಿನೇ ನಮಃ

99 . ಓಂ ನಾದಪ್ರತಿಷ್ಠಿತಃ : –
ಭಾಷ್ಯ :
ಅಸ್ತಿ ಪ್ರಣವಬಿಂಟ್ವಂತೇ ೭ ರ್ಧಚಂದ್ರಾದ್ಯಕ್ಷ ರಾಷ್ಟಕಂ ।
ತತ್ರ ನಾದಸ್ತೃತೀಯಸ್ತದ್ವಾಚ್ಯೋ ನಾದಪ್ರತಿಷ್ಠಿತಃ ॥

ಓಂಕಾರದ ಬಿಂದುವಿನ ಕೊನೆಯಲ್ಲಿ ಅರ್ಧಚಂದ್ರ ಮೊದಲಾದ ಎಂಟು ಅಕ್ಷರಗಳಿರುತ್ತವೆ . ಅವುಗಳಲ್ಲಿ ಮೂರನೆಯದು ನಾದ . ಆ ನಾದದಿಂದ ಗಣೇಶನು ಹೇಳಲ್ಪಡುತ್ತಾನೆ . ಆದ್ದರಿಂದ ಅವನಿಗೆ ನಾದಪ್ರತಿಷ್ಠಿತನೆಂದು ಹೆಸರು .
ಓಂ ನಾದಪ್ರತಿಷ್ಠಿತಾಯ ನಮಃ

ಸುರೂಪಃ ಸರ್ವನೇತ್ರಾಧಿ – ವಾಸೋ ವೀರಾಸನಾಶ್ರಯಃ ।
ಪೀತಾಂಬರಃ ಖಂಡರದಃ ಖಂಡೇಂದುಕೃತಶೇಖರಃ ||

100 . ಓಂ ಸುರೂಪಃ : –
ಭಾಷ್ಯ :
ಸುರೂಪೋ ಭೂರಿಲಾವಣ್ಯಾದ್ಯದ್ವಾ ತತ್ತ್ವನಿರೂಪಣಾತ್ |

ಬೇಕಾದಷ್ಟು ಲಾವಣ್ಯ ( ಸೌಂದರ್ಯ ) ವಂತನಾದ್ದರಿಂದಲೂ , ತತ್ತ್ವವನ್ನು ನಿರೂಪಣೆ ಮಾಡುವವನಾದ್ದರಿಂದಲೂ ಗಣೇಶನು ಸುರೂಪನು .
ಓಂ ಸುರೂಪಾಯ ನಮಃ

ಇತಿ ಭಾರತ್ಯುಪಾಖ್ಯಸ್ಯ ಭಾಸ್ಕರಾಗ್ನಿಚಿತಃ ಕೃತೌ ಗಣೇಶ ನಾಮಸಾಹಸ್ರ ಖದ್ಯೋತೇ ಪ್ರಥಮಂ ಶತಮ್ ||

ಭಾರತೀ ಎಂಬ ನಾಮಾಂತರವಿರುವ ಭಾಸ್ಕರಾಗ್ನಿಹೋತ್ರಿಗಳ ಕೃತಿಯಾದ ಗಣೇಶ ಸಹಸ್ರನಾಮದ ಖದ್ಯೋತವೆಂಬ ವ್ಯಾಖ್ಯಾನದಲ್ಲಿ ಮೊದಲನೆಯ ನೂರು ನಾಮಗಳು ಸಮಾಪ್ತವಾದವು .

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ


Share