MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 178

201
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 178

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

961 . ಓಂ ಪಂಚಾಶದಕ್ಷರಶ್ರೇ ನಮಃ
962 . ಓಂ ಪಂಚಾಶದುದ್ರವಿಗ್ರಹಾಯ ನಮಃ
963 . ಓಂ ಪಂಚಾಶದ್ವಿಷ್ಣುಶಕ್ತಿಶಾಯ ನಮಃ
964 . ಓಂ ಪಂಚಾನ್ಮಾತೃಕಾಲಯಾಯ ನಮಃ
965 . ಓಂ ದ್ವಿಪಂಚಾಶದ್ವಪುಶ್ಶ್ರೇಣ್ಯೈ ನಮಃ

961 . ಓಂ ಪಂಚಾಶದಕ್ಷರಶ್ರೇಣೀ
ಭಾ : ಪಂಚಾಶದಕ್ಷರ ಶ್ರೇಣೀತ್ಯುಚ್ಯತೇ ಮಾತೃಕಾತ್ಮನಾ ।
ಅಕಾರಾದಿ ಹಕಾರಾಂತದವರೆಗಿರುವ ೫೦ ಅಕ್ಷರಗಳ ಆತ್ಮನಾದ್ದರಿಂದ ಪಂಚಾದಕ್ಷರಶ್ರೇಣೀ ,
ಓಂ ಪಂಚಾಶದಕ್ಷರಶ್ರೇ ನಮಃ

962 . ಓಂ ಪಂಚಾಶದ್ರುದ್ರವಿಗ್ರಹಃ
ಭಾ : ಶ್ರೀಕಂಠಾದಿ ಶಿವಾತ್ಮತ್ವಾತ್ ಪಂಚಾಶದ್ರುದ್ರವಿಗ್ರಹಃ ।
ಶ್ರೀಕಂಠನು ಮೊದಲಾದ ಐವತ್ತು ಮಂದಿ ರುದ್ರರ ಸ್ವರೂಪನಾದ್ದರಿಂದ ಪಂಚಾಶದ್ರುದ್ರವಿಗ್ರಹನು .
ಓಂ ಪಂಚಾಶದುದ್ರವಿಗ್ರಹಾಯ ನಮಃ
ಪಂಚಾಶದ್ವಿಷ್ಣುಶಕ್ತಿಶಃ ಪಂಚಾಶನ್ಮಾತೃಕಾಲಯಃ ।
ದ್ವಿಪಂಚಾಶದ್ವಪುಃ ಶ್ರೇಣೀ ತ್ರಿಷಷ್ಟ್ಯಕ್ಷರ ಸಂಶ್ರಯಃ ।।
ಚತುಷ್ಟಷ್ಟ್ಯರ್ಣನಿರ್ಣೇತಾ ಚತುಷ್ಟಷ್ಟಿ ಕಲಾನಿಧಿಃ ।

963 . ಓಂ ಪಂಚಾಶದ್ವಿಷ್ಣುಶಕ್ತೀಶಃ :
ಭಾ . ಕೇಶವಾಧ್ಯಾತ್ಮ ಕೀರ್ತ್ಯಾದ್ಯಾ ವಿಷ್ಣವಸ್ತಸ್ಯ ಶಕ್ತಿಯಃ। ಪಂಚಾಶದ್ವಿಷ್ಣುಶಕ್ತೀಶಸ್ತದೀಶತ್ವೇನ ಕಥ್ಯಸೇ ॥
ಕೇಶವ ಮೊದಲಾದ ಐವತ್ತು ಹೆಸರುಗಳಿರುವ ವಿಷ್ಣುಸ್ವರೂಪಗಳಿವೆ . ಕೀರ್ತಿ ಮೊದಲಾದವರು ಅವರ ಶಕ್ತಿಸ್ವರೂಪದವರಾಗಿದ್ದಾರೆ . ಗಣೇಶನು ಮಹಾವಿಷ್ಣು ಸ್ವರೂಪನಾಗಿ ವಿಷ್ಣುಶಕ್ತಿಗಳಿಗೆ ಅಧಿಪತಿಯಾಗಿ ಪಂಚಾಶದ್ವಿಷ್ಣುಶಕೀಶನಾಗಿದ್ದಾನೆ .
ಓಂ ಪಂಚಾಶದ್ವಿಷ್ಣುಶಕ್ತಿಶಾಯ ನಮಃ

964 . ಓಂ ಪಂಚಾಶನ್ಮಾತೃಕಾಲಯ :
ಭಾ : ಏಕಪಂಚಾಶತೋರ್ಣಾನಾಮಾಲಯೋ ಲಯ ಏವ ವಾ ।
ನಾದ ಏವ ತದಾತ್ಮತ್ವಾ ಶೃಂಚಾಶನ್ಮಾತೃಕಾಲಯಃ ॥
‘ ಕ್ಷ ‘ ಎಂಬ ಅಕ್ಷರ ದೊಂದಿಗೆ ಕೂಡಿದ ಅಕಾರಾದಿ ಹಕಾರಾಂತ ಐವತ್ತೊಂದು ಅಕ್ಷರಗಳಿಗೆ ಆಶ್ರಯನು , ಅವುಗಳನ್ನು ತನ್ನಲ್ಲಿ ಲಯಮಾಡಿಕೊಳ್ಳುವ ನಾದಾತ್ಮಕನಾದ್ದರಿಂದ ಪಂಚಾಶನ್ಮಾತೃಕಾಲಯನು .
ಓಂ ಪಂಚಾನ್ಮಾತೃಕಾಲಯಾಯ ನಮಃ

965 . ಓಂ ದ್ವಿಪಂಚಾಶದ್ವಪುಶ್ಶ್ರೇಣೀ –
ಭಾ : ಲೈಂಗವರ್ಣಿತಪಾಶಾನಾ ಮವಿದ್ಯಾ ಪಂಚಪರ್ವಣಿ । ಅಷ್ಟಾಷ್ಟದಿಗ್ವಸುಧೃತಿಭಿನ್ನಾನಾಂ ದೇಹದಾಯಿನಾಮ್ ॥
ತದ್ರೂಪತ್ವಾದ್ ದ್ವಿಪಂಚಾಶದ್ವಪುಶ್ಶ್ರೇಣೀತಿ ಗೀಯಸೇ ।
ಲಿಂಗಪುರಾಣದಲ್ಲಿ ೧ , ಅವಿದ್ಯ , ೨ , ಅಸ್ಮಿತ , ೩ , ರಾಗ , ೪. ದ್ವೇಷ , ೫ . ಅಭಿನಿವೇಶಗಳೆಂಬ ಪಾಠಗಳು ಹೇಳಲ್ಪಟ್ಟಿವೆ .
ಆ ಪಾಶಗಳನ್ನು ವರಸೆಯಾಗಿ ೧ , ತಮಸ್ಸು , ೨. ಮೋಹ , ೩. ಮಹಾಮೋಹ, ೪. ತಾಮಿಸ್ರ, ೫ . ಅಂಧತಾಮಿಸ್ರಗಳೆಂದು ಕರೆಯುತ್ತಾರೆ.
ಇವುಗಳಲ್ಲಿ ಮೊದಲನೆಯ ಪಾಶದಲ್ಲಿ ಎಂಟು ವಿಧ, ಎರಡನೆಯದು ಎಂಟು ವಿಧದಲ್ಲಿದೆ. ಮೂರನೆಯದು ಹತ್ತು, ನಾಲ್ಕನೆಯದು ಎಂಟು, ಐದನೆಯದಾದ ಪಾಶವು ಹದಿನೆಂಟುವಿಧದಲ್ಲಿಯೂ ಇರುವುದರಿಂದ ಒಟ್ಟು ಐವತ್ತೆರಡು ಪಾಶಗಳಾಗುತ್ತವೆ. ಜೀವಿಗೆ ದೇಹ ಬರಲು ಈ ಐವತ್ತೆರಡು ಪಾಶಗಳು ಪ್ರಧಾನ ಕಾರಣಗಳಾಗಿವೆ. ಗಣೇಶನು ಉಪಾಧಿಕಾರಕನಾದ್ದರಿಂದ ಅವನನ್ನು ದ್ವಿಪಂಚಾಶದ್ವಪುಶ್ಶ್ರೇಣೀ ಎಂದು ಕರೆಯುತ್ತಾರೆ.
ಓಂ ದ್ವಿಪಂಚಾಶದ್ವಪುಶ್ಶ್ರೇಣ್ಯೈ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share