MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 184

293
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 184

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

991 . ಓಂ ಚತುರ್ಲಕ್ಷಪ್ರಕಾಶಿತಾಯ ನಮಃ
992 . ಓಂ ಚತುರಶೀತಿಲಕ್ಷಾಣಾಂ ಜೀವಾನಾಂ ದೇಹಸಂಸ್ಥಿತಾಯ ನಮಃ
993 . ಓಂ ಕೋಟಿಸೂರ್ಯ ಪ್ರತೀಕಾಶಾಯ ನಮಃ
994 . ಓಂ ಕೋಟಿಚಂದ್ರಾಂಶುನಿರ್ಮಲಾಯ ನಮಃ
995 . ಓಂ ಶಿವಾಭವಾಧ್ಯುಷ್ಟಕೋಟಿವಿನಾಯಕಧುರಂಧರಾಯ ನಮಃ

991. ಓಂ ಚತುರ್ಲಕ್ಷ ಪ್ರಕಾಶಿತಃ-
ಭಾ: ಪುರಾಣಾಷ್ಟಾದಶಗ್ರಂಥಸಂಖ್ಯಾ ಲಕ್ಷಚತುಷ್ಟಯಮ್‌೤
ತೈಃ ಪ್ರಕಾಶಿತ ರೂಪಸ್ತ್ವಂ ಚತುರ್ಲಕ್ಷ ಪ್ರಕಾಶಿತಃ೤೤
ಅಷ್ಟಾದಶ ಪುರಾಣಗಳಲ್ಲಿ ಒಟ್ಟು ನಾಲ್ಕು ಲಕ್ಷ ಶ್ಲೋಕಗಳಿವೆ. ಆ ಶ್ಲೋಕಗಳೆಲ್ಲವೂ ಯಾವುದೋ ಒಂದು ರೀತಿಯಲ್ಲಿ ಗಣೇಶನ ತತ್ತ್ವವನ್ನೇ ಹೇಳುತ್ತಿವೆ. ಆದ್ದರಿಂದ ಅವನು ಚತುರ್ಲಕ್ಷಪ್ರಕಾಶಿತನು.
(ಈ ನಾಮವು ಗಣೇಶನನ್ನು ಪರೋಕ್ಷವಾಗಿ ಸರ್ವದೇವತಾ ಸ್ವರೂಪನಾದ ಪರಮಾತ್ಮನೆಂದು ಹೇಳುತ್ತಿದೆ.
ಮಹಾಪುರಾಣಗಳ ಶ್ಲೋಕ ಸಂಖ್ಯೆ :-
1. ಬ್ರಹ್ಮ – 10 000
2. ಪದ್ಮ – 55 000
3. ವಿಷ್ಣು – 8 000
4. ಶಿವ, ವಾಯು – 24 000
5. ಭಾಗವತ – 18 000
6. ನಾರದ – 25 000
7. ಮಾರ್ಕಂಡೇಯ – 9 000
8. ಅಗ್ನಿ – 8 000
9. ಭವಿಷ್ಯತ್ – 31 000
10. ಬ್ರಹ್ಮವೈವರ್ತ – 12 000
11. ಲಿಂಗ – 11 000
12. ವರಾಹ – 24 000
13. ಸ್ಕಾಂದ – 100 000
14. ವಾಮನ – 14 000
15. ಕೂರ್ಮ – 24 000
16 ಮತ್ಸ್ಯ – 6 000
17 ಗರುಡ – 19 000
18 ಬ್ರಹ್ಮಾಂಡ – 12 000
(ಈ ಶ್ಲೋಕ ಸಂಖ್ಯೆಯು ಕಲ್ಪಾನುಗುಣವಾಗಿ ಬದಲಾಗುತ್ತಿರುತ್ತದೆ. ಪುರಾಣಗಳ ಶ್ಲೋಕ ಸಂಖ್ಯೆಯು ಒಂದೊಂದು ಪುರಾಣದಲ್ಲಿ ಒಂದೊಂದು ರೀತಿಯಲ್ಲಿ ಹೇಳಲ್ಪಟ್ಟಿದೆ. ಈಗ ಲೋಕದಲ್ಲಿ ಲಭ್ಯವಿರುವ ಪುರಾಣ ಸಂಖ್ಯೆಗಳಲ್ಲಿ ಎಂಟು ಸಾವಿರ ಶ್ಲೋಕಗಳು ಕಡಿಮೆ ಇವೆ. ಗರುಡ ಪುರಾಣದಲ್ಲಿ ಕೇವಲ ಒಂಬೈನೂರು ಶ್ಲೋಕಗಳು ಮಾತ್ರ ಲಭ್ಯವಾಗಿವೆ. ಇದು ನಮ್ಮ ದುಃಸ್ಥಿತಿ. ಸನಾತನ ವಾಙ್ಮಯವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.)
ಓಂ ಚತುರ್ಲಕ್ಷಪ್ರಕಾಶಿತಾಯ ನಮಃ

992. ಓಂ ಚತುರಶೀತಿ ಲಕ್ಷಾಣಾಂ ಜೀವಾನಾಂ ದೇಹಸಂಸ್ಥಿತಃ-
993. ಓಂ ಕೋಟಿಸೂರ್ಯ ಪ್ರತೀಕಾಶಃ-
994. ಓಂ ಕೋಟಿ ಚಂದ್ರಾಂಶು ನಿರ್ಮಲಃ-
ಭಾ: ಸರ್ವಜೀವಾತ್ಮತೇಯತ್ತಾ7ನವಚ್ಛೇದಶ್ಚ ರೋಚಿಷಃ೤
ಕಲಂಕತಾಪಾಸಂಪರ್ಕಃ ಕಥ್ಯತೇ ನಾಮಭಿಸ್ತ್ರಿಭಿಃ೤೤
ಚತುರಶೀತಿ ಲಕ್ಷಾಣಾಂ ಜೀವಾನಾಂ ದೇಹಸಂಸ್ಥಿತಃ೤೤
ಕೋಟಿ ಸೂರ್ಯ ಪ್ರತೀಕಾಶಃ ಕೋಟಿ ಚಂದ್ರಾಂಶು ನಿರ್ಮಲಃ೤
ಎಂಬತ್ನಾಲ್ಕು ಲಕ್ಷ ವಿಧಗಳಾದ ಜೀವಿಗಳ ದೇಹಗಳಲ್ಲಿ ಅಂತರ್ಯಾಮಿಯಾಗಿ ಇರುವವನು, ನಿರ್ದಿಷ್ಟವಾಗಿ ಅಳತೆ ಮಾಡಲು ಸಾಧ್ಯವಾಗದವನು, ಜೀವಿಗಳ ಕಳಂಕ ಮತ್ತು ತಾಪಗಳ ಸಂಪರ್ಕವು ಸ್ವಲ್ಪವೂ ಇಲ್ಲದವನು ಆದ ಗಣೇಶನು ಈ ಮೂರು ಹೆಸರುಗಳಿಂದ ಹೇಳಲ್ಪಡುತ್ತಿದ್ದಾನೆ.
ಓಂ ಚತುರಶೀತಿಲಕ್ಷಾಣಾಂ ಜೀವಾನಾಂ ದೇಹಸಂಸ್ಥಿತಾಯ ನಮಃ
ಕೋಟಿ ಸೂರ್ಯರಂತೆ ಪ್ರಕಾಶಿಸುತ್ತಿರುವ ಗಣೇಶನ ಬೆಳಕನ್ನು ಅಳತೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವನು ಕೋಟಿಸೂರ್ಯ ಪ್ರತೀಕಾಶನು.
ಓಂ ಕೋಟಿಸೂರ್ಯ ಪ್ರತೀಕಾಶಾಯ ನಮಃ
ಕೋಟಿ ಚಂದ್ರರ ಕಿರಣಗಳಂತೆ ಕಳಂಕರಹಿತನು, ತಂಪಾದವನು ಆದ್ದರಿಂದ ಕೋಟಿಚಂದ್ರಾಂಶು ನಿರ್ಮಲನು.
ಓಂ ಕೋಟಿಚಂದ್ರಾಂಶುನಿರ್ಮಲಾಯ ನಮಃ
ಶಿವಾಭವಾಧ್ಯುಷ್ಟಕೋಟಿ ವಿನಾಯಕ ಧುರಂಧರಃ೤೤

995. ಓಂ ಶಿವಾಭವಾಧ್ಯುಷ್ಟಕೋಟಿ ವಿನಾಯಕ ಧುರಂಧರಃ-
ಭಾ: ಗ್ರಹಾ ವಿನಾಯಕಾಭಿಖ್ಯಾಃ ಸಾರ್ಧಕೋಟಿತ್ರಯಾತ್ಮಕಾಃ೤
ಭವಸ್ಯ ಚ ಶಿವಾಯಾಶ್ಚ ಪ್ರತ್ಯೇಕಂ ಸಂತಿ ತತ್ಪತಿಃ೤೤
ಶಿವಾಭವಾಧ್ಯುಷ್ಟಕೋಟಿವಿನಾಯಕಧುರಂಧರಃ೤
ವಿನಾಯಕ ಗ್ರಹಗಳೆಂಬ ಹೆಸರಿನ ಮೂರು ಕೋಟಿ ಐವತ್ತುಲಕ್ಷ ಗ್ರಹಗಳಿವೆ. ಶಿವಗ್ರಹಗಳು, ಶಿವಾ (ಪಾರ್ವತಿ) ಗ್ರಹಗಳು ಕೂಡಾ ಅಷ್ಟೇ ಸಂಖ್ಯೆಯಲ್ಲಿವೆ. ಒಟ್ಟು ಹತ್ತುಕೋಟಿ ಐವತ್ತು ಲಕ್ಷ ಗ್ರಹಗಳು. ಗಣೇಶನು ಆ ಗ್ರಹಗಳ ನಾಯಕನಾಗಿದ್ದಾನೆ.
ಓಂ ಶಿವಾಭವಾಧ್ಯುಷ್ಟಕೋಟಿವಿನಾಯಕಧುರಂಧರಾಯ ನಮಃ
ಸಪ್ತಕೋಟಿ ಮಹಾಮಂತ್ರ ಮಂತ್ರಿತಾವಯವದ್ಯುತಿಃ೤
ತ್ರಯಸ್ತ್ರಿಂಶತ್ಕೋಟಿ ಸುರಶ್ರೇಣೀ ಪ್ರಣತ ಪಾದುಕಃ೤೤

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share