MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 99

278
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 99

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

507 . ಓಂ ಓಂ ಸ್ಥಾಣವೇ ನಮಃ
508 . ಓಂ ಸ್ಥಾಣುಪ್ರಿಯಾಯ ನಮಃ
509 . ಓಂ ಓಂ ಸ್ಥಾತ್ರೇ ನಮಃ
510 . ಓಂ ಸ್ಥಾವರಾಯ ಜಂಗಮಾಯ ಜಗತೇ ನಮಃ
511 . ಓಂ ದಕ್ಷಯಜ್ಞಪ್ರಮಥನಾಯ ನಮಃ

507. ಓಂ ಸ್ಥಾಣುಃ-
ಭಾ: ಸ್ಥಾಣುಃ ಕಲ್ಪಾಂತವಾತಾಗ್ನಿಸಲಿಲೈರಪ್ಯಕಂಪಿತಃ।
ಪ್ರಳಯಕಾಲದ ಅಗ್ನಿ, ವಾಯು, ಜಲಗಳಿಂದಲೂ ಕೂಡಾ ಕದಲಿಸುವುದಕ್ಕೆ ಸಾಧ್ಯವಾಗದವನು. ಆದ್ದರಿಂದ ಸ್ಥಾಣುವು.
ಓಂ ಸ್ಥಾಣವೇ ನಮಃ

508. ಓಂ ಸ್ಥಾಣುಪ್ರಿಯಃ-
ಭಾ: ಸ್ಥಾಣೋಃ ಶಿವಸ್ಯಪುತ್ರತ್ವಾತ್ ಸ್ಥಾಣುಪ್ರಿಯ ಇತೀರ್ಯಸೇ।
ಹೇ ಶಿವಪ್ರಿಯ! ನೀನು ಸ್ಥಾಣುವಾದ ಶಿವನ ಮಗನಾದ್ದರಿಂದ ಸ್ಥಾಣುಪ್ರಿಯನೆಂದು ಕರೆಸಿಕೊಳ್ಳುತ್ತೀಯೆ.
ಓಂ ಸ್ಥಾಣುಪ್ರಿಯಾಯ ನಮಃ

509. ಓಂ ಸ್ಥಾತಾ-
ಭಾ: ಸ್ಥಾತಾ ಯುದ್ಧೇಪಿ ಕಲ್ಪೇ7ಪಿ ನಿಷ್ಕಂಪೋ ಗಗನಾದಿವತ್‌।
ಯುದ್ಧದಲ್ಲಿಯೂ, ಪ್ರಳಯದಲ್ಲಿಯೂ, ಆಕಾಶದಂತೆ ನಿಷ್ಕಂಪನಾಗಿ ಇರುತ್ತಾನೆ. ಆದ್ದರಿಂದ ಅವನು ಸ್ಥಾತಾ.
ಓಂ ಸ್ಥಾತ್ರೇ ನಮಃ

510. ಓಂ ಸ್ಥಾವರಂ ಜಂಗಮಂ ಜಗತ್-
ಭಾ: ಚರಾಚರಾತ್ಮಕತ್ವೇನ ಸ್ಥಾವರಂ ಜಂಗಮಂ ಜಗತ್‌।
ಚರಾಚರ ಜಗತ್ಸ್ವರೂಪನಾದ್ದರಿಂದ ಅವನು ಸ್ಥಾವರಂ ಜಂಗಮಂ ಜಗತ್. (ಸ್ಥಾವರಂ – ಕದಲದಿರುವುದು, ಜಂಗಮಂ – ಕದಲುತ್ತಿರುವುದು)
ಓಂ ಸ್ಥಾವರಾಯ ಜಂಗಮಾಯ ಜಗತೇ ನಮಃ
ದಕ್ಷಯಜ್ಞಪ್ರಮಥನೋ ದಾತಾ ದಾನವಮೋಹನಃ।
ದಯಾವಾನ್ ದಿವ್ಯವಿಭವೋ ದಂಡಭೃದ್ದಂಡನಾಯಕಃ॥

511. ಓಂ ದಕ್ಷಯಜ್ಞಪ್ರಮಥನಃ-
ಭಾ: ದಕ್ಷಯಜ್ಞಪ್ರಮಥನೋ ಭವಾನೇವ ಶಿವಾತ್ಮನಾ
ಹೇ ಶಿವಸುತನೇ! ಶಿವನರೂಪದಲ್ಲಿ ದಕ್ಷಯಜ್ಞವನ್ನು ಧ್ವಂಸ ಮಾಡಿದವನು ನೀನೇ. ಆದ್ದರಿಂದ ನೀನು ದಕ್ಷಯಜ್ಞಪ್ರಮಥನನು.
ಓಂ ದಕ್ಷಯಜ್ಞಪ್ರಮಥನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share