MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 190

248
Share

 ಗಣೇಶ ಸಹಸ್ರನಾಮ ಶ್ರೀಭಾಷ್ಯ : ಪುಟ – 190

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ನಿಷ್ಕಾಮಸ್ತು ಜಪನ್ನಿತ್ಯಂ ಭಕ್ತ್ಯಾ ವಿಘ್ನೇಶತತ್ಪರಃ೤
ಯೋಗಸಿದ್ಧಿಂ ಪರಾಂ ಪ್ರಾಪ್ಯ ಜ್ಞಾನವೈರಾಗ್ಯಸಂಸ್ಥಿತಃ೤೤
ನಿರಂತರೋದಿತಾನಂದೇ ಪರಮಾನಂದಸಂವಿದಿ೤
ವಿಶ್ವೋತ್ತೀರ್ಣೇ ಪರೇ ಪಾರೇ ಪುನರಾವೃತ್ತಿವರ್ಜಿತೇ೤೤
ಲೀನೋ ವೈನಾಯಕೇ ಧಾಮ್ನಿ ರಮತೇ ನಿತ್ಯನಿರ್ವೃತಃ೤
ಯೋ ನಾಮಭಿರ್ಹೃನೇದೇತೈರರ್ಚಯೇತ್ಪೂಜಯೇನ್ನರಃ೤೤
ರಾಜಾನೋ ವಶ್ಯತಾಂ ಯಾಂತಿ ರಿಪವೋ ಯಾಂತಿ ದಾಸತಾಮ್‌೤
ಮಂತ್ರಾಃ ಸಿದ್ಧ್ಯಂತಿ ಸರ್ವೇ7ಪಿ ಸುಲಭಾಸ್ತಸ್ಯ ಸಿದ್ಧಯಃ೤೤
ಮೂಲಮಂತ್ರಾದಪಿ ಸ್ತೋತ್ರಮಿದಂ ಪ್ರಿಯತರಂ ಮಮ೤
ನಭಸ್ಯೇ ಮಾಸಿ ಶುಕ್ಲಾಯಾಂ ಚತುರ್ಥ್ಯಾಂ ಮಮ ಜನ್ಮನಿ೤೤
ಭಾ:- ತೃತೀಯಮಾಹ ಸಾರ್ಧದ್ವಯೇನ ನಿಷ್ಕಾಮ ಇತ್ಯಾದಿನಾ೤ ಲೀನಃ ಜೀವೋಪಾಧಿಲಯಾತ್‌೤ ಹುನೇತ್ ಜುಹುಯಾತ್, ಆರ್ಷಂ ರೂಪಂ೤ ಮೂಲಮಂತ್ರಾದಷ್ಟಾವಿಶಂತ್ಯಕ್ಷರ ಮಹಾಗಣಪತಿ ಮಂತ್ರಾತ್, ನಭಸ್ಯೇ ಭಾದ್ರಪದೇ೤೤
ತಾ: ಇನ್ನು ಮೂರನೆಯ ಸಾಧಕನಾದ ನಿಷ್ಕಾಮನ ವಿಷಯವನ್ನು ಕುರಿತು ತಿಳಿಸುತ್ತಾರೆ. ಗಣೇಶತತ್ಪರನಾಗಿ ಭಕ್ತಿಯಿಂದ ಜಪಿಸಿದ ನಿಷ್ಕಾಮಭಕ್ತನು ಅತ್ಯುನ್ನತವಾದ ಯೋಗಸಿದ್ಧಿಯನ್ನು ಪಡೆಯುತ್ತಾನೆ. ಜ್ಞಾನ, ವೈರಾಗ್ಯನಿರತನಾಗಿ, ನಿತ್ಯಾನಂದವಾದ ಪರಮಾನಂದ ಜ್ಞಾನದಲ್ಲಿ ಮುಳುಗಿಹೋಗುತ್ತಾನೆ. ವಿಶ್ವಕ್ಕಿಂತ ಆಚೆಯಿರುವ ಪುನರಾವೃತ್ತಿಯಿಲ್ಲದ ಬ್ರಹ್ಮಪದಾರ್ಥದಲ್ಲಿ ಲಯವಾಗಿಬಿಡುತ್ತಾನೆ. ಅವನಿಗಿನ್ನು ಜೀವೋಪಾಧಿ ಇರುವುದಿಲ್ಲ. ವಿನಾಯಕನ ಪರಂಧಾಮದಲ್ಲಿ ರಮಿಸುತ್ತಾ ಆನಂದದಿಂದ ಇರುತ್ತಾನೆ.
ಯಾರು ಈ ನಾಮಗಳಿಂದ ಹೋಮ, ಅರ್ಚನೆ, ಪೂಜಾದಿಗಳನ್ನು ಮಾಡುತ್ತಾರೆಯೋ ಅವರಿಗೆ ರಾಜರು ವಶರಾಗುತ್ತಾರೆ. ಶತ್ರುಗಳು ದಾಸರಾಗುತ್ತಾರೆ. ಮಂತ್ರಗಳೆಲ್ಲವೂ ಸಿದ್ಧಿಸುತ್ತವೆ. ಸಿದ್ಧಿಗಳು ಸುಲಭವಾಗಿ ಕೈಗೂಡುತ್ತವೆ. ಈ ನಾಮಸಹಸ್ರವು ನನಗೆ ಇಪ್ಪತ್ತೆಂಟು ಅಕ್ಷರದ ಮಹಾಗಣಪತಿ ಮೂಲ ಮಂತ್ರಕ್ಕಿಂತಲೂ ಪ್ರಿಯವಾದದ್ದು.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share