MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 94

242
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 94

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

479 . ಓಂ ಛಂದಸೇ ನಮಃ
480 . ಓಂ ಛಂದೋವಪುಷೇ ನಮಃ
481 . ಓಂ ಛಂದೋದುರ್ಲಕ್ಷ್ಯಾಯ ನಮಃ
482 . ಓಂ ಛಂದವಿಗ್ರಹಾಯ ನಮಃ
483 . ಓಂ ಜಗದ್ಯೋನಯೇ ನಮಃ
484 . ಓಂ ಓಂ ಜಗತ್ಸಾಕ್ಷಿಣೇ ನಮಃ
485 . ಓಂ ಜಗದೀಶಾಯ ನಮಃ
486 . ಓಂ ಜಗನ್ಮಯಾಯ ನಮಃ

479. ಓಂ ಛಂದಃ-
ಭಾ: ಗಾಯತ್ರ್ಯಾದ್ಯಾತ್ಮನಾ ಛಂದಃ…………..
ಗಾಯತ್ರೀಚ್ಛಂದಸ್ಸು ಮೊದಲಾದ ಛಂದಸ್ಸುಗಳ ಸ್ವರೂಪವೇ ತಾನಾದ್ದರಿಂದ ಅವನು ಛಂದಸ್ಸಾಗಿದ್ದಾನೆ.
ಓಂ ಛಂದಸೇ ನಮಃ

480. ಓಂ ಛಂದೋವಪುಃ-
ಭಾ: ……………………….ಭವಾನ್ ವೇದಮಯಾತ್ಮನಾ ।
ಛಂದೋವಪುಃ………………………………………॥
ವೇದಮಯವಾದ ಶರೀರಧಾರಿಯಾದ್ದರಿಂದ ಗಣೇಶನು ಛಂದೋವಪುಃ ಎಂದು ಕರೆಯಲ್ಪಡುತ್ತಾನೆ.
ಓಂ ಛಂದೋವಪುಷೇ ನಮಃ

481. ಓಂ ಛಂದೋದುರ್ಲಕ್ಷ್ಯಃ-
ಭಾ: ……………… ತಥಾ ಛಂದೋದುರ್ಲಕ್ಷ್ಯೋ ವೇದದುರ್ಗ್ರಹಃ॥
ವೇದಗಳಿಂದಲೂ ತಿಳಿಯತಕ್ಕವನಲ್ಲವನಾದ್ದರಿಂದ ಛಂದೋದುರ್ಲಕ್ಷ್ಯನು. (ಯತೋ ವಾಚೋ ನಿವರ್ತಂತೇ)
ಓಂ ಛಂದೋದುರ್ಲಕ್ಷ್ಯಾಯ ನಮಃ

482. ಛಂದವಿಗ್ರಹಃ-
ಭಾ: ಸ್ವಾಭಿಪ್ರಾಯಾನುಸಾರೀಣಿ ಭಕ್ತೇಃ ಪರವಶಾನಿ ವಾ।
ಅವತಾರಶರೀರಾಣಿ ಯಸ್ಯ ಸಚ್ಛಂದವಿಗ್ರಹಃ॥
ತನ್ನ ಸಂಕಲ್ಪಗಳಿಗೆ ಅನುಸಾರವಾದ ಅಥವಾ ಭಕ್ತಿಗೆ ವಶವಾದ ಅವತಾರಶರೀರಗಳನ್ನು ಧರಿಸುವುದರಿಂದ ಅವನು ಛಂದವಿಗ್ರಹನು. (ಯೋ ಯೋ ಯಾಂ ಯಾಂ ತನುಂ ಭಕ್ತಃ -ಭ.ಗೀ. 7-21)
ಓಂ ಛಂದವಿಗ್ರಹಾಯ ನಮಃ
ಜಗದ್ಯೋನಿರ್ಜಗತ್ಸಾಕ್ಷೀ ಜಗದೀಶೋ ಜಗನ್ಮಯಃ।
ಜಪೋ ಜಪಪರೋ ಜಪ್ಯೋ ಜಿಹ್ವಾಸಿಂಹಾಸನಪ್ರಭುಃ॥

483. ಜಗದ್ಯೋನಿಃ 484. ಜಗತ್ಸಾಕ್ಷೀ 485. ಜಗದೀಶಃ 486. ಜಗನ್ಮಯಃ
ಭಾ: ಜಗದ್ಯೋನಿರ್ಜಗತ್ಸಾಕ್ಷೀ ಜಗದೀಶೋ ಜಗನ್ಮಯಃ।
ವಿಶ್ವಸ್ಯ ಕಾರಣಂ ದ್ರಷ್ಟಾ ನಾಥೋ7ಧಿಷ್ಠಾನಮೇವ ಚ॥
ಸಮಸ್ತ ಜಗತ್ತಿಗೂ ಕಾರಣಭೂತನಾದ್ದರಿಂದ ಜಗದ್ಯೋನಿಯು. ವಿಶ್ವದ ದ್ರಷ್ಟನಾದ್ದರಿಂದ ಜಗತ್ಸಾಕ್ಷಿಯು. ವಿಶ್ವನಾಥನಾದ್ದರಿಂದ ಜಗದೀಶನು. ವಿಶ್ವರೂಪನಾದ್ದರಿಂದ ಜಗನ್ಮಯನು.
ಓಂ ಜಗದ್ಯೋನಯೇ ನಮಃ ಓಂ ಜಗತ್ಸಾಕ್ಷಿಣೇ ನಮಃ ಓಂ ಜಗದೀಶಾಯ ನಮಃ ಓಂ ಜಗನ್ಮಯಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share