MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 4

453
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ- ಪುಟ : 4

ಸಂಸ್ಕೃತದಿಂದ ಕನ್ನಡಕ್ಕೆ ಭಾಷಾನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ,
ಅವಧೂತ ದತ್ತ ಪೀಠ,
ಮೈಸೂರು.

ಇಂದಿನ ನಾಮಾವಳಿಗಳು –

12. ಓಂ ವಿಘ್ನನಾಯಕಾಯ ನಮಃ
13. ಓಂ ಸುಮುಖಾಯ ನಮಃ
14. ಓಂ ದುರ್ಮುಖಾಯ ನಮಃ
15. ಓಂ ಬುದ್ಧಾಯ ನಮಃ
16. ಓಂ ವಿಘ್ನರಾಜಾಯ ನಮಃ

12. ಓಂ ವಿನಾಯಕ :-
ಭಾಷ್ಯ : ವಿಘ್ಯಾನ್ನಯತ್ಯಭಕ್ಷೌಘಾನ್ ವಿಘ್ನಾನಾಮಧಿಪೋ ೭ ಥವಾ |
ಯದ್ವಾ ವಿಹನ್ತಿ ನಯತಿ ಪ್ರಾಣಿನೋ ವಿಘ್ನನಾಯಕಃ ||

ಭಕ್ತಿ ಇಲ್ಲದವರಿಗೆ ವಿಘ್ನಗಳನ್ನು ಉಂಟುಮಾಡುತ್ತಾನೆ . ವಿಘ್ನಗಳಿಗೆ ಅಧಿಪತಿಯಾಗಿದ್ದಾನೆ . ಪ್ರಾಣಿಗಳ ವಿಘ್ನಗಳನ್ನು ತೆಗೆದುಹಾಕುತ್ತಾನೆ . ಅಥವಾ ಅಡಚಣೆಗಳನ್ನು ತಂದುಹಾಕುತ್ತಾನೆ . ಈ ಎಲ್ಲಾ ಕಾರಣಗಳಿಂದಲೂ ಗಣೇಶನು ವಿಘ್ನನಾಯಕನಾಗಿದ್ದಾನೆ .
ಓಂ ವಿಘ್ನನಾಯಕಾಯ ನಮಃ

13. ಓಂ ಸುಮುಖ :-
ಭಾಷ್ಯ : ಆರಂಭಾಃ ಶೋಭನಾ ಯೇನ ಯಸ್ಯ ಶೋಭನಮಾನನಮ್ ।
ಸ ಏವ ಸುಮುಖಸ್ತಸ್ಮೈ ಸುಮುಖಾಯ ನಮೋ ನಮಃ ll

ಯಾರ ಕಾರಣದಿಂದ ಸಮಸ್ತ ಕರ್ಮಗಳು ಮಂಗಳಮಯವಾಗುವುವೋ , ಯಾರ ಮುಖವು ಮಂಗಳವನ್ನು ಉಂಟುಮಾಡುವುದೋ ಅವನು ಸುಮುಖನು . ಅವನೇ ಗಣೇಶನು . ಮುದ್ದಾದ ಮುಖವುಳ್ಳ ಸುಮುಖನಿಗೆ ನಮನವು .
ಓಂ ಸುಮುಖಾಯ ನಮಃ

14. ಓಂ ದುರ್ಮುಖ :-
ಭಾಷ್ಯ: ದುಃಸ್ಪರ್ಶಂ ವಾ ಸುದುರ್ದರ್ಶಮಗ್ನೇಃ ಸೂರ್ಯಸ್ಯ ವಾಮುಖಮ್ |
ತದ್ರೂಪತ್ವಾದಭಕ್ತೇಷು ತಥಾತ್ವಾಚ್ಚೈವ ದುರ್ಮುಖಃ ॥

ಭಕ್ತರಲ್ಲದವರಿಗೆ ಅಗ್ನಿಯ ಹಾಗೆ , ಸೂರ್ಯನ ಹಾಗೆ , ಮುಟ್ಟುವುದಕ್ಕಾಗಲಿ , ನೋಡುವುದಕ್ಕಾಗಲಿ ಸಾಧ್ಯವಾಗದ ತೀಕ್ಷ್ಣ ತೇಜಸ್ಸುಳ್ಳ ಮುಖವಿರುವುದರಿಂದ ಗಣೇಶನು ದುರ್ಮುಖನು .
ಓಂ ದುರ್ಮುಖಾಯ ನಮಃ

15. ಓಂ ಬುದ್ಧ :-
ಭಾಷ್ಯ : ನಿತ್ಯಬುದ್ಧಸ್ವರೂಪತ್ವಾತ್ ಅವಿದ್ಯಾವೃತ್ತಿ ನಾಶನಃ ।
ಯದ್ವಾ ಜಿನಾವತಾರತ್ವಾತ್ ಬುದ್ಧ ಇತ್ಯಭಿಧೀಯತೇ ||

ಎಲ್ಲಾ ಕಾಲದಲ್ಲಿಯೂ ಗಣೇಶನು ಜ್ಞಾನಸ್ವರೂಪನೇ . ಅವನು ಅವಿದ್ಯೆಯಿಂದ ಹುಟ್ಟುವ ಎಲ್ಲಾ ರೀತಿಯ ಚಿತ್ತವೃತ್ತಿಗಳನ್ನೂ ನಾಶ ಮಾಡುವನು . ಜಿನಾವತಾರವಾದ ಬುದ್ಧನು ಕೂಡಾ ಗಣೇಶನೇ . ಆದ್ದರಿಂದ ಗಣೇಶನು ಬುದ್ಧನೆಂದು ಹೇಳಲ್ಪಡುತ್ತಾನೆ .
ಓಂ ಬುದ್ಧಾಯ ನಮಃ

16. ಓಂ ವಿಘ್ನರಾಜ : –
ಭಾಷ್ಯ : ವಿಘ್ನರ್ವಿರಾಜತೇ ತೇಷಾಂ ರಾಜಾ ವಿಘ್ನಸ್ತುವಿಘ್ನಕಃ ।
ಭಕ್ತಾಧೀನಶ್ಚ ರಾಜಾ ಚ ವಿಘ್ನರಾಜಸ್ತತೋಮತಃ ॥

ವಿಘ್ನಗಳಿಂದ ಪ್ರಕಾಶಿಸುತ್ತಿರುತ್ತಾನೆ . ವಿಘ್ನಗಳಿಗೆ ರಾಜನಾಗಿದ್ದಾನೆ . ವಿಘ್ನಗಳಿಗೂ ವಿಘ್ನಗಳನ್ನುಂಟು ಮಾಡುತ್ತಿದ್ದಾನೆ . ಭಕ್ತರಿಗೆ ವಶನಾಗಿದ್ದಾನೆ . ರಾಜನೂ ಆಗಿದ್ದಾನೆ . ಆದ್ದರಿಂದ ಗಣೇಶನು ವಿಘ್ನರಾಜನು .
ಓಂ ವಿಘ್ನರಾಜಾಯ ನಮಃ

( ಮುಂದುವರೆಯುವುದು )

(ಸಂಗ್ರಹ )
* ಭಾಲರಾ
ಬೆಂಗಳೂರು


Share