MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 60

346
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 60

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

308 . ಓಂ ಈಶಾನಮೂರ್ಧ್ನೇ ನಮಃ
309 . ಓಂ ದೇವೇಂದ್ರಶಿಖಾಯೈ ನಮಃ
310 . ಓಂ ಪವನನಂದನಾಯ ನಮಃ
311 . ಓಂ ಅಗ್ರಪ್ರತ್ಯಗ್ರ ನಯನಾಯ ನಮಃ
312 . ಓಂ ದಿವ್ಯಾಸ್ತ್ರಾಣಾಂ ಪ್ರಯೋಗವಿದೇ ನಮಃ

308. ಓಂ ಈಶಾನಮೂರ್ಧಾ- 309. ದೇವೇಂದ್ರಶಿಖಾ
ಭಾ: ಈಶಾನಸ್ಯಾಪಿ ಮೂರ್ಧಾ ತ್ವಂ ದೇವೇಂದ್ರಸ್ಯಾಪಿ ವೈ ಶಿಖಾ ।
ಶಕ್ರ ಶಂಕರಯೋರ್ವಾನ್ಯ ಇತಿ ನಾಮದ್ವಯಾಶ್ರಯಃ ॥
ಹೇ ವಿನಾಯಕಾ! ಪರಮಶಿವನಿಗೂ ನೀನು ಮೂರ್ಧಸ್ಥಾನನಾಗಿದ್ದೀಯೆ. ಅಂದರೆ ಅವನಿಗಿಂತಲೂ ಎತ್ತರದಲ್ಲಿದ್ದೀಯೆ. ಆದ್ದರಿಂದ ಶಿವನಿಗೂ ಪೂಜ್ಯನಾಗಿದ್ದೀಯೆ. ಹಾಗಾಗಿ ನೀನು ಈಶಾನಮೂರ್ಧನು.
ಓಂ ಈಶಾನಮೂರ್ಧ್ನೇ ನಮಃ
ಅಯ್ಯಾ! ನೀನು ದೇವೇಂದ್ರನಿಗೆ ಶಿಖಾಸ್ಥಾನನಾಗಿದ್ದೀಯೆ. ಆದ್ದರಿಂದ ದೇವೇಂದ್ರನಿಗೂ ನೀನು ಮಾನ್ಯನೇ. (ಗೌರವಿಸಲ್ಪಡ ತಕ್ಕವನೇ)
ಓಂ ದೇವೇಂದ್ರಶಿಖಾಯೈ ನಮಃ
310 . ಓಂ ಪವನನಂದನಃ-
ಭಾ: ಜೀವನಾನ್ನಾನ್ಯ ಆನಂದಃ ತತ್ಪ್ರಾಣಪವನಾತ್ಮಕಃ೤
ಪ್ರಾಣಸ್ಯಾಪಿ ಚ ಯಃ ಪ್ರಾಣಃ ಸ ಸ್ಯಾತ್ಪವನನಂದನಃ೤೤
ಪ್ರಾಣಿಗಳಿಗೆ ಜೀವನಕ್ಕಿಂತ ಬೇರೆಯ ಆನಂದವಿಲ್ಲ. ಪ್ರಾಣವಾಯುವೇ ಆ ಜೀವನದ ಆಧಾರವಾಗಿದೆ. ಗಣೇಶನು ಆ ಪ್ರಾಣವಾಯುವಿಗೂ ಪ್ರಾಣವನ್ನು ಕೊಡುವವನಾಗಿದ್ದಾನೆ. ಆದ್ದರಿಂದ ಅವನು ಪವನನಂದನನು.
ಓಂ ಪವನನಂದನಾಯ ನಮಃ
ಅಗ್ರಪ್ರತ್ಯಗ್ರನಯನೋ ದಿವ್ಯಾಸ್ತ್ರಾಣಾಂ ಪ್ರಯೋಗವಿತ್‌ ।
ಐರಾವತಾದಿ ಸರ್ವಾಶಾ – ವಾರಣಾ ವರಣಪ್ರಿಯಃ ॥

311. ಓಂ ಅಗ್ರಪ್ರತ್ಯಗ್ರ ನಯನಃ-
ಭಾ: ಅಗ್ರಂ ಸೂಕ್ಷ್ಮಂ ಚೋತ್ತಮಂ ವಾ ಪ್ರತ್ಯಗ್ರಂ ಜೀರ್ಣತೋಜ್ಝಿತಂ೤
ತಾದೃಗ್ಲೋಚನವಾನಗ್ರ ಪ್ರತ್ಯಗ್ರನಯನೋ ಮತಃ೤೤
ಸೂಕ್ಷ್ಮವಾದ, ಉತ್ತಮವಾದ, ಕ್ಷೀಣವಾಗದ (ಕಾಂತಿ ಪೂರ್ಣವಾದ), ಕಣ್ಣುಗಳಿರುವವನಾದ್ದರಿಂದ ಅವನು ಅಗ್ರಪ್ರತ್ಯಗ್ರನಯನನು.
ಓಂ ಅಗ್ರಪ್ರತ್ಯಗ್ರ ನಯನಾಯ ನಮಃ

312. ಓಂ ದಿವ್ಯಾಸ್ತ್ರಾಣಾಂ ಪ್ರಯೋಗವಿತ್-
ಭಾ: ಅಸ್ತ್ರವಿದ್ಯಾ ಪ್ರವಕ್ತೃತ್ವಾತ್ ದಿವ್ಯಾಸ್ತ್ರಾಣಾಂ ಪ್ರಯೋಗವಿತ್.
ಅಸ್ತ್ರವಿದ್ಯೆಯ ಪ್ರವಕ್ತನು (ಲೋಕಕ್ಕೆ ಅನುಗ್ರಹಿಸಿದವನು), ದಿವ್ಯಾಸ್ತ್ರಗಳ ಪ್ರಯೋಗವನ್ನು ಅರಿತವನು. ಆದ್ದರಿಂದ ಅವನು ದಿವ್ಯಾಸ್ತ್ರಾಣಾಂ ಪ್ರಯೋಗವಿತ್.
(ಅಸ್ತ್ರ-ಮಂತ್ರಶಕ್ತಿಯಿಂದ ಪ್ರಯೋಗಿಸಲ್ಪಡುವ ಆಯುಧ)
ಓಂ ದಿವ್ಯಾಸ್ತ್ರಾಣಾಂ ಪ್ರಯೋಗವಿದೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share