MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 63

288
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 63

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

323 . ಓಂ ಸುಮಂಗಲಸುಮಂಗಲಾಯ ನಮಃ
324 . ಓಂ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ನಿಷೇವಿತಾಯ ನಮಃ
325 . ಓಂ ಸುಭಗಾ ಸಂಶ್ರಿತಪದಾಯ ನಮಃ
326 . ಓಂ ಲಲಿತಾಲಲಿತಾಶ್ರಯಾಯ ನಮಃ
327 . ಓಂ ಕಾಮಿನೀಕಾಮನಾಯ ನಮಃ
323. ಸುಮಂಗಲ ಸುಮಂಗಲಃ-
ಭಾ: ಶೋಭನಾ ಮಂಗಲಾಯಸ್ಮಿಂಸ್ತತ್ತು ಪೀಠಂ ಸುಮಂಗಲಮ್‌ ।
ತಾದೃಕ್ ಸುಮಂಗಲಂ ಯಸ್ಮಾತ್ ಸುಮಂಗಲ ಸುಮಂಗಲಃ ॥
ಒಂಬತ್ತನೆಯವಳಾದ ಮಂಗಳಾ ದೇವತೆ ಇರುವ ಪೀಠವನ್ನು ಸುಮಂಗಲ ಪೀಠವೆನ್ನುತ್ತಾರೆ. ಆ ಸುಮಂಗಲ ಪೀಠಕ್ಕೆ ಎಲ್ಲಾ ಮಂಗಳಗಳನ್ನೂ ಕೃಪೆ ಮಾಡುವುದರಿಂದ ಅವನು ಸುಮಂಗಲಸುಮಂಗಲನು.
ಓಂ ಸುಮಂಗಲಸುಮಂಗಲಾಯ ನಮಃ
ಪ್ರಾಚಾತು ಏತಾನಿ ನಾಮಾನಿ ಅನ್ಯಥಾ ವ್ಯಾಖ್ಯಾತಾನಿ ಪ್ರಥಮನಾಮನಿ ಜಯ ಇತ್ಯಸ್ಯ ಭಿನ್ನಪದತ್ವಂ ಚ ಸ್ವೀಕೃತಂ – ತತ್ ಅಸಾಂಪ್ರದಾಯಿಕತ್ವಾತ್ ಉಪೇಕ್ಷ್ಯಂ
ಪ್ರಾಚೀನರು ಕೆಲವರು ಈವರೆಗೆ ನಾವು ತಿಳಿದುಕೊಂಡ ನಾಮಗಳಿಗೆ ಬೇರೆಯ ರೀತಿಯಲ್ಲಿ ಅರ್ಥವನ್ನು ಹೇಳಿದ್ದಾರೆ. ಅವರು ಜಯಾಜಯಪರೀವಾರಃ ಎಂಬ ನಾಮದಲ್ಲಿನ ಜಯಶಬ್ದವನ್ನು ಸ್ವತಂತ್ರ ಶಬ್ದವನ್ನಾಗಿ ಗ್ರಹಿಸಿ, ಗಣೇಶನು ಜಯವನ್ನು ಕೊಡುತ್ತಾನೆ. ಆದ್ದರಿಂದ ಅವನು ಜಯನು ಎಂಬ ಅರ್ಥವನ್ನು ಹೇಳಿದ್ದಾರೆ. ಹಾಗೆ ಹೇಳುವುದು ಸಂಪ್ರದಾಯ ವಿರುದ್ಧವಾದ್ದರಿಂದ ಅದನ್ನು ಉಪೇಕ್ಷೆಮಾಡಬೇಕು.

324. ಓಂ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ನಿಷೇವಿತಃ-
ಭಾ: ಯಾ ಬ್ರಹ್ಮಣ್ಯುದ್ಗತಾ ವೃತ್ತಿಃ ಸರ್ಗಾದಾವೀಕ್ಷಣಾತ್ಮಿಕಾ೤
ಜ್ಞಾನೇಚ್ಛಾ ಕೃತಿರೂಪಾಸೇತ್ಯಸ್ಮಾಭಿಃ ಶ್ರುತಿಯುಕ್ತಿಭಿಃ ॥
ವಾಮಕೇಶ್ವರತಂತ್ರಸ್ಯ ವ್ಯಾಖ್ಯಾಯಾಂ ಪ್ರತಿಪಾದಿತಂ।
ತಾದೃಗ್ವೃತ್ತಿ ಯುತಂ ಬ್ರಹ್ಮ ನಾಮ್ನೈಕೇನೇಹ ಕಥ್ಯತೇ ॥
ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ನಿಷೇವಿತಃ
ಸೃಷ್ಟಿಯ ಆದಿಯಲ್ಲಿ ನೋಡುವುದು ಮೊದಲಾದ ಬ್ರಹ್ಮನ ವೃತ್ತಿಯು ಇಚ್ಛಾ, ಜ್ಞಾನ, ಕ್ರಿಯಾ ರೂಪವಾಗಿದೆ, ಎಂದು ನಾವು ಶ್ರುತಿಯುಕ್ತಿಗಳಿಂದ ವಾಮಕೇಶ್ವರತಂತ್ರದ ವ್ಯಾಖ್ಯಾನದಲ್ಲಿ ಪ್ರತಿಪಾದಿಸಿದ್ದೇವೆ. ಅಂತಹ ವೃತ್ತಿಗಳಿಂದ ಕೂಡಿದ ಬ್ರಹ್ಮಪದಾರ್ಥವೇ ಇಲ್ಲಿ ಗಣೇಶಸಹಸ್ರನಾಮದ ಈ ನಾಮದಲ್ಲಿ ಗಣೇಶರೂಪವಾಗಿ ಹೇಳಲ್ಪಡುತ್ತಿದೆ.
ಸೈವ ವೃತ್ತಿರ್ಭಿದ್ಯಮಾನಾ ತತ್ತದ್ಧರ್ಮೈಕಯೋಗತಃ ।
ಆ ಬ್ರಹ್ಮನ ವೃತ್ತಿಯೇ ಆಯಾ ಧರ್ಮಗಳಿಗೆ ಅನುಸಾರವಾಗಿ, ಕಾಲಾನುಗುಣವಾಗಿ ಕೆಲವುಬಾರಿ ಇಚ್ಛಾಶಕ್ತಿ ಎಂದೂ, ಕೆಲವೊಮ್ಮೆ ಜ್ಞಾನಶಕ್ತಿ ಎಂದೂ, ಇನ್ನೊಮ್ಮೆ ಕ್ರಿಯಾಶಕ್ತಿ ಎಂದೂ ಹೇಳಲ್ಪಡುತ್ತದೆ. ಆ ತ್ರಿಶಕ್ತಿಗಳಿಂದ ಸೇವಿಸಲ್ಪಟ್ಟವನು ಅಥವಾ ಕೂಡಿಕೊಂಡಿರುವವನಾದ್ದ್ದರಿಂದ ಗಣೇಶನು ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ನಿಷೇವಿತನು. (ಗಣೇಶನೇ ಬ್ರಹ್ಮ, ಬ್ರಹ್ಮವೇ ಗಣೇಶನು ಎಂದು ತಿಳಿಯಬೇಕು.)
ಓಂ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ನಿಷೇವಿತಾಯ ನಮಃ
ಸುಭಗಾಸಂಶ್ರಿತಪದೋ ಲಲಿತಾಲಲಿತಾಶ್ರಯಃ ।
ಕಾಮಿನೀಕಾಮನಃ ಕಾಮಮಾಲಿನೀಕೇಲಿಲಾಲಿತಃ ॥

325. ಸುಭಗಾ ಸಂಶ್ರಿತಪದಃ-
ಭಾ: ಸುಭಗಾದಿಕರೋ ಹ್ಯೇತನ್ನಾಮಭಾಗಿತ್ಯಪೀರಿತಂ।
ತತ್ರ ಯಾ ಸುಭಗಾದೇವೀ ತಯಾ ಸೇವ್ಯಾಂಘ್ರಿರಪ್ಯಸೌ॥
ಶುಭಗಳನ್ನು ಕೊಡುವವನಾದ್ದರಿಂದಲೂ, ಸುಭಗಾದೇವಿಯಿಂದ ಆಶ್ರಯಿಸಲ್ಪಟ್ಟ ಪಾದಗಳುಳ್ಳವನಾದ್ದರಿಂದಲೂ ಅವನು ಸುಭಗಾಸಂಶ್ರಿತಪದನು.
ಓಂ ಸುಭಗಾಸಂಶ್ರಿತಪದಾಯ ನಮಃ

326. ಲಲಿತಾಲಲಿತಾಶ್ರಯಃ-
ಭಾ: ಗಣೇಶಸುಂದರೀಮಂತ್ರಾಲ್ಲಲಿತಾಲಲಿತಾಶ್ರಯಃ ।
ಗಣೇಶ ಸುಂದರೀ ಮಂತ್ರದಿಂದ ಲಾಲಿಸಲ್ಪಟ್ಟವನಾದ್ದರಿಂದ ಅವನು ಲಲಿತಾಲಲಿತಾಶ್ರಯನು. ಅಥವಾ ಲಲಿತವಾದ ಗಣೇಶ ಸುಂದರೀ ಮಂತ್ರದಿಂದ ಸಂತೋಷಪಟ್ಟವನಾಗಿ ಅನುಗ್ರಹಿಸುತ್ತಾನೆ. ಆದ್ದರಿಂದಲೂ ಅವನು ಲಲಿತಾಲಲಿತಾಶ್ರಯನು.
ಓಂ ಲಲಿತಾಲಲಿತಾಶ್ರಯಾಯ ನಮಃ

327. ಕಾಮಿನೀಕಾಮನಃ-
ಭಾ: ……………ಕಾಮಿನೀ ಯಾ ಕಾಮಕಲಾ ।
ಕಾಮಕಲೆಯಾದ ಕಾಮಿನಿಯಿಂದ ಕೋರಲ್ಪಟ್ಟವನಾದ್ದರಿಂದ ಅವನು ಕಾಮಿನೀಕಾಮನನು.
ಓಂ ಕಾಮಿನೀಕಾಮನಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share