MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 70

264
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 70

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

358 . ಓಂ ಅಚ್ಯುತಾಯ ನಮಃ
359 . ಓಂ ಅಮೃತಾಯ ನಮಃ
360 . ಓಂ ಅಕ್ಷರಾಯ ನಮಃ
361 . ಓಂ ಅಪ್ರತರ್ಕ್ಯಾಯ ನಮಃ
362 . ಓಂ ಅಕ್ಷಯಾಯ ನಮಃ
363 . ಓಂ ಅಜಯ್ಯಾಯ ನಮಃ

358. ಓಂ ಅಚ್ಯುತಃ-
ಭಾ: ಚ್ಯುತಿರಾಹಿತ್ಯಾದಚ್ಯುತನಾಮಾ ನಾರಾಯಣಾದಭೇದಾದ್ವಾ೤
ನಾಶವಿಲ್ಲದವನಾದ್ದರಿಂದಲೂ, ಶ್ರೀಮನ್ನಾರಾಯಣನಲ್ಲಿ ಅಭೇದಬುದ್ಧಿ ಇರುವವನಾದ್ದರಿಂದಲೂ ಅವನು ಅಚ್ಯುತನು.
ಓಂ ಅಚ್ಯುತಾಯ ನಮಃ

359. ಓಂ ಅಮೃತಮ್-
ಭಾ: ಪೀಯೂಷಂ ಮೋಕ್ಷೋವಾ ತ್ವಮೇವ ಭಗವನ್ ತತೋ7ಸ್ಯಮೃತಂ೤
ಭಗವಂತನೇ ಗಣೇಶಾ! ನೀನು ಅಮೃತ ಸ್ವರೂಪನು. ಅಥವಾ ಮೋಕ್ಷವೇ ನೀನು. ಆದ್ದರಿಂದ ನಿನ್ನನ್ನು ‘ಅಮೃತಮ್‌’ ಎಂದು ಕರೆಯುತ್ತಾರೆ.
ಓಂ ಅಮೃತಾಯ ನಮಃ

360 ಓಂ ಅಕ್ಷರಮ್-
ಭಾ: ಅಕ್ಷರಮಶ್ನೋತೇರ್ವ್ಯಾಪ್ತ್ಯರ್ಥಾದಥವಾ ಕ್ಷಯಾಭಾವಾತ್‌೤
ಎಲ್ಲೆಲ್ಲಿಯೂ ವ್ಯಾಪಿಸಿರುವುದರಿಂದಲೂ, ನಾಶವಿಲ್ಲದವನಾದ್ದರಿಂದಲೂ ಅವನು ಅಕ್ಷರನು.
ಓಂ ಅಕ್ಷರಾಯ ನಮಃ
ಅಪ್ರತರ್ಕ್ಯೋ7ಕ್ಷಯೋ7ಜಯ್ಯೋ7ನಾಧಾರೋ7ನಾಮಯೋ7ಮಲಃ।
ಅಮೋಘಸಿದ್ಧಿರದ್ವೈತ ಮಘೋರೋ7ಪ್ರಮಿತಾನನಃ ॥

361. ಓಂ ಅಪ್ರತರ್ಕ್ಯಃ-
ಭಾ: ವೇದಾ7ನನುಮತ ತರ್ಕಾ7ಗಮ್ಯತ್ವಾದಪ್ರತರ್ಕ್ಯಸ್ತ್ವಂ।
ಹೇ ಗಣೇಶಾ! ವೇದಗಳಿಂದ ಒಪ್ಪಿಕೊಳ್ಳಲ್ಪಡದ ತರ್ಕಗಳಿಂದ (ನಾಸ್ತಿಕಮತಗಳಿಂದ) ನೀನು ಊಹಿಸಲಸಾಧ್ಯನು. ಆದ್ದರಿಂದ ನೀನು ಅಪ್ರತರ್ಕ್ಯನು.
ಓಂ ಅಪ್ರತರ್ಕ್ಯಾಯ ನಮಃ

362. ಓಂ ಅಕ್ಷಯಃ 363. ಓಂ ಅಜಯ್ಯಃ
ಭಾ: ನ ಕ್ಷತಿರಪಿ ನ ಚ ವಸತಿಃ ಜೇತುಮಶಕ್ಯೋ7ಕ್ಷಯೋ7ಜಯ್ಯಃ ।
ನಾಶವೂ, ಇರುವ ಸ್ಥಳವೂ ಇಲ್ಲದವನಾದ್ದರಿಂದ ಅಕ್ಷಯನು. ಅವನನ್ನು ಗೆಲ್ಲುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಅವನು ಅಜಯ್ಯನು. ( ಇರುವ ಸ್ಥಳವಿಲ್ಲವೆಂದರೆ ಎಲ್ಲೆಲ್ಲೂ ವ್ಯಾಪಿಸಿದ್ದಾನೆ ಎಂದರ್ಥ. )
ಓಂ ಅಕ್ಷಯಾಯ ನಮಃ
ಓಂ ಅಜಯ್ಯಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ

ಬೆಂಗಳೂರು


Share