MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 95

216
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 95

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

487 . ಓಂ ಜಪಾಯ ನಮಃ
488 . ಓಂ ಜಪಪರಾಯ ನಮಃ
489 . ಓಂ ಜಪ್ಯಾಯ ನಮಃ
490 . ಓಂ ಜಿಹ್ವಾಸಿಂಹಾಸನಪ್ರಭವೇ ನಮಃ
491 . ಓಂ ಝಲಜ್ಝಲ್ಲೋಲ್ಲಸದ್ದಾನಾಯ ನಮಃ

487. ಓಂ ಜಪಃ 488. ಜಪಪರಃ 489. ಜಪ್ಯಃ
ಭಾ: ಜಪೋ ಜಪಪರೋ ಜಪ್ಯಃ ಕರ್ಮಕರ್ತೃಕ್ರಿಯಾತ್ಮಕಃ
ಜಪವೆಂಬ ಕ್ರಿಯಾ ಸ್ವರೂಪನಾದ್ದರಿಂದ ಅವನು ಜಪನು.
ಓಂ ಜಪಾಯ ನಮಃ
(ಜಪಕರ್ತೃ) ತಪಸ್ಸು ಮಾಡುವವರ ಸ್ವರೂಪಿಯಾದ್ದರಿಂದ ಜಪಪರನು.
ಓಂ ಜಪಪರಾಯ ನಮಃ
ಜಪಿಸಲು ತಕ್ಕವನು ಅವನೇ ಆದ್ದರಿಂದ ಅವನು ಜಪ್ಯನು. (ಕರ್ಮರೂಪನು)
ಓಂ ಜಪ್ಯಾಯ ನಮಃ

490. ಜಿಹ್ವಾಸಿಂಹಾಸನಪ್ರಭುಃ-
ಭಾ: ಕೀರ್ತ್ಯಮಾನಂ ಯಸ್ಯ ನಾಮ ಜಿಹ್ವಾಸಿಂಹಾಸನಸ್ಥಿತಂ ।
ದದಾತಿ ಪುರುಷಾರ್ಥಾನ್ ಸ ಜಿಹ್ವಾಸಿಂಹಾಸನ ಪ್ರಭುಃ॥
ನಾಲಿಗೆಯೆಂಬ ಸಿಂಹಾಸನದ ಮೇಲಿದ್ದು ಕೀರ್ತಿಸಲ್ಪಡುತ್ತಿರುವ ಯಾರ ನಾಮವು ಸಕಲ ಪುರುಷಾರ್ಥಗಳನ್ನೂ ಕೊಡುತ್ತದೆಯೋ ಅವನು ಜಿಹ್ವಾಸಿಂಹಾಸನಪ್ರಭುವು.
ಓಂ ಜಿಹ್ವಾಸಿಂಹಾಸನಪ್ರಭವೇ ನಮಃ
ಝಲಜ್ಝಲ್ಲೋಲ್ಲಸದ್ದಾನ ಝಂಕಾರಿಭ್ರಮರಾಕುಲಃ।
ಟಂಕಾರಸ್ಫಾರಸಂರಾವ – ಷ್ಟಂಕಾರಿಮಣಿನೂಪುರಃ॥

491. ಝಲಜ್ಝಲ್ಲೋಲ್ಲಸದ್ದಾನ ಝಂಕಾರಿಭ್ರಮರಾಕುಲಃ-
ಭಾ: ಝಲಜ್ಝಲ್ಲೋಲ್ಲಸದ್ದಾನ ಝಂಕಾರಿ ಭ್ರಮರಾಕುಲಃ।
ನದಂತಿ ಗಂಡಯೋರ್ಭೃಂಗಾಃ ಸ್ಫುರನ್ಮದಪಿಪಾಂಸವಃ
ಗಣೇಶನ ಗಂಡಸ್ಥಾನಗಳಿಂದ ಸುರಿಯುತ್ತಿರುವ ಮದವನ್ನು ಕುಡಿಯಬೇಕೆಂಬ ಆಸೆಯಿಂದ ಭ್ರಮರಗಳು ಅವನ ಮುಖದ ಸುತ್ತಲೂ ಶಬ್ದಮಾಡುತ್ತಾ ತಿರುಗುತ್ತಿವೆ. ಅವನು ಅವುಗಳಿಂದ ಕೂಡಿ ಇನ್ನಷ್ಟು ಹೆಚ್ಚಿಗೆ ಶೋಭಿಸುತ್ತಿದ್ದಾನೆ. ಆದ್ದರಿಂದ ಅವನು ಝಲಜ್ಝಲ್ಲೋಲ್ಲಸದ್ದಾನ ಝಂಕಾರಿಭ್ರಮರಾಕುಲನು.
ಓಂ ಝಲಜ್ಝಲ್ಲೋಲ್ಲಸದ್ದಾನ ಝಂಕಾರಿಭ್ರಮರಾಕುಲಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share