MP – ಆಧ್ಯಾತ್ಮಿಕ ಅಂಗಳ : 29-06-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 250

255
Share

 

ಶ್ರೀವಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 42
ಪುಟ : 250

ವೆಂಕಯ್ಯ ಎಂಬ ರೈತ ಶೂದ್ರಗೃಹಗಳ ಮುಂದೆ ಮುಂಜಾಗ್ರತೆಗಾಗಿ ಇದ್ದಿಲು ತುಂಬಿದ್ದ ಒಂದು ಮಡಕೆಯನ್ನು ಇಡಬೇಕೆಂದೂ , ಹಾಗೆ ಮಾಡಿದರೆ ಸನ್ಯಾಸಿಯಿಂದ ಪ್ರಯೋಗಿಸಲ್ಪಟ್ಟ ದೆವ್ವವು ಶೂದ್ರ ಗೃಹಗಳಿಗೆ ಬಂದು ಧನವನ್ನು ಅಪಹರಿಸುವುದಿಲ್ಲವೆಂದೂ ಡಂಗೂರು ಹಾಕಿಸಿದನು .
ಸ್ವಲ್ಪ ಹೊತ್ತಿಗೆ ಬಾಧೆಯಿಂದ ಕುಪ್ಪಳಿಸುತ್ತ ಬ್ರಾಹ್ಮಣನು ಸ್ವಸ್ಥನಾದನು . ಅಷ್ಟರಲ್ಲಿ ಒಬ್ಬ ರೈತ ಕುಕ್ಕುಟೇಶ್ವರಾಲಯದಲ್ಲಿದ್ದ ಬ್ರಾಹ್ಮಣನ ಹತ್ತಿರ ಬಂದು , “ ಸ್ವಾಮಿ ! ನಮ್ಮ ಕುಲದ ಹಿರಿಯನಾದ ವೆಂಕಯ್ಯ ತಮಗೆ ಶ್ರೀಪಾದರು ಕೊಟ್ಟ ಮಂತ್ರಾಕ್ಷತೆಯನ್ನು ಕೊಡಬೇಕೆಂದು ಸಂಕಲ್ಪಿಸಿದ್ದಾರೆ . ಆ ಮಂತ್ರಾಕ್ಷತೆಯ ಪ್ರಭಾವದಿಂದ ನೀವು ಸ್ವಸ್ಥರಾಗುತ್ತೀರಿ ” ಎಂದು ಹೇಳಿದನು .
ಅಷ್ಟರಲ್ಲಿ ಆ ಬ್ರಾಹ್ಮಣನು , “ ಪ್ರಸ್ತುತ ನನಗೆ ಸರಿಹೋಗಿದೆ . ಆದರೆ ಪ್ರಚಾರದಲ್ಲಿರುವ ವದಂತಿಗಳ ಪ್ರಕಾರ ನಾವು ಯಾವ ಕ್ಷಣದಲ್ಲಾದರೂ ನಿಜವಾಗಿ ದೆವ್ವವೇ ಆಗಿ ಬಿಡಬಹುದೇನೋ ! ಆ ಮಂತ್ರಾಕ್ಷತೆಗಳನ್ನು ಶೂದ್ರನ ಮನೆಗೆ ಹೋಗಿ ತೆಗೆದುಕೊಳ್ಳಬೇಕೆಂದು ಹೇಳುವುದರಲ್ಲಿ ಆ ನಿಯಮವನ್ನು ಬಹುಶಃ ಆ ರೀತಿಯಲ್ಲಿಯೇ ಆಚರಿಸಬೇಕೆಂದು ಕಾಣುತ್ತದೆ . ಬ್ರಾಹ್ಮಣರು ಶೂದ್ರರಿಗೆ ಮಂತ್ರಾಕ್ಷತೆ ಕೊಡುತ್ತಾರೆ . ಶೂದ್ರರು ಬ್ರಾಹ್ಮಣನನ್ನು ತಮ್ಮ ಮನೆಗೆ ಕರೆಸಿಕೊಂಡು ಮಂತ್ರಾಕ್ಷತೆಗಳನ್ನು ಕೊಡುವುದಿಲ್ಲ ವೆಂಕಯ್ಯನಂತಹ ಸೌಮ್ಯ ಸ್ವಭಾವದವನು ಹೇಳಿ ಕಳುಹಿಸಿರುವುದರಿಂದ ಇದು ನನ್ನ ಶ್ರೇಯಸ್ಸಿಗಾಗಿಯೇ ” ಎಂದು ತಿಳಿದುಕೊಂಡು ವೆಂಕಯ್ಯನಿಂದ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಮನೆಗೆ ಹೋದನು .
ಪೀಠಿಕಾಪುರದಲ್ಲಿ ವ್ಯಾಪಿಸಿದ್ದ ವದಂತಿಗಳಿಂದ ಎಲ್ಲ ಜಾತಿಗಳವರಿಗೂ ಸನ್ಯಾಸಿಯ ಮೇಲೆ ನಂಬಿಕೆ ಹೋಯಿತು . ಆಗ ಅವರೆಲ್ಲರೂ ಕಲೆತು ಕ್ಷುದ್ರ ವಿದ್ಯೆಯಲ್ಲಿ ಚಾಣಕ್ಷನಾದ ಸನ್ಯಾಸಿಗೆ ದಕ್ಷಿಣೆಗಳು ಕೊಡುವುದು ಸರಿಯಲ್ಲವೆಂದು ತಿಳಿದು ಆ ಸನ್ಯಾಸಿಯಿಂದ ದಕ್ಷಿಣೆಯ ಹಣವನ್ನು ವಾಪಸ್ಸು ತೆಗೆದುಕೊಂಡರು . ಸನ್ಯಾಸಿಗೆ ಬೇರೆ ಯಾವ ರೀತಿಯಾದ ಶಿಕ್ಷೆಯನ್ನೂ ಕೊಡದೆ ಕಳಿಸಿಬಿಟ್ಟರು . ಆ ದ್ರವ್ಯವೆಲ್ಲವನ್ನೂ ಏನು ಮಾಡಬೇಕೆಂದು ಶ್ರೀ ಬಾಪನಾರ್ಯರನ್ನು ಕೇಳಿದರು . ಆಗ ಆ ದ್ರವ್ಯಗಳಿಂದ ದಿನಸಿ ಪದಾರ್ಥಗಳನ್ನು ತರಿಸೋಣ , ಎಲ್ಲ ವರ್ಣದವರಿಗೂ ಅನ್ನ ಸಂತರ್ಪಣೆಯನ್ನು ಮಾಡೋಣ , ಅನ್ನದಾನ ಪ್ರಭುವಾದ ಶ್ರೀದತ್ತಾತ್ರೇಯರು ಸಂತೋಷಿಸುತ್ತಾರೆ , ಬೇರೆ ವ್ಯಕ್ತಿಗತ ದತ್ತ ದೀಕ್ಷೆಯ ಅವಶ್ಯಕತೆ ಇಲ್ಲವೆಂದು ಬಾಪನಾರ್ಯರು ಹೇಳಿದರು .
ಕುಕ್ಕುಟೇಶ್ವರಾಲಯಕ್ಕೆ ಎದುರಿನಲ್ಲಿ ದೊಡ್ಡ ಚಪ್ಪರ ಹಾಕಿಸಲಾಯಿತು . ಎಲ್ಲ ವರ್ಣದವರಿಗೂ ಅನ್ನ ಸಂತರ್ಪಣೆ ಮಾಡಲಾಯಿತು . ಎಲ್ಲ ಜನರೂ ಮೊಟ್ಟ ಮೊದಲಿಗೆ ‘ ದತ್ತ ದಿಗಂಬರ ! ದತ್ತ ದಿಗಂಬರ ! ಶ್ರೀಪಾದವಲ್ಲಭ ದತ್ತ ದಿಗಂಬರ ! ‘ ಎಂಬ ದಿವ್ಯ ನಾಮವನ್ನು ಜಪಿಸಿದರು . ಈ ನಾಮವು ಪ್ರಪಂಚದಲ್ಲೆಲ್ಲಾ ವ್ಯಾಪಿಸುತ್ತದೆಯೆಂದು ಶ್ರೀಪಾದರು ಯಾವತ್ತೋ ಹೇಳಿದ್ದರು !
॥ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ॥
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 251
ನನ್ನ ಕುಲ, ನನ್ನ ಮತ ಎನ್ನುತ್ತ ಹೊಡೆದಾಡಿ
ಮಾನವ ಕುಲವೇ ತನ್ನ ನಾಶದೆಡೆ ನಡೆದಿದೆ.
ಕುಲ ಮತಗಳ ಸೃಷ್ಟಿಯದು ವೃತ್ತಿಯಿಂದಲ್ಪದೆ
ಪ್ರವೃತ್ತಿಯಿಂದಲ್ಲಯ್ಯ .
ಈ ಸೃಷ್ಟಿಯ ಸಮಷ್ಟಿಯಲ್ಲಿ
ಸರ್ವ ಭೂತವೂ ಒಂದೆ
– ಸಚ್ಚಿದಾನಂದ ಶ್ರೀ ಸ್ವಾಮಿಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share