MP ಕವನ ಸಂಗ್ರಹ : ಕವಿಯಿತ್ರಿ ಆಶಾಲತ

126
Share

ಪ್ರತಿಭೆ, ವಿದ್ವತ್ತುಗಳ ಪ್ರೋತ್ಸಾಹಿಸಿ
ಜಾತಿ, ರಾಜಕೀಯವ ತ್ಯೆಜಿಸಿ
ಕೋಮುಗಲಭೆಗಳಿಗೆ ಕಡಿವಾಣವ
ಹಾಕಿರಿ
ನಿರ್ಭಿತಿಯ, ನಿಶ್ಚಿoತೆಯ ವಾತಾವರಣವ ನಿರ್ಮಿಸಿ
ಸಾಮಾಜಿಕ ಮೌಲ್ಯಗಳ ಉಳಿಸಿ, ಬೆಳಸಿ
ಸಾಮಾಜಿಕ ಸ್ವಾಸ್ಥವ ಕಾಪಾಡಿ ||1॥

ಮಹಾಮಹಿಮರು, ಮಾನವೀಯತೆಯ ಹರಿಕಾರರು
ಜನಿಸಿದ ನಾಡಲ್ಲಿ ಅಮಾನವೀಯತೆಯ ರೌದ್ರನರ್ತನ
ಭ್ರಷ್ಟರ, ನರಕಾಸುರರ ಕೊಂಪೆಯಗಿಹುದು ಈ ಭುವಿಯು
ಬಣ್ಣವಿಲ್ಲದೆ ಬಣ್ಣದ ಮಾತನಾಡುವವರ ದರ್ಬಾರು ಸ್ವಾರ್ಥದ ಹೊಳೆ ಉಕ್ಕಿ ಹರಿದಿದೆ ಈ
ಧರೆಯಲ್ಲಿ ||2||

ಮುಗ್ಧ ಜನರು ಸೊಗಲಾಡಿಗಳ ಮಾತಿಗೆ ಮರುಳಾಗಿ ಬಲಿಯಾಗಿರುವರು ಮೋಸದ
ಜಾಲಕ್ಕೆ ಸಿಲುಕಿ ಅವಿರತ ನರಳುತ್ತಿರುವರು
ಸತ್ಯ, ನಿಷ್ಠೆ, ಪ್ರಾಮಾಣಿಕತೆಗಳ
ಅರಸ ಬೇಕಾಗಿದೆ ಇಲ್ಲಿ
ಕಾಂಚಾಣದ ಬಲೆಯ ಬೀಸಿ
ಸಾಮಾಜಿಕ ಅಸಮಾನತೆಯ
ಸೃಷ್ಟಿಸಿಹರು
ಸತ್ಯ ನಿಷ್ಠರ, ಪ್ರಾಮಾಣಿಕರ ಮೇಲೆ
ನಿರಂತರ ದಾಳಿ
ಸಹಸ್ರ ವರ್ಷಗಳು ಕಳೆದರೂ, ಶತಮಾನಗಳು ಆಳಿದರೂ
ಕಾಂಚಾಣಕ್ಕೆ ದಾಸರಾದವರನ್ನು
ದಾಸ್ಯದಿಂದ ಬಿಡಿಸಲಾಗದು ||3||

ಓ ದೇವನೇ ಎನ್ನನೇಕೆ ತಂದೆ ಈ ಧರೆಗೆ
ಮುಗ್ಧ ನೇರ ನುಡಿಯ, ಮೃದು ಮನವ ಎನಗೇಕೆ ನೀಡಿದೆ
ಬೆಳ್ಳಗಿರುವುದೆಲ್ಲ ಹಾಲಲ್ಲ
ಪಳ, ಪಳ ಹೊಳೆಯುವುದೆಲ್ಲಾ
ಮಿಸುನಿಯಲ್ಲಾ
ಸಮಾಜ ಸುಧಾರಾಕಾರೆoಬ ಹಣೆ
ಪಟ್ಟಿ ಕಟ್ಟಿಕೊಂಡವರು ಸಮಾಜ ಘಾತುಕರಾಗಿರುವರು
ಈ ಜನರಿಂದ, ಈ ಭುವಿಯಿಂದ ಮುಕ್ತಿ ನೀಡೆನಗೆ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ.


Share