MP ಕವನ ಸಂಗ್ರಹ : ಶಿಕ್ಷಕರ ದಿನಾಚರಣೆ ವಿಶೇಷ – ‘ಗುರು ನಮನ’ – ಶ್ರೀಮತಿ .ಆಶಾಲತ

20
Share

ಗುರುನಮನ

ನಮಿಸೋಣ ಎಲ್ಲರು ನಮಿಸೋಣ
ಪರಮ ಪೂಜ್ಯ ಗುರುವರ್ಯರಿಗೆ ಭಕ್ತಿ ಭಾವದಿ ನಮಿಸೋಣ
ಮುಗ್ಧ ಮನಗಳಲ್ಲಿ ಅಕ್ಷರದ ಬೀಜವ ಭಿತ್ತಿ ಅಜ್ಞಾನದ ಕತ್ತಲೆಯಿಂದ ಪಾರು ಮಾಡಿ ಸುಜ್ಞಾನದ ದೀವಿಗೆ ಬೆಳಗುವ ಜ್ಞಾನ
ಮೇರುವಿಗೆ ಒಮ್ಮನದಿಂದ ನಮಿಸೋಣ ||1||
ಮನಸ್ಸೆಂಬ ಹಣತೆಯಲ್ಲಿ ಅಕ್ಕರದ ದೀಪ ಹೊತ್ತಿಸಿ, ಅಗಣಿತ ಮಂದಿಯ ಬಾಳಿಗೆ ದಿವ್ಯ ಬೆಳಕು ನೀಡುವ ಅಕ್ಷರ ಬ್ರಹ್ಮನಿಗೆ
ಶಿಷ್ಯನೆಂಬ ಕಗ್ಗಲ ಮೂರ್ತಿಯ ಕಡೆದು ಸುಂದರ ಶಿಲ್ಪವನ್ನಾಗಿಸುವ
ಎಲ್ಲರ ಬಾಳಿನಲ್ಲಿ ಗುರಿ, ಧ್ಯೇಯ ಗಳನ್ನು ತುಂಬಿ ಯುವ ಜನತೆಯ
ಏಳಿಗೆಗೆ ಕಾರಣಿ ಭೂತನಾದ ಅದ್ಭುತ ಶಕ್ತಿಗೆ ಒಮ್ಮನದಿಂದ
ನಮಿಸೋಣ ||2||
ಕಲಿಕೆಯನ್ನಷ್ಟೇ ಅಲ್ಲದೆ ಜೀವನದ ಮೌಲ್ಯ ಗಳನ್ನು ಭೋದಿಸುವ ಮಕ್ಕಳ ಬದುಕಿನಲ್ಲಿ ಮಾತೆಯಷ್ಟೇ
ಮಹತ್ತರ ಪಾತ್ರ ವಹಿಸುವ ಮಹನೀಯನಿಗೆ
ತನ್ನ ವೃತ್ತಿ ಬದುಕಿಗೆ ಸಂಪೂರ್ಣ ವಾಗಿ ಅರ್ಪಿಸಿಕೊಂಡ ನಿಸ್ವಾರ್ಥ ಜೀವಿಗೆ
ಸಮಾಜವೆಂಬ ಸುಂದರ ತೋಟದ ರೂವಾರಿಗೆ ಅನೇಕ ಸಾಧಕರ ಸಾಧನೆಗೆ ದಾರಿ ದೀಪವಾದ ಜ್ಞಾನದ ಬೆಳಕಿಗೆ ಒಮ್ಮನದಿಂದ ನಮಿಸೋಣ ||3||
ಮಾನವೀಯತೆಯ ವಿಕಸನಕ್ಕೆ, ಸಚ್ಚಾರಿತ್ರದ ಬೆಳವಣಿಗೆಗೆ ನಾಂದಿ ಹಾಡಿದ ಮೇರುವ್ಯಕ್ತಿತ್ವಕ್ಕೆ
ಜಾತಿ, ಲಿಂಗ, ಧರ್ಮ ಬೇಧಗಳಿಲ್ಲದೆ
ಶಿಷ್ಯ ಕೋಟಿಯನ್ನು ಸಮಾನವಾಗಿ
ಕಾಣುವ ಅಪ್ರಮೇಯ ವ್ಯಕ್ತಿತ್ವಕ್ಕೆ
ಶಿಷ್ಯರ ಚಿತ್ತವ ಅಪಹರಿಸಿ ಅವರ ಬಾಳು ಬೆಳಗಿದ ಗುರುವೆಂಬ ದಿವ್ಯ ಚೇತನಕ್ಕೆ ಕೋಟಿ ಕೋಟಿ ನಮನಗಳನ್ನು ಒಮ್ಮನ ದಿಂದ ಅರ್ಪಿಸೋಣ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share