MP ಸ್ನಾಕ್ಸ್ : ತ್ರಿವಳಿ ಸಂಗಮ – 69

201
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 69

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ದಾರಿಯಲ್ಲಿ ಮುದುಕಿ ತಲೆ ಕೆರೆದುಕೊಂಡು ಕೂತವಳೆ

* ಗಾದೆ :
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ

* ರಸಪ್ರಶ್ನೆ :
ಅಮೇರಿಕಾದಲ್ಲಿ ಗುಲಾಮಗಿರಿ ತೊಡೆದು ಹಾಕಿದವರು ಯಾರು ?

* ಉತ್ತರ :
ಒಗಟು –
ಈಚಲ ಮರ
ರಸಪ್ರಶ್ನೆ –
ಅಬ್ರಹಾಂ ಲಿಂಕನ್

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share