MP ಸ್ನ್ಯಾಕ್ಸ್ : ತ್ರಿವಳಿ ಸಂಗಮ – 26

224
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 26

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಊರೆಲ್ಲ ಸುತ್ತುತ್ತೆ, ಕಡೆಗೆ ಮನೆ ಬಾಗಿಲಿಗೆ ಬಂದು ಬೀಳುತ್ತೆ __ ?

* ಗಾದೆ :
ಅಗ್ಗದ ಆಸೆಗೆ ಗೊಬ್ಬರ ಕೊಂಡುಕೊಂಡರಂತೆ

* ರಸಪ್ರಶ್ನೆ :
ನಟ ಶಂಕರ್ ನಾಗ್ ಅವರು ಯಾರ ಕೃತಿ ಆಧರಿಸಿ ಮಾಲ್ಗುಡಿ ಡೇಸ್ ನಿರ್ದೇಶಿಸಿದರು ?

* ಉತ್ತರ –
ಒಗಟು – ಚಪ್ಪಲಿ
ರಸಪ್ರಶ್ನೆ – ಆರ್ ಕೆ ನಾರಾಯಣ್

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share