MP ಸ್ನ್ಯಾಕ್ಸ್ : ತ್ರಿವಳಿ ಸಂಗಮ 52

192
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 52

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಪಕ್ಕದಲ್ಲೇ ಇದ್ರೂ ಕಣ್ಣಿಗೂ ಕಾಣಿಸೋಲ್ಲ ಕೈಗೂ ಸಿಗೋಲ್ಲ .

* ಗಾದೆ :
ತನ್ನ ಮರಿ ಹೊನ್ನ ಮರಿ
ಪರರ ಮರಿ ಕಾಗೆ ಮರಿ

* ರಸಪ್ರಶ್ನೆ :
ಭಾರತದ ಮೊದಲ ಟಾಕಿ ಚಿತ್ರ ಯಾವುದು ? ಅದರ ತಯಾರಕರು ಯಾರು ?

* ಉತ್ತರ :
ಒಗಟು –
ಗಾಳಿ
ರಸಪ್ರಶ್ನೆ-
ಆಲಂ ಆರಾ – ಆರ್ದೇಶಿರ್ ಇರಾನಿ

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share