MP ಸ್ನ್ಯಾಕ್ಸ್ : ತ್ರಿವಳಿ ಸಂಗಮ 60

199
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 60

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಹಗಲೆಲ್ಲಾ ಬಯಲುಗಾಡು, ರಾತ್ರಿಯೆಲ್ಲಾ ಹೂವಿನ ತೋಟ , ಕೇಳುವ ಪೂಜಾರಿಯಲ್ಲ, ಮುಡಿವ ದೇವರಿಲ್ಲ

* ಗಾದೆ :
ನಿಜದಲ್ಲೇ ನಿರ್ಭಾಗ್ಯ , ಇನ್ನು ಬರ ಬಂದರೆ ಹೇಗೆ

* ರಸಪ್ರಶ್ನೆ :
ಕರ್ನಾಟಕದ ನಾಡಹಬ್ಬ ಯಾವುದು ?

* ಉತ್ತರ :
ಒಗಟು –
ನಕ್ಷತ್ರ
ರಸಪ್ರಶ್ನೆ –
ದಸರಾ

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share