ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಅಂಗವಾಗಿ ಕೃತಕ ಕಾಲು ವಿತರಣೆ*

1569
Share

 

*ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಅಂಗವಾಗಿ ಕೃತಕ ಕಾಲು ವಿತರಣೆ*

ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಅಂಗವಾಗಿ
ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆನಂತರ
4 ವರ್ಷದಿಂದ
ಅಂಗ ವೈಫಲ್ಯದಿಂದ ಬಳಲುತ್ತಿದ್ದ ಗಾಯತ್ರಿಪುರಂ ನಿವಾಸಿ 18ವರ್ಷದ ಯುವಕ ಆದರ್ಶ್ ಎಂಬ
ಯುವಕನಿಗೆ ಕೃತಕ ಕಾಲನ್ನು ಅಳವಡಿಸುವ ಮೂಲಕ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪುಣ್ಯ ಸ್ಮರಣೆಯನ್ನು ಸ್ಮರಿಸಲಾಯಿತು
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ ಕಾರ್ಯದರ್ಶಿ ಪ್ರಮೀಳಾ ಎಸ್
ಮುಂದಿನ ದಿನಗಳಲ್ಲಿ ಯಾರಿಗಾದರೂ ಕೃತಕ ಕಾಲಿನ
ಅವಶ್ಯಕತೆ ಇದ್ದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ವತಿಯಿಂದ
ವೈದ್ಯರ ಸಲಹೆಯ ಮೇರೆಗೆ
ನೀಡಲಾಗುವುದು
ದಯಮಾಡಿ ಅವಶ್ಯಕತೆಯಿದ್ದವರು
9886166243/9845284727 ಈ ನಂಬರ್ ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು

ನಂತರ ಮಾತನಾಡಿದ ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ಸಂಸ್ಥೆಯ ಅಧ್ಯಕ್ಷರಾದ ಲಯನ್ ಸುರೇಶ್
ಮೈಸೂರು ವಿಮಾನ ನಿಲ್ದಾಣಕ್ಕೆ ರಾಜರ್ಷಿ ಶ್ರೀ ನಾಲ್ವಡಿ ಹೆಸರು ಸ್ವಾಗತಾರ್ಹ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ‌ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿರುವುದು ಸ್ವಾಗತಾರ್ಹ.
ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ‌ರವರು ಮೈಸೂರು ಸೇರಿದಂತೆ ಕರ್ನಾಟಕ ದಾದ್ಯಂತ ಅಪಾರ ಕೊಡುಗೆ ನೀಡಿದ್ದಾರೆ. ಸಹಕಾರ ಕ್ಷೇತ್ರ ಶಿಕ್ಷಣ ಕ್ಷೇತ್ರ, ಆರ್ಥಿಕ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಆರೋಗ್ಯ, ಸಂಗೀತ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ. ಮೈಸೂರು ಬ್ಯಾಂಕ್‌ ಸ್ಥಾಪನೆ, ಗಂಧದ ಎಣ್ಣೆ, ಉಕ್ಕಿನ, ಕಾಗದ, ರೇಷ್ಮೆ ಕಾರ್ಖಾನೆಗಳು, ಜನರಿಗೆ ಹತ್ತಾರು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಕೃಷ್ಣರಾಜಸಾಗರದಂತಹ ಬೃಹತ್ ಅಣೆಕಟ್ಟೆ, ಜೋಗ ಜಲಪಾತದಿಂದ ವಿದ್ಯುತ್ ಉತ್ಪಾದನೆ ಯೋಜನೆಗಳು ಮರೆಯುವಂತಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ‘ರಾಜರ್ಷಿ’ ಎಂದು ಕರೆದು ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ ಎಂದು ಶ್ಲಾಘಿಸಿದ್ದರು. ಈ ಕಾರಣದಿಂದ ಇವರನ್ನು ಆದರ್ಶ ದೊರೆ ಎನ್ನುತ್ತಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರಿಗೆ ಇತಿಹಾಸಕಾರರಿಗೆ, ಸಾಹಿತಿಗಳಿಗೆ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಸಹಕರಿಸಿದ ಎಲ್ಲರಿಗೂ ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ ವತಿಯಿಂದ ಧನ್ಯವಾದಗಳು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ
ಭೂಸೇನೆ ಯ ಜ್ಯೂನಿಯರ್ ಕಮಿಷನರ್ ಅಧಿಕಾರಿ ರಘುಕುಮಾರ್ , ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ ಸಂಸ್ಥೆಯ ಅಧ್ಯಕ್ಷರಾದ ಲಯನ್ ಟಿ ಸುರೇಶ್ ,ಕಾರ್ಯದರ್ಶಿಗಳಾದ ಲಯನ್ ಪ್ರಮೀಳಾ ,ಪರಿಸರವಾದಿಗಳಾದ ಭಾನು ಮೋಹನ್ ,ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರಾದ ಸಿ ಜಿ ಗಂಗಾಧರ್ ,ಹಾಜರಿದ್ದರು


Share