ಅವಧೂತ ದತ್ತಪೀಠದ ಶ್ರೀಗಳಿಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ

452
Share

ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚಿದಾನಂದ ಸ್ವಾಮೀಜಿ 78 ನೇ ವರ್ಧಂತಿಯನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅವಧೂತ ಶ್ರೀಗಣಪತಿ ಸಚಿವರಿಂದ ಶ್ರೀಗಳಿಗೆ ಅಭಿವಂದನೆ ಸಲ್ಲಿಸಿ
ಗೌರವಾರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ ಮೈಸೂರು ನಗರದ ಸಂಕಷ್ಟದಲ್ಲಿ ಇದ್ದ ಜನತೆಗೆ ಸುಮಾರು ರೂ 60ಲಕ್ಷಕ್ಕೂ ಮೀರಿ ದಿನನಿತ್ಯ ವಸ್ತುಗಳು ಹಾಗೂ ಊಟ ಉಪಚಾರಗಳು ಸೇರಿದಂತೆ ಅನೇಕ ಸೇವಾ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಸಹಾಯವನ್ನು ಒಟ್ಟಾರೆಯಾಗಿ ವಿತರಿಸಲಾಯಿತು
ಹಾಗೆಯೇ ಹೊರರಾಜ್ಯಗಳು ಸೇರಿದಂತೆ 1ಕೋಟಿಗೂ ಮೀರಿ ದತ್ತ ಪೀಠ ಆಶ್ರಮದಿಂದ ಸಹಾಯ ನೀಡಲಾಯಿತು ಎಂದು ತಿಳಿಸಿದರು ಹಾಗೆಯೇ ಇನ್ನೂ ಒಂದು ತಿಂಗಳವರೆಗೂ ನಾಗರಿಕರು ಕೊರೂನಾ ದಿಂದ ಆರೋಗ್ಯವನ್ನು ಜಾಗ್ರತೆಯಾಗಿ ಕಾಪಾಡಿಕೊಳ್ಳುವಂತೆ ಹಿತವಚನ ನುಡಿದರು
ನಂತರ ಮಾತನಾಡಿದ ಮೈಸೂರು ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಸಾಮಾಜಿಕ ಕ್ಷೇತ್ರದ ಮೂಲಕ ಲಕ್ಷಾಂತರ ಜನರಿಗೆ ಗಣಪತಿ ಸಚಿದಾನಂದ ಶ್ರೀಗಳ ಲಕ್ಷಾಂತರ ಜನರ ಪಾಲಿಗೆ ತೊಂದರೆ ನಿವಾರಿಸಿ .ಆತ್ಮಸೈರ್ಯ ನೀಡಿದ್ದಾರೆ ಅಂತಾರಾಷ್ಟ್ರೀಯ ಮಠದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಸಂಪಾದಿಸಿ ಜನಪ್ರಿಯವಾಗಿರುವುದು .ಮೈಸೂರಿಗೆ ಹೆಮ್ಮೆಯ ವಿಚಾರ ಸರ್ಕಾರ ಮಾಡದ ನೂರಾರು ಜನಪರ ಯೋಜನೆಗಳು ಸ್ವಾಮೀಜಿ ಮಾಡಿದ್ದಾರೆ ಮಹಾಮಾರಿ ಕೂರೂನಾ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲ ವರ್ಗದ ಬಡ ಕುಟುಂಬದವರಿಗೆ ದಿನನಿತ್ಯ ವಸ್ತುಗಳನ್ನು ನೀಡುವ ಮುಖೇನ ಶ್ರೀಗಳು ಮುಂದಾಗಿರುವುದು ಶ್ಲಾಘನೆಯ ಈ ಸಂದರ್ಭದಲ್ಲಿ ಇಂತಹ ಮಠ ಮಂದಿರಗಳು ನೆರವಾಗಿರುವುದು ಎಲ್ಲ ವರ್ಗದವರಿಗೂ ಅನುಕೂಲವಾಗಿದೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲರಾವ್ ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಕೆ ರಘುರಾಂ ವಾಜಪೇಯಿ ,ಸಂಘಟನಾ ಕಾರ್ಯದರ್ಶಿ ಎಂ ಆರ್ ಬಾಲಕೃಷ್ಣ ,ಯುವ ಮುಖಂಡರಾದ ಕಡಕೊಳ ಜಗದೀಶ್, ವಿಕ್ರಂ ಅಯ್ಯಂಗಾರ್, ಅಪೂರ್ವ ಸುರೇಶ್,ಹಾಗೂ ಇನ್ನಿತರರು ಹಾಜರಿದ್ದರು


Share