ಆಧ್ಯಾತ್ಮಿಕ ಅಂಗಳ :21/07/2021 ರ ಶ್ರೀಪಾದ ವಲ್ಲಭರ ಚರಿತ್ರೆ ಪುಟ : 267

343
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ –
ಅಧ್ಯಾಯ 47
ಪುಟ : 267
ನರಸಿಂಹವರ್ಮರು , ” ಸರ್ವಜನರನ್ನು ರಕ್ಷಿಸುವ ಕ್ಷತ್ರಿಯನು ನೀನೇ . ಮಿಕ್ಕವರೆಲ್ಲರೂ ನಾಮ ಮಾತ್ರ ಕ್ಷತ್ರಿಯರು ” ಎಂದರು . ಆಗ ಶ್ರೀಪಾದರು , ” ಕ್ಷತ್ರಿಯತ್ವವು ನನ್ನ ಸ್ವಭಾವದಲ್ಲಿ ಸದಾ ಇದೆ . ನೀನು ಶಿವಾಜಿ ಮಹಾರಾಜ ಎಂಬ ನಾಮದಿಂದ ಮಹಾರಾಷ್ಟ್ರದಲ್ಲಿ ಅವತರಿಸಿ ಸನಾತನ ಧರ್ಮವನ್ನು ರಕ್ಷಿಸಬೇಕೆಂದು ಆಜ್ಞಾಪಿಸುತ್ತಿದ್ದೇನೆ ” ಎಂದು ಹೇಳಿದರು . ಆಗ ನರಸಿಂಹ ವರ್ಮರು , ‘ ಶ್ರೀಪಾದ ಸಾರ್ವಭೌಮರಿಗೆ ಜಯವಾಗಲಿ ! ಜಯವಾಗಲಿ ! ‘ ಎಂದು ಹೇಳಿದರು .
ನಂತರ ಅಮ್ಮಾಜಮ್ಮನವರು , “ ಮಗೂ ! ಬಂಗಾರಾ ! ಕಣ್ಣಾ ! ನಿನ್ನ ಮದುವೆಯನ್ನು ಕಣ್ಣಾರೆ ನೋಡಬೇಕೆಂದು ಎಷ್ಟೋ ಆಸೆಪಡುತ್ತಿದ್ದೆವು . ನಿನ್ನ ಮದುವೆಯು ಬಹಳ ವೈಭವದಿಂದ ನಡೆಯಬೇಕೆಂದು , ನಿನ್ನನ್ನು ಮದುಮಗನನ್ನಾಗಿ ಸಿಂಗರಿಸಿ ನೋಡಿ ಆನಂದಿಸಬೇಕೆಂದಿದ್ದೆ ‘ ಎಂದರು . ಅದಕ್ಕೆ ಶ್ರೀಪಾದರು , ” ಅಜ್ಜಿ ! ಹಾಗೇ ಆಗಲಿ . ನಾನು ಕಲ್ಕಿ ಅವತಾರದಲ್ಲಿ ಶಂಬಲಗ್ರಾಮದಲ್ಲಿ ಜನಿಸಿ ಸಿಂಹಳದಲ್ಲಿ ಪದ್ಮಾವತಿ ಎಂಬ ಹೆಸರಿನಿಂದ ಜನಿಸಿದ ಅನಘಾಲಕ್ಷ್ಮಿಯನ್ನು ಲೋಕಕಲ್ಯಾಣಕ್ಕಾಗಿ ವಿವಾಹ ಮಾಡಿಕೊಳ್ಳುತ್ತೇನೆ . ಅದಕ್ಕೆ ಇನ್ನು ಸ್ವಲ್ಪ ಸಮಯವಿದೆ . ನಿಮ್ಮ ಕೋರಿಕೆಯನ್ನು ತಪ್ಪದೆ ನರವೇರಿಸುವೆನು ಧರ್ಮಶಾಸ್ತನಾಗಿ ಅವತರಿಸಿದ ನಾನು ಮಾತನ್ನು ತಪ್ಪಕೂಡದಲ್ಲವೇ ! ಸ್ವಲ್ಪ ಸಮಯದವರೆಗೆ ನೀವು ಕಾಯದೇ ಬೇರೆ . ದಾರಿಯಿಲ್ಲ ‘ ಎಂದರು . ಯಾವಾಗ ಹೊಸ ಅಯ್ಯಪ್ಪ ಶಬರಿಮಲೆಗೆ ಬರುವುದಿಲ್ಲವೋ ಅದೇ ಕಲಿಯುಗದ ಅಂತ್ಯ ಸಮಯ ಎಂದು ಜ್ಞಾಪಕದಲ್ಲಿಟ್ಟುಕೋ ಎಂದರು .
ಮಾಯಾ ನಾಟಕ ಸೂತ್ರಧಾರಿಯ ಲೀಲಾವಿನೋದ ವೆಂಕಟ ಸುಬ್ಬಮಾಂಬೆಯವರು , “ ಕನ್ನಯ್ಯ ! ನೀನು ಹಾಲು , ಮೊಸರು , ಕೆನೆ , ಬೆಣ್ಣೆ ತಿಂದು ಬಹಳ ದಿನವಾಯಿತು . ನನ್ನ ಕೈಯಿಂದ ತಿನ್ನಿಸಬೇಕೆಂದು ತುಂಬಾ ಆಸೆಯಿದೆ ‘ ಎಂದರು . ಆಗ ಶ್ರೀಪಾದರು , “ ಅಜ್ಜಿ ! ಅವಶ್ಯವಾಗಿ ತಿನ್ನಿಸು , ನನಗೆ ತುಂಬಾ ಆಯಾಸವಾಗಿದೆ . ನೀವು ಹೊರಡುವಾಗ ಹಾಲು , ಮೊಸರು , ಕೆನೆ , ಬೆಣ್ಣೆ ತರುತ್ತಿದ್ದೀರೆಂದು ಗೊತ್ತು ಬಹಳ ದಿನಗಳ ಪ್ರಯಾಣದಲ್ಲಿ ಅವು ಕೆಟ್ಟು ಹೋಗುವುದಿಲ್ಲವೆ ? ನಿಮ್ಮ ವಾತ್ಸಲ್ಯ ಪ್ರೇಮಕ್ಕೆ ಅವು ಕೆಟ್ಟು ಹೋಗದಂತೆ ವಿಚಿತ್ರ ರೀತಿಯಲ್ಲಿ ನಿಮ್ಮಗಳನ್ನು ಕರೆಸಿಕೊಂಡೆ . ಅಜ್ಜಿ ! ಎಷ್ಟು ಕಷ್ಟಗಳು ಸಹಿಸಬೇಕಾಯಿತೋ ನೋಡು . ಅನೇಕ ಕ್ರೋಸುಗಳ ದೂರ 18 ಕುದುರೆ ಬಂಡಿಗಳನ್ನು ಒಬ್ಬನೇ ಎಳೆದುಕೊಂಡು ಬರುವುದು ಸಾಮಾನ್ಯದ ವಿಷಯವೇ ! ಮೈಯೆಲ್ಲಾ ನೋಯುತ್ತಿದೆ . ನನ್ನ ಕೈಗಳಲ್ಲಿ ಎಷ್ಟು ಬೊಬ್ಬೆಗಳಿವೆ ನೋಡು ‘ ಎಂದು ಹೇಳುತ್ತಿರುವಾಗಲೇ ಅವರು ಶ್ರೀಪಾದರ ಕೈಗಳನ್ನು ತೆಗೆದುಕೊಂಡು ನೋಡಿ ಬಹಳ ಆಶ್ಚರ್ಯಪಟ್ಟರು . ನಿಜವಾಗಿಯೂ ಶ್ರೀಪಾದರ ಕೈಗಳಲ್ಲಿ ಬೊಬ್ಬೆಗಳಿವೆ . ವೆಂಕಟಸುಬ್ಬ ಮಾಂಬರವರು ಕೈಗಳಿಗೆ ಬೆಣ್ಣೆ ಹಚ್ಚಿದರು . ಬಿಸಿ ನೀರಿನ ಶಾಖವನ್ನು ಕೂಡ ಕೊಟ್ಟರು . ವಾಸ್ತವವಾಗಿ ಕಪಟನಾಟಕ ಸೂತ್ರಧಾರಿಯ ಲೀಲಾವಿನೋದಗಳಿಗೆ ಕೊನೆಯೆಲ್ಲಿ ?
ರಾಜಮಾಂಬ , “ ಬಂಗಾರು ಕನ್ನಾ ! ನಿನಗಿಷ್ಟವಾದ ಹಲ್ವ ಮಾಡಿ ನಿನ್ನ ಬೆಳ್ಳಿ ಬಟ್ಟಲಿನಲ್ಲಿ ಹಾಕಿ ತಂದಿದ್ದೇನೆ . ಹತ್ತಿರ ಬಾ ! ಮಗು ! ನನ್ನ ಕೈಗಳಿಂದ ಸ್ವಲ್ಪ ತಿನ್ನಿಸುತ್ತೇನೆ ” ಎಂದು ಹೇಳಲು , ಶ್ರೀಪಾದರಿಗೆ ಅವರು ಮೂರು ಜನ ಅಜ್ಜಿಯರೂ ಸೇರಿ ಹಲ್ವವನ್ನು ತಿನ್ನಿಸಿದರು . ಆ ಹಲ್ವ ಎಷ್ಟು ತೆಗೆದರೂ ಕಡಿಮೆಯಾಗುತ್ತಲೇ ಇಲ್ಲ ! ಶ್ರೀಪಾದರು ಬಹಳ ಹೊತ್ತು ಈ ವಿನೋದವನ್ನು ನಡೆಸಿದರು .
ಶ್ರೀಪಾದರು , ‘ ಮೂರು ಜನ ಅಜ್ಜಿಯರಿಗೂ ನನ್ನ ಮೇಲೆ ಪ್ರೇಮವಿದ್ದರೆ ಇರಲಿ ! ಇಷ್ಟು ಹಲ್ವವನ್ನು ಒಬ್ಬನೇ ತಿಂದರೆ ರೋಗ ಬರುವುದಿಲ್ಲವೇ ? ನೀವು ಮಾಡುತ್ತಿರುವ ಈ ಕೆಲಸ ಧರ್ಮ ಸಮ್ಮತವೇನಾ ? ‘ ಎಂದು ಪ್ರಶ್ನಿಸಿ , ತಮ್ಮ ಅಣ್ಣಂದಿರಿಗೆ , ತಂಗಿಯರಿಗೆ , ತಂಗಿಯರ ಗಂಡಂದಿರಿಗೆ ತಾವೇ ತಮ್ಮ ಕೈಗಳಿಂದಲೇ ತಿನ್ನಿಸಿದರು . ಆ ಬಂದವರಲ್ಲಿ ರೈತ ವೆಂಕಯ್ಯನೂ ಇದ್ದನು . ಆತನ ಮನೆಯಲ್ಲೇ ಶ್ರೀಪಾದರು ದತ್ತದೀಕ್ಷೆಯನ್ನು ಕೊಟ್ಟದ್ದು ವೆಂಕಯ್ಯನಿಗೆ ಕೂಡಾ ತನ್ನ ಕೈಯಿಂದಲೇ ಹಲ್ಲಾ ಕೊಟ್ಟು ಕುದುರೆಗಾಡಿ ಹೊಡೆಯುವವರಿಗೆ , ಕುದುರೆಗಳಿಗೆ , ಉಳಿದವರಿಗೆಲ್ಲರಿಗೂ ಕೊಡಲು ಹೇಳಿದರು . ಆ ಬೆಳ್ಳಿ ಬಟ್ಟಲನ್ನು ವೆಂಕಯ್ಯನಿಗೆ ಬಹುಮಾನವಾಗಿ ಕೊಟ್ಟರು .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 268
ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಬಲ್ಲವರಾರು ,
ಹುತ್ತವನೆ ಅಗೆದೊಡೆ ನೋಡಿದೊಡೆ ಅಲ್ಲದೆ ?
ಮಾನವನ ಮನವಾರು ಅಗೆಯಲಾರರು ಒಳಗೆ
ನೋಡಲಾರರು ಏನು
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share