ಎಂಪಿ ಅಡುಗೆಮನೆ : ?☘ಪುದೀನಾ – ಅವರೆಕಾಳು ಪಲಾವ್ ☘?

726
Share

?☘ಪುದೀನಾ – ಅವರೆಕಾಳು ಪಲಾವ್ ☘?

ಶ್ರೀ ಪ್ರಭಾಕರ ಮೂರ್ತಿ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಮೈಸೂರು .

ಇದೇನು ಹೊಸ ರುಚಿ ಅಲ್ಲ , ಸರ್ವೇ ಸಾಮಾನ್ಯ ಎಲ್ಲವೂ ಮಾಡುವ ತಿಂಡಿ.
ವಿಶೇಷ ಅಂದರೆ … ಪುದೀನಾ ಸೊಪ್ಪಿನ ಮತ್ತು ಅವರೆಕಾಳಿನ ಉತ್ಕೃಷ್ಟವಾದ ಔಷದೀಯ ಗುಣಗಳನ್ನು ತಿಳಿಸುವುದು .
ಪುದೀನಾ ಹೃದಯ ಮತ್ತು ಚರ್ಮದ ಆರೋಗ್ಯ ವನ್ನು ಕಾಪಾಡಿದರೆ ಅವರೆಕಾಳು ದೇಹದ ಆರೋಗ್ಯಕ್ಕೆ ಅವಶ್ಯಕವಾದ ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ.

ಪಲಾವ್ ಮಾಡುವ ವಿಧಾನ : 1 ಪಾವು ಅಕ್ಕಿಯಿಂದ ಉದುರಾಗಿ ಅನ್ನ ಮಾಡಿ ಆರಲು ಬಿಡಿ … 1 ಪಾವು ಅವರೆಕಾಳನ್ನು ಬೇಯಿಸಿ …. 1 ಕಟ್ಟು ಪುದೀನಾ ಸೊಪ್ಪಿಗೆ 3 ಹಸಿ ಮೆಣಸಿನಕಾಯಿ ಸೇರಿಸಿ ರುಬ್ಬಿ , ಸ್ವಲ್ಪ ಎಣ್ಣೆ ಇಟ್ಟು ಜೀರಿಗೆ ,ಲವಂಗ, ದಾಲ್ಚಿನಿ , ಮರಾಠ ಮೊಗ್ಗು, ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ … ಈ ಮಸಾಲೆಯನ್ನು ಅನ್ನಕ್ಕೆ ಸೇರಿಸಿ ಚುಟುಗಿ ಅರಿಶಿನ ಬೆಂದ ಅವರೆಕಾಳು ರುಚಿಗೆ ಹದವಾಗಿ ಉಪ್ಪು ಸೇರಿಸಿ , ನಿಂಬೆಹುಳಿ ಹಿಂಡಿ ಹಗುರವಾಗಿ ಮಿಕ್ಸ್ ಮಾಡಿ ….ಪಲಾವ್ ರೆಡಿ … ಮೊಸರು ರಾಯಿತ ಒಟ್ಟಿಗೆ ಸವಿಯಿರಿ


Share