ಎಂಪಿ- ಆಧ್ಯಾತ್ಮಿಕ ಅ೦ಗಳ : ಶ್ರೀ ಶ್ರೀಪಾದವಲ್ಲಭ ಚರಿತ್ರೆ ಪುಟ 217

288
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 33
ಪುಟ – 217

ಶ್ರೀಪಾದರ ಆರ್ತತ್ರಾಣ ಪಾರಾಯಣ ತತ್ಯ

ಬೆಳಗಾದ ಮೇಲೆ ಒಬ್ಬ ಬಡಬ್ರಾಹ್ಮಣ ಯಾಚಕನು ನಮ್ಮ ಮನೆಗೆ ಬಂದನು . ನಮ್ಮ ರಮಣಿ ಮನೆಯ ಹೊರಗೆ ಬಂದು ನಮ್ಮ ಮನೆಯಲ್ಲಿ ಭೂತಪ್ರೇತ ಪಿಶಾಚಿಗಳು ತುಂಬಾ ಇವೆಯೆಂದೂ ನಿನಗೆ ಬೇಕಾದರೆ ಅವನ್ನು ಭಿಕ್ಷೆಯಾಗಿ ಸ್ವೀಕರಿಸಬಹುದೆಂದೂ ಹೇಳಿದಳು . ಆ ಬ್ರಾಹ್ಮಣನು ಅದಕ್ಕೆ ಒಪ್ಪಿಕೊಂಡನು .
ಆತನ ವದನಾರವಿಂದವು ಪ್ರಶಾಂತವಾಗಿ ಉಜ್ವಲವಾಗಿ ಇತ್ತು . ಇಷ್ಟರಲ್ಲಿ ನಮ್ಮ ಸೋದರಮಾವ ಮನೆಗೆ ಬಂದರು . “ ಸ್ವಾಮಿ | ನಮ್ಮ ಮನೆಯ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ . ನಿಮಗೆ ಬೇಕಾದರೆ ಇಂಥಾ ಪರಿಸ್ಥಿತಿಯನ್ನು ಸೃಷ್ಟಿಸುತ್ತಿರುವ ದುಷ್ಪ ಶಕ್ತಿಗಳನ್ನು ದಾನವಾಗಿ ಸ್ವೀಕರಿಸಬಹುದು ‘ ಎಂದು ಹೇಳಿದನು . ಆಮೇಲೆ ಸೋದರತ್ತೆ ಬಂದಳು . ಭಿಕ್ಷೆ ನೀಡುವುದಕ್ಕೆ ಮನೆಯಲ್ಲಿ ಏನೂ ಇಲ್ಲ , ಮನೆಯಲ್ಲಿರುವ ದರಿದ್ರತೆಯನ್ನು ನೀನು ಬೇಕಾದರೆ ಸ್ವೀಕರಿಸಬಹುದು ಎಂದಳು . ನಾನು ಕೂಡ ಮನೆಯಲ್ಲಿದ್ದೆ. ” ಸ್ವಾಮಿ ! ನನ್ನ ಹತ್ತಿರ ತಾತ ಮುತ್ತಾತರ ಕಾಲದಿಂದ ಬಂದಿರುವ ಒಂದು ಬೆಳ್ಳಿ ತಾಯತವಿದೆ . ನಿಮಗೆ ಒಪ್ಪಿಗೆಯಾದರೆ ನನ್ನಿಂದ ಅದನ್ನು ಭಿಕ್ಷೆಯಾಗಿ ಸ್ವೀಕರಿಸಬಹುದು . ನಾನು ಆ ಬೆಳ್ಳಿಯ ತಾಯಿತವನ್ನು ನಿಮಗೆ ಭಿಕ್ಷೆಯಾಗಿ ಕೊಡುತ್ತೇನೆ ” ಎಂದನು . ಇಷ್ಟರಲ್ಲಿ ಆ ಕಳ್ಳಸಾಧುವು ಆಗ ತಾನೇ ಸ್ಮಶಾನದಿಂದ ಕೆಲವು ಮಾನವ ಕಪಾಲಗಳನ್ನು ತಂದನು . ಅವನು ವ್ಯಂಗ್ಯವಾಗಿ , ‘ ಎಲವೋ ! ನೀನು ಒಪ್ಪಿದರೆ ಈ ಕಪಾಲಗಳನ್ನು ಭಿಕ್ಷೆಯಾಗಿ ಸ್ವೀಕರಿಸಬಹುದು ‘ ಎಂದನು . ಅವನು ಆಗಲಿ ಎಂದನು .
ಅಷ್ಟರಲ್ಲಿ ನಮ್ಮ ಮನೆಯಲ್ಲಿ ಒಂದು ದಿವ್ಯ ಪ್ರಕಾಶವು ಕಾಣಿಸಿಕೊಂಡಿತು . ಬಂದಿದ್ದ ಆ ಬ್ರಾಹ್ಮಣನು ಅದೃಶ್ಯನಾದನು . ಆ ದಿವ್ಯಪ್ರಕಾಶದಿಂದ ಆ ಕಳ್ಳ ಸಾಧುವಿಗೆ ದೇಹವೆಲ್ಲ ಉರಿಯತೊಡಗಿತು . ಆ ಪ್ರಕಾಶದಿಂದ ಒಂದು ಕಿರಣವು ನಮ್ಮ ರಮಣಿಯನ್ನು ಪ್ರವೇಶಿಸಿತು . ಅವಳು ಮೊದಲಿನಂತೆ ಸ್ವಸ್ಥವಾದಳು . ನಮ್ಮ ಸೋದರತ್ತೆಗೆ ಪಾರ್ಶ್ವವಾಯು ಬಂದು ಮಾತು ನಿಂತುಹೋಯಿತು . ನಮ್ಮ ಸೋದರಮಾವನಿಗೆ ವಿಪರೀತವಾದ ನಡುಕ ಹುಟ್ಟಿತು . ನನಗೆ ಅಪಾರವಾದ ಧೈರ್ಯವು ಬಂದಿತು . ನನ್ನ ಶರೀರದಲ್ಲಿ ಯಾವುದೋ ಒಂದು ನೂತನ ಶಕ್ತಿ ಪ್ರವೇಶಿಸಿ ನಾನು ಬಹಳ ಬಲಶಾಲಿ ಎಂದು ಅನಿಸತೊಡಗಿತು . ಮಾಂತ್ರಿಕನಿಗೆ ಬಾಯಿಂದ ರಕ್ತವು ಧಾರೆಯಾಗಿ ಸೋರಿಹೋಗಿ ಅವನಲ್ಲಿದ್ದ ಸಕಲ ಶಕ್ತಿಗಳೂ ಉಡುಗಿಹೋದವು .
ಆ ದಿವ್ಯಪ್ರಕಾಶವು ಮಾನವ ರೂಪವನ್ನು ತಾಳಿತು . ಆ ದಿವ್ಯ ಭವ್ಯ ಸ್ವರೂಪವು ಆರ್ತತ್ರಾಣ ಪರಾಯಣರೂ , ಸಮಸ್ತ ದೇವಿ ದೇವತಾ ಸ್ವರೂಪರೂ ಆದ ಮಧ್ಯಾಂತರಹಿತರೂ ಆದ ಶ್ರೀಪಾದ ಶ್ರೀವಲ್ಲಭರದು .
ಶ್ರೀಪಾದರು ಹೀಗೆ ಹೇಳಿದರು . ‘ ವಾಸ್ತವವಾಗಿ ಕಾಳಿಮಾತೆಯು ವಿಧ್ವಂಸ ಮಾಡುವುದು ಸಾಧಕನಲ್ಲಿ ಅಡಗಿಕೊಂಡಿರುವ ಕಾಮಕ್ರೋಧಾದಿ ರಾಕ್ಷಸ ಶಕ್ತಿಗಳನ್ನು ಅವಳಿಗೆ ಕೋಳಿಗಳು ಮೇಕೆಗಳು ಮೊದಲಾದವು ಬೇಕಿಲ್ಲ , ಪ್ರಾಣಮಯ ಜಗತ್ತಿಗೆ ಸೇರಿದ್ದ ರಾಕ್ಷಸ ಶಕ್ತಿಗಳು ಕಾಳಿಕಾ ರೂಪವನ್ನು ಧರಿಸಿ ವಿಧವಿಧವಾದ ಬಲಿದಾನಗಳನ್ನು ಕೋರುತ್ತಿದ್ದವು . ನಿಜವಾದ ಕಾಳಿಮಾತೆಗೆ ಪ್ರೇಮ , ಶಾಂತಿ , ದಯೆ ಮೊದಲಾದ ಶುಭ ಲಕ್ಷಣಗಳು ಇರುತ್ತವೆ . ಪ್ರಾಣಮಯ ಜಗತ್ತಿಗೆ ಸೇರಿದ ರಾಕ್ಷಸ ಶಕ್ತಿಗಳು , ಅಸುರೀ ಶಕ್ತಿಗಳು , ಭೂತ ಪ್ರೇತಾದಿಗಳೂ ನಾವು ಇಂಥಿಂಥಾ ದೇವತೆಗಳು ಎಂದು ಹೇಳಿಕೊಂಡು ಕ್ಷುದ್ರವಿದ್ಯೆಗಳನ್ನು ಪ್ರದರ್ಶಿಸುತ್ತವೆ . ಕ್ಷುದ್ರ ಮಾಂತ್ರಿಕರು ಅವನ್ನು ಹಿಂಸಿಸುತ್ತಾ ಲೋಕಕ್ಕೆ ಎಷ್ಟೋ ಉಪದ್ರವಗಳನ್ನು ಉಂಟು ಮಾಡುತ್ತಿದ್ದಾರೆ . ಪ್ರಾಣಮಯ ಜಗತ್ತಿಗೆ ಸೇರಿದ ವಿಧವಿಧವಾದ ಪ್ರೇತಾತ್ಮಗಳಿಗೆ ಕೂಡ ದೇವತಾ ಶರೀರಗಳನ್ನು ಧರಿಸುವ ಶಕ್ತಿಯಿದೆ ಎಂದು ತಿಳಿಯಬೇಕು . ಆದರೆ ನಿಜವಾದ ಆಯಾ ದೇವತಾ ರೂಪಗಳಲ್ಲಿ ದೈವಶಕ್ತಿಗಳು ಮಾತ್ರ ಇರುತ್ತವೆ .
ಧರ್ಮವು ಕ್ಷೀಣಿಸಿದಾಗ ನಾನು ಅವತರಿಸುವೆನೆಂದೂ ಅಭಯವು ಕೊಡಲ್ಪಟ್ಟಿದೆ . ಈ ಅಭಯಕ್ಕನುಸಾರವಾಗಿಯೇ ಈ ಶ್ರೀಪಾದ ಶ್ರೀವಲ್ಲಭ ಅವತಾರವು ಬಂದಿದೆ . ಪ್ರೇಮ , ಶಾಂತಿ , ಕರುಣೆ ಎನ್ನುವ ಅನಂತವಾದ ಶಕ್ತಿಗಳಿಂದ ಕೂಡಿರುವುದೇ ಈ ಅವತಾರವು ” .
ನಮ್ಮ ಮನೆಯನ್ನೆಲ್ಲಾ ಶುದ್ಧಿ ಮಾಡಿದೆವು . ಕಳ್ಳ ಸಾಧುವನ್ನು ಹೊರಗಟ್ಟಿದೆವು . ನಮ್ಮ ಸೋದರತ್ತೆಗೆ ಶ್ರೀಪಾದರ ಅನುಗ್ರಹದಿಂದ ಪಾರ್ಶ್ವವಾಯು ಕಡಿಮೆಯಾಯಿತು .
ಶ್ರೀಪಾದರು ಸ್ವತಃ ತಮ್ಮ ದಿವ್ಯ ಹಸ್ತದಿಂದ ರಮಣಿಯನ್ನು ಆಶೀರ್ವದಿಸಿದರು . ಆಗ ಅವರಿಗೆ 12 ವರ್ಷ ವಯಸ್ಸು ಆ ಸಮಯದಲ್ಲಿ ಅವರು ಪೀಠಿಕಾಪುರದಲ್ಲಿಯೇ ಇದ್ದರು . ಲೀಲಾ ಶರೀರದಲ್ಲಿ ಈ ಪಂಚದೇವ ಪಹಾಡ್‌ನಲ್ಲಿದ್ದರು . ಆ ದಿನ ನಮಗೆ ಅವರು ಪ್ರಸಾದಿಸಿದ ಅಕ್ಷತೆಯ ಕಾಳುಗಳು ಇವುಗಳೇ ! ಕಾಲಾಂತರದಲ್ಲಿ , ಧರ್ಮಗುಪ್ತ ಶಂಕರಭಟ್ಟ ಎನ್ನುವವರು ಬರುವರೆಂದೂ ಅವರಿಗೆ ಕೂಡ ಅಕ್ಷತೆಯ ಕಾಳುಗಳನ್ನು ಕೊಡು ಎಂದೂ ಆದೇಶಿಸಿದರು , ಆಹಾ ! ಎಂತಹ ಲೀಲಾಮಯ ಅವತಾರ ಸ್ವರೂಪ !
॥ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ॥
( ಮುಂದುವರೆಯುವುದು )
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 218
ಮನುಜನಿಗೆ ಆರು ಸೆನ್ಸಂತೆ, ಆತ ಮೇಧಾವಿಯಂತೆ,
ವಿಜ್ಞಾನಿಯಂತೆ.
ಆದರೆ ತಾ ಹುಟ್ಟಿದ ಮೊದಲ ವರ್ಷ ಏನೇನು ತಿಳಿಯದಂತೆ.
ಪ್ರಾಣಿಗಳಿಗೋ, ಮೂರು ನಾಲ್ಕು ಸೆನ್ಸುಗಳಂತೆ.
ಹುಟ್ಟಿದಾಗಲೆ ನಿಂತು, ಗುರುತಿಸಿ ತನ್ನ ತಾಯಿಯೆಡೆಗೆ,
ಓಡುವ ಮರಿ ! ಎಂಥ ಅಚ್ಚರಿ !
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share