ಕೋವಿಡ್ 4 ನೇ ಅಲೆ ಎಚ್ಚರ !

220
Share

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಆಗುತ್ತಿದೆ ಕೋವಿಡ್ ಪ್ರಕರಣಗಳು.
ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಎಲ್ಲೆಡೆ ನಾಲ್ಕನೇ ಅಲೆ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ನಾಲ್ಕೈದು ವಾರಗಳಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಲಿದೆ ಎಂದು ಟಾಸ್ಕ್ ಫೋರ್ಸ್ ಸಮಿತಿ ತಿಳಿಸುತ್ತಿದೆ.
ದೆಹಲಿ ಮಹಾರಾಷ್ಟ್ರ ಹರ್ಯಾಣ ಮುಂತಾದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು ಈಗ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬ ಆತಂಕಕಾರಿ ಬೆಳವಣಿಗೆ ಕಾಣಿಸುತ್ತಿದೆ.
ವೈಜ್ಞಾನಿಕ ಲೋಕದಲ್ಲಿ
A2.10,BA2.10 BA2.12 ಎಂದು ನಾನಾ ರೀತಿಯಲ್ಲಿ ಕೋವಿಡ್ ರೂಪಾಂತರಿ ವೈರಸ್ ಗಳು ಗುರುತಿಸುತ್ತಿದ್ದು ಸಾಮಾನ್ಯರಿಗೆ ಇದು ಬೇಗ ಅರ್ಥವಾಗಲಾರದು ಆದರೆ ಇಷ್ಟು ಮಾತ್ರ ಹೇಳಬಹುದು ಬೇರೆ ಬೇರೆ ರೀತಿಯಲ್ಲಿ ಕೋವಿಡ್ ವೈರಸ್ಸುಗಳು ನಮ್ಮೊಂದಿಗೆ ಚೆಲ್ಲಾಟವಾಡುತ್ತಿದೆ.
ಹೃದಯ ಸಂಬಂಧಿ ಕಾಯಿಲೆ ಪೀಡಿತರು ಕ್ಯಾನ್ಸರ್ ರೋಗಿಗಳು ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ಗೆ ಒಳಗಾಗುತ್ತಿರುವವರು ತೀವ್ರ ನಿಶ್ಶಕ್ತಿ ಹೊಂದಿರುವಂಥವರು ಅಸ್ತಮಾ ರೋಗಿಗಳ ದೇಹ ಮತ್ತು ಆರೋಗ್ಯ ದುರ್ಬಲವಾಗಿರುವುದರಿಂದ ವೈರಸ್ಗಳು ತೀವ್ರವಾಗಿ ದಾಳಿಯಿಡುವ ಸಾಧ್ಯತೆ ಇದೆ ಆದ್ದರಿಂದ ಕ್ಷಣಕ್ಷಣಕ್ಕೂ ಎಚ್ಚರವಹಿಸುವುದು ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಅಥವಾ ಸ್ಯಾನಿಟೈಸರ್ ಬಳಸುವುದು ಬಹಳ ಕಡಿಮೆ ಗೊಂಡಿದ್ದು ಯಾವುದೇ ಸಭೆ ಸಮಾರಂಭಗಳಲ್ಲಿ ಜನ ಎಚ್ಚರ ವಹಿಸದೇ ಇರುವುದು ಕಂಡುಬರುತ್ತಿದೆ ಇದು ಎಂದೆಂದಿಗೂ ಅಪಾಯಕಾರಿ.
ನಾವು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಗೆ ಹೆಚ್ಚಿನ ಗಮನಕೊಟ್ಟು ನಿಯಮಾವಳಿಗಳನ್ನು ಪಾಲಿಸಲೇಬೇಕು.
ಕೈಮೀರಿ ಹೋಗುವ ಪರಿಸ್ಥಿತಿಯಲ್ಲಿ ಸರ್ಕಾರ ಹೇರುವ ನಿಬಂಧನೆಗಳಿಗೆ ಮುಂಚೆ ನಾವೆ ಎಚ್ಚೆತ್ತುಕೊಂಡರೆ ಒಳ್ಳೆಯದಲ್ಲವೇ?.

Share